ರಾಹುಲ್ ಗಾಂಧಿ ವಚನ ಬಳಸಿದಕ್ಕೆ ಚುನಾವಣಾ ಆಯೋಗದ ನೋಟಿಸ್.

ಮಂಗಳೂರು: ಯಕ್ಷಗಾನದಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯ ಇವನರ್ವ. ಇವ ನಂಬ್ವ..ಡೈಲಾಗ್ ಹೇಳಿದ ಕಲಾವಿದನ ವಿರುದ್ದ ಚುನಾವಣಾ ಆಯೋಗ ನೋಟಿಸ್ ಜಾರಿಗೊಳಿಸಿದೆ.

ಕಟೀಲು ಮೇಳದ ಹಾಸ್ಯ ಕಲಾವಿದ ಪೂರ್ಣೇಶ್ ಆಚಾರ್ ಯಕ್ಷಗಾನದ ಸಂಭಾಷಣೆ ಸಂಧರ್ಭದಲ್ಲಿ ಇವನರ್ವ… ಇವನರ್ವ…. ಇವ ನಂಬ್ವ…ಇವ ನಂಬ್ವ…ಎಂದು ರಾಹುಲ್ ಗಾಂಧಿಯನ್ನು ಅನುಕರಣೆ ಮಾಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು.

ಇದಾದ ಕೆಲವೇ ದಿನಗಳಲ್ಲಿ ಬೆಂಗಳೂರು ಮತ್ತು ಮಂಗಳೂರು ಚುನಾವಣೆ ಆಯೋಗದ ಕಚೇರಿಯಿಂದ ಕಟೀಲು ಮೇಳದ ಮುಖ್ಯಸ್ಥರಿಗೆ ಕರೆ ಬಂದಿದ್ದು,‌ ಪ್ರಕರಣದ ಬಗ್ಗೆ ವಿಚಾರಿಸಿಕೊಂಡಿದ್ದಾರೆ. ಬಳಿಕ ಮೂಡಬಿದ್ರೆ ಚುನಾವಣಾ ಕಚೇರಿಯಿಂದ ನೋಟಿಸ್ ಹೊರಡಿಸಿದ್ದು, ಯಕ್ಷಗಾನ ಪ್ರದರ್ಶನವನ್ನು ನಿಲ್ಲಿಸಬೇಕು ಮತ್ತು ಕಲಾವಿದನನ್ನು ಮೇಳದಿಂದ ತೆಗೆಯಬೇಕೆಂದು ಸೂಚನೆ ನೀಡಿದ್ದಾರೆ.

ಆದರೆ, ಚುನಾವಣಾ ಆಯೋಗದ ಕ್ರಮಕ್ಕೆ ಕಲಾವಿದರು ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ. ಕೇರಳ ರಾಜ್ಯದ ವೈರಲ್ ಆಗಿರೋ ವಿಡಿಯೋ, ಕಾಸರಗೋಡುವಿನ ‌ಮಾನ್ಯದಲ್ಲಿ ನಡೆದ ಪ್ರದರ್ಶನದ ತುಣುಕಾಗಿದ್ದು, ಅಲ್ಲಿ ನೀತಿ ಸಂಹಿತೆ ಅನ್ವಯಿಸುವುದಿಲ್ಲಮ ಅಲ್ಲದೇ, ಇವನರ್ವ ಪದಕ್ಕೂ ರಾಜಕೀಯಗೂ ಯಾವುದೇ ಸಂಬಂಧ ಇಲ್ಲ..ಹಾಗಾಗಿ ಕಲಾವಿದರ ಮೇಲೆ ಚುನಾವಣಾ ಆಯೋಗ ಪ್ರಹಾರ ನಡೆಸಲು ಮುಂದಾಗಿರೋದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Leave a Reply