ಹಾಸನ ಜಿಲ್ಲೆಯ ಬಿಜೆಪಿ ಆಕಾಂಷಿಗಳು ಅತಂತ್ರ.

ಹಾಸನ: ಹಾಸನ ಜಿಲ್ಲೆಯ ಬಿಜೆಪಿ ಉಸ್ತುವಾರಿ ವಹಿಸಿಕೊಂಡಿದ್ದ ಮಾಜಿ ಸಚಿವ ವಿ,ಸೋಮಣ್ಣರಿಗೆ ಟಿಕೇಟ್ ಕೈತಪ್ಪಿದ್ದಕ್ಕೆ ಜಿಲ್ಲೆಯ ಬಿಜೆಪಿ ಟಿಕೇಟ್ ಆಕಾಂಕ್ಷಿಗಳು ಅತಂತ್ರಗಿದ್ದಾರೆ.

ಹಾಸನ ಜಿಲ್ಲೆಯಲ್ಲಿ ಮಾಜಿ ಸಚಿವ ವಿ,ಸೋಮಣ್ಣರವರು ಬಿಜೆಪಿ ಕಾರ್ಯಕರ್ತರಲ್ಲಿ ಉತ್ಸಾಹ ಮೂಡಿಸಿದ್ದರು, ಆದ್ರೆ ಸೋಮಣ್ಣ ಬೆಂಬಲಿಗರಾದ ಪ್ರಬಲ ಟಿಕೇಟ್ ಆಕಾಂಕ್ಷಿಗಳು ಅತಂತ್ರರಾಗಿದ್ದಾರೆ. ಹಾಸನ ಕ್ಷೇತ್ರದ ಪ್ರೀತಮ್ ಗೌಡ, ಸಕಲೇಶಪುರದ ನಾರ್ವೆ ಸೋಮಶೇಖರ್, ಅರಕಲಗೂಡಿನ ಯೋಗಾರಮೇಶ್ ಮತ್ತು ಚನ್ನರಾಯಪಟ್ಟಣದ ಶಿವನಂಜೇಗೌಡರೆಲ್ಲರೂ ಅತಂತ್ರರಾಗಿದ್ದಾರೆ.

ಇವರೆಲ್ಲರೂ ಅತಂತ್ರರಾಗಿದ್ದು ಸೋಮಣ್ಣರಿಗೇ ಟಿಕೇಟ್ ಇಲ್ಲದ ಕಾರಣ ಇವರೆಲ್ಲರಿಗೂ ಟಿಕೇಟ್ ಕೈತಪ್ಪುವ ಸಾಧ್ಯತೆ ಇದೆ ಎನ್ನಲಾಗಿದೆ.

ಆದ್ರೆ ಉನ್ನತ ಮೂಲಗಳ ಪ್ರಕಾರ ಸೋಮಣ್ಣರ ಪುತ್ರ ಅರುಣ್ ಸೋಮಣ್ಣರಿಗೂ ಅರಸೀಕೆರೆ ಕ್ಷೇತ್ರಕ್ಕೆ ಟಿಕೇಟ್ ತಪ್ಪುವ ಸಾಧ್ಯತೆ ಇದೆ ಎನ್ನಲಾಗಿದೆ.

ಆದ್ರೆ ಸೋಮಣ್ಣರಿಲ್ಲದೇ ಜಿಲ್ಲಾ ಬಿಜೆಪಿ ತಬ್ಬಲಿಯಾಗಿದೆ ಎನ್ನಲಾಗಿದೆ.

Leave a Reply