ಕಾಮನ್‌ವೆಲ್ತ್ ಕ್ರೀಡಾಕೂಟ – ಉಪಾಂತ್ಯ ಘಟ್ಟ ಖಚಿತಪಡಿಸಿಕೊಂಡ ಪುರುಷರ ಹಾಕಿ ತಂಡ

ಮಲೇಷ್ಯಾ ತಂಡವನ್ನು 2-1 ಗೋಲುಗಳ ಅಂತರದಲ್ಲಿ ಮಣಿಸಿದ ಭಾರತ, ಕಾಮನ್‌ವೆಲ್ತ್‌ ಕ್ರೀಡಾಕೂಟದ ಪುರುಷರ ಹಾಕಿ ಶಿಸ್ತಿನಲ್ಲಿ ಉಪಾಂತ್ಯ ಘಟ್ಟ ಖಚಿತಪಡಿಸಿಕೊಂಡಿದೆ. ಪಾಕಿಸ್ತಾನದೊದಿಗೆ ನಡೆದ ಬಿ ಗುಂಪಿನ ಆರಂಭಿಕ ಪಂದ್ಯದಲ್ಲಿ 2-2ರ ಡ್ರಾ ಸಮಬಲ ಸಾಧಿಸಿದ ಬಳಿಕ ವೇಲ್ಸ್‌ ತಂಡವನ್ನು 4-3 ಗೋಲುಗಳ ಅಂತರದಲ್ಲಿ ಮಣಿಸಿದ ಭಾರತ ಇಂದಿನ ಫಲಿತಾಂಶದೊಂದಿಗೆ ಉಪಾಂತ್ಯಕ್ಕೆ ಪ್ರವೇಶ ಖಾತ್ರಿ ಪಡಿಸಿಕೊಂಡಿದೆ. ಗುಂಪಿನಲ್ಲಿ ಇಂಗ್ಲೆಂಡ್‌ ವಿರುದ್ಧದ ಪಂದ್ಯ ಬಾಕಿ ಇದೆ. ಭಾರತ, 2014ರ ಕೂಟದಲ್ಲಿ ಬೆಳ್ಳಿ ಪದಕ ಜಯಿಸಿತ್ತು.

ಪಂದ್ಯ ಆರಂಭಗೊಂಡ ಮೂರನೇ ನಿಮಿಷದಲ್ಲೇ ಡ್ರಾಗ್‌ ಫ್ಲಿಕ್‌ ಮೂಲಕ ಗೋಲು ಗಳಿಸಿದ ಹರ್ಮನ್‌ಪ್ರೀತ್‌, ಭಾರತಕ್ಕೆ ಮುನ್ನಡೆ ದೊರಕಿಸಿಕೊಟ್ಟರು. ಆದರೆ ಎರಡನೇ ಕ್ವಾರ್ಟ್‌ರ್‌ನಲ್ಲಿ, ಮಲೇಷ್ಯಾದ ಫೈಝಲ್‌ ಸಾರಿ ಗಳಿಸಿದ ಫೀಲ್ಡ್‌ ಗೋಲು, ಸ್ಕೋರ್‌ಅನ್ನು 1-1ಕ್ಕೆ ತಂಡು ನಿಲ್ಲಿಸಿತು. 43ನೇ ನಿಮಿಷದಲ್ಲಿ ಹರ್ಮನ್ ಪ್ರೀತ್‌, ಸಿಕ್ಕ ಪೆನಾಲ್ಟಿ ಕಾರ್ನರ್‌ ಅವಕಾಶವನ್ನು ಗೋಲಾಗಿ ಪರರಿವರ್ತಿಸುವ ಮೂಲಕ ಭಾರತಕ್ಕೆ ಗೆಲುವಿನ ಸ್ಪರ್ಷ ನೀಡಿದರು. ಪಂದ್ಯದುದ್ದಕ್ಕೂ ಮಿಡ್‌ಫೀಲ್ಡರ್‌ಗಳು ಅತ್ಯತ್ತಮ ಸಂಘಟಿತ ಆಟ ಪ್ರದರ್ಶಿಸಿದರೆ, ಫಾರ್ವರ್ಡ್‌ ಆಟಗಾರರು ಇದನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲ. ಸಿಕ್ಕ ಏಳು ಪೆನಾಲ್ಟಿ ಕಾರ್ನರ್‌ಗಳಲ್ಲಿ ಕೇವಲ ಎರಡನ್ನು ಮಾತ್ರವೇ ಬಳಸಿಕೊಂಡರು. ಇದೇ ವೇಳೆ, ಪುರುಷರ 46-49ಕೆಜಿ ಬಾಕ್ಸಿಂಗ್‌ ವಿಭಾಗದಲ್ಲಿ ಸ್ಕಾಟ್ಲೆಂಡ್‌ನ ಅಕೀಲ್‌ ಅಹಮದ್‌ರನ್ನು ಮಣಿಸಿದ ಭಾರತದ ಅಮಿತ್‌ ಫಂಗಲ್‌ ಉಪಾಂತ್ಯ ಪ್ರವೇಶಿಸಿದ್ದಾರೆ.

ಹನ್ನೊಂದು ಕಾಮನ್ವೆಲ್ತ್‌ ಪದಕಗಳ ವಿಜೇತ ಗಗನ್‌ ನರಾಂಗ್‌, 50ಮೀಟರ್‌ ರೈಫಲ್‌ ವಿಭಾಗದ ಪ್ರಾಥಮಿಕ ಸುತ್ತಿನಲ್ಲಿ 617 ಅಂಕಗಳಿಸಿ, ಫೈನಲ್‌ ತಲುಪಿದ್ದರು. ಆದರೆ ಎಂಟು ಮಂದಿ ಇದ್ದ ಅಂತಿಮ ಸುತ್ತಿನಲ್ಲಿ ಗಗನ್‌, ಹೊರಬಿದ್ದ ಎರಡನೇಯವವರಾಗಿ ನಿರಾಶೆ ಅನುಭವಿಸಿದರು.

Related image

Leave a Reply