ನಿರಂಜನಾನಂದಪುರಿ ಸ್ವಾಮೀಜಿ ಅಮಿತ್ ಶಾ ರನ್ನು ಯಾಕೆ ಭೇಟಿಯಾಗಿಲ್ಲ??

ಹಾವೇರಿ: ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಕಾಗಿನೆಲೆಯ ಕನಕಗುರು ಪೀಠಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮೀತ್ ಶಾ ಭೇಟಿ ನೀಡಿದ್ರು.

ಮಠದಲ್ಲಿದ್ದ ಕನಕಗುರು ಪೀಠದ ಶಾಖಾ ಮಠಗಳ ನಾಲ್ವರು ಸ್ವಾಮೀಜಿಗಳ ಜೊತೆ ಕನಕದಾಸರು ಮತ್ತು ಬಿಜೆಪಿ ಸರಕಾರದ ಅವಧಿಯಲ್ಲಿ ಮಠಕ್ಕೆ ನೀಡಿದ ಕೊಡುಗೆಗಳ ಕುರಿತು ಮಾಹಿತಿ ಪಡೆದುಕೊಂಡ್ರು. ನಂತರ ಅಮೀತ್ ಶಾಗೆ ಸ್ವಾಮೀಜಿಗಳು ಕಂಬಳಿ ಹಾಗೂ ಶಾಲು ಹೊದಿಸಿ, ಯಾಲಕ್ಕಿ ಮಾಲೆ ಹಾಕಿ ಸನ್ಮಾನಿಸಿದ್ರು.

ಅಮೀತ್ ಶಾಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಸೇರಿದಂತೆ ಕೆಲವು ಬಿಜೆಪಿ ಮುಖಂಡರು ಸಾಥ್ ನೀಡಿದ್ರು.

ಆದ್ರೆ ಶಾ ಭೇಟಿ ವೇಳೆ ಮಠದ ಹಿರಿಯ ಸ್ವಾಮೀಜಿ ನಿರಂಜನಾನಂದಪುರಿ ಸ್ವಾಮೀಜಿ ಮಠದಲ್ಲಿ ಇರ್ಲಿಲ್ಲ. ನಿರಂಜನಾನಂದಪುರಿ ಸ್ವಾಮೀಜಿ ಪೂರ್ವ ಯೋಜಿತ ಕಾರ್ಯಕ್ರಮಗಳನಲ ಹಿನ್ನೆಲೆಯಲ್ಲಿ ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಬೆಳ್ಳೂಡಿ ಮಠದಲ್ಲಿದ್ದಾರೆ ಎಂದ್ರು.

ಆದರೆ ಸ್ವಾಮೀಜಿಯವರು ರಾಹುಲ್ ಗಾಂಧಿ ಯನ್ನು ಭೇಟಿ ಮಾಡಲು ಹೋಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇದು ಎಷ್ಟು ಸತ್ಯ ಎಂದು ಕಾದು ನೋಡಬೇಕು.

ಮಠದ ಭೇಟಿ ಬಳಿಕ ಅಮೀತ್ ಶಾ ಹಿಂದುಳಿದ ವರ್ಗಗಳ ಸಮಾವೇಶದಲ್ಲಿ ಭಾಗಿಯಾಗಿದ್ದರು.

Leave a Reply