ಅಚ್ಚರಿ ಬೆಳವಣಿಗೆಯಲ್ಲಿ ಒಂದಾದದ ಜಾರಕಿಹೊಳಿ ಬ್ರದರ್ಸ್

ಬೆಳಗಾವಿ: ಯಮಕನಮರಡಿ ಕ್ಷೇತ್ರದಿಂದ ಅಣ್ಣ ಸತೀಶ್ ಜಾರಕಿಹೊಳಿ ಎದುರು ಬಿಜೆಪಿಯಿಂದ ಸ್ಪರ್ಧಿಸಲು ತಯಾರಿ ನಡೆಸಿದ ಲಖನ್ ಜಾರಕಿಹೊಳಿ ಈಗ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದು, ಕಾಂಗ್ರೆಸ್ ಕಾರ್ಯಕರ್ತರಲ್ಲಿ ಅಚ್ಚರಿ ಮೂಡಿಸಿದ್ದಾರೆ.

ಇಂದು ನಡೆದ ಗೋಕಾಕ್ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿದ್ದ ಲಖನ್ ತಾವು ಬಿಜೆಪಿ ಸೇರುವ ನಿರ್ಧಾರದಿಂದ ಹಿಂದೆ ಸರಿದಿರುವುದಾಗಿ ಸ್ಪಷ್ಟಪಡಿಸಿದರು. ಬಿಜೆಪಿ ಸೇರಲು ಈ ಹಿಂದೆ ಮನಸ್ಸು ಮಾಡಿದ್ದು ನಿಜ. ಆದರೆ, ಕಾಂಗ್ರೆಸ್ ಬಿಟ್ಟುಹೋಗುವ ಮನಸ್ಸಿಲ್ಲ. ಈಗ ಬಿಜೆಪಿಯವರು ಕರೆದು ಸಿಎಂ ಮಾಡುತ್ತೇನೆ ಎಂದರೂ ಹೋಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಇದೇ ವೇಳೆ ಯಮಕನಮರಡಿ ಕ್ಷೇತ್ರದಲ್ಲಿ ಪರಿಸ್ಥಿತಿ ಸರಿ ಮಾಡಿಕೊಳ್ಳುವಂತೆ ಸತೀಶ್ ಜಾರಕಿಹೊಳಿಗೆ ಟಾಂಗ್ ನೀಡಿದ ಅವರು, ಗೋಕಾಕ್ ನಗರದಲ್ಲಿ ರಮೇಶ್ ಜಾರಕಿಹೊಳಿ ಗೆಲುವಿಗೆ ಶ್ರಮಿಸುತ್ತೇನೆ ಎಂದರು.

ಸತೀಶ್ ಜಾರಕಿಹೊಳಿ ವಿರುದ್ಧ ಲಖನ್ ಸ್ಪರ್ಧೆ ನಿಶ್ಚಿತ ಎಂದಿದ್ದ ಲಖನ್ ಏಕಾಏಕಿ ಉಲ್ಟಾ ಹೊಡೆದ ಬಗ್ಗೆ ಚರ್ಚೆಗಳು ಇದೀಗ ಆರಂಭವಾಗಿವೆ. ಚುನಾವಣಾ ಹೊಸ್ತಿಲಲ್ಲಿ ಸಹೋದರರು ಒಂದಾಗುವ ಮೂಲಕ ಮತ್ತೊಮ್ಮೆ ವಿಜಯ ಯಾತ್ರೆಗೆ ತಯಾರಿ ನಡೆಸಿದ್ದಾರೆ.

Leave a Reply