ದೇವೇಗೌಡ್ರ ವಿರುದ್ದ CR’s ಆರೋಪ.

ಮಂಡ್ಯ :ಜೆಡಿಎಸ್ ಪಕ್ಷದ ವರಿಷ್ಠರಾದ ದೇವೇಗೌಡ್ರು ಮತ್ತು ಕುಮಾರಸ್ವಾಮಿ ಯಾವುದೇ ಒಕ್ಕಲಿಗ ನಾಯಕರನ್ನು ಬೆಳೆಯಲು ಬಿಡದೆ ತುಳಿಯುವ ಕೆಲ್ಸ ಮಾಡ್ತಿದ್ದಾರೆಂದು‌ ನಾಗಮಂಗಲ ‌ಮಾಜಿ‌ ಶಾಸಕ ಚಲುವರಾಯಸ್ವಾಮಿ ಗಂಭೀರ ಆರೋಪ‌ ಮಾಡಿದ್ದಾರೆ.

ಮಂಡ್ಯದಲ್ಲಿ‌ ಸಚ್ಚಿದಾನಂದ ಮನೆಯಲ್ಲಿ ಸಂಧಾನದ ಬಳಿಕ ಮಾತನಾಡಿದ ಅವ್ರು ಒಕ್ಕಲಿಗ ನಾಯಕರನ್ನು‌ ತುಳಿಯುವ ಕೆಲ್ಸ ಮಾಡ್ತಿರುವ ದೇವೇಗೌಡ್ರ ಮತ್ತು ಕುಮಾರಸ್ವಾಮಿ ವಿರುದ್ದ ಅಸಮಧಾನ‌ ವ್ಯಕ್ತಪಡಿಸಿದ್ರು.

ದೇವೇಗೌಡ್ರು ಮತ್ತವರ ಕುಟುಂಬದವರು ಇದುವರೆಗೂ ಯಾವುದೇ ಒಕ್ಕಲಿಗ ನಾಯಕನನ್ನು ಬೆಳೆಯಲು ಬಿಟ್ಟಿಲ್ಲ ಅಂದ್ರು.

ಇದೀಗ ಚನ್ನಪಟ್ಟಣ ಕ್ಷೇತ್ರದಲ್ಲಿ ಯೋಗೇಶ್ವರ್ ತುಳಿಯಲು ಕುಮಾರಸ್ವಾಮಿ ಮುಂದಾಗಿದ್ದಾರೆ. ರಾಮನಗರ ಮತ್ತು ಚೆನ್ನಪಟ್ಟಣ ಎರಡು ಕ್ಷೇತ್ರದಲ್ಲಿ ನಿಂತು ಕುಮಾರಸ್ವಾಮಿ ಇದನ್ನೆ ಮಾಡಲು ಹೊರಟಿದ್ದಾರೆ ಎಂದ್ರು. ಈ ಮೂಲಕ ಜಿಲ್ಲೆಯ ಒಕ್ಕಲಿಗ ಜನ್ರು ಈಗಲಾದ್ರು ಇದರ ಮರ್ಮ ಅರಿತು ಮತ ಚಲಾಯಿಸುವಂತೆ ಕಾರ್ಯಕರ್ತರಿಗೆ ಮನವಿ ಮಾಡಿದ್ರು.

Leave a Reply