ಭಾರತೀಯ ರೈಲ್ವೇಗೆ ಮತ್ತೊಂದು ಬಲ

ಬಿಹಾರದ ಮಧೇಪುರದಲ್ಲಿ ಜೋಡಣೆ ಮಾಡಿರುವ, ದೇಶದ ಮೊದಲ ಭಾರೀ ಸಾಮರ್ಥ್ಯದ ಎಲೆಕ್ಟ್ರಿಕ್‌ ಲೋಕೋಮೋಟಿವ್‌ ಇಂಜಿನ್‌ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಚಾಲನೆ ನೀಡಲಿದ್ದಾರೆ. ರೈಲ್ವೇ ವಲಯದಲ್ಲಿ ವಿದೇಶೀ ನೇರ ಬಂಡವಾಳ ಹೂಡಿಕಗೆ ಉತ್ತೇಕಜನ ನೀಡುವಲ್ಲಿ ಮೊದಲ ಹೆಜ್ಜೆಯಾಗಿ, 2015ರಲ್ಲಿ ಫ್ರಾನ್ಸ್‌ನ ಆಲ್ಸ್ಟಾಮ್‌ ಸಂಸ್ಥೆಯೊಂದಿಗೆ ಜಂಟಿ ಪಾಲುದಾರಿಕೆಗೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಯೋಜನೆ ಮೂಲಕ 1300 ಕೋಟಿ ರುಗಳ ಬಂಡವಾಳ ಹೂಡಿಕೆ ನಿರೀಕ್ಷಿದ್ದು, ಜಂಟಿ ಪಾಲುದಾರಿಕೆಯಲ್ಲಿ ಹೂಡಿಕೆ ಮಾಡಲಾಗುವುದು. ಯೋಜನೆಯಲ್ಲಿ ಶೇರು ಹೊಂದಿರುವ ರೈಲ್ವೇ ಇಲಾಖೆ ಇದೇ ವಿಚಾರವಾಗಿ 100 ಕೋಟಿ ರುಗಳ ಹೂಡಿಕೆ ಮಾಡಲಿದೆ.

ಮುಂದಿನ 11 ವರ್ಷಗಳ ಅವಧಿಯಲ್ಲಿ ದೇಶದಲ್ಲಿರುವ ಪ್ರತಿ ಹಳಿಯನ್ನು ವಿದ್ಯುದೀಕರಿಸುವ ಯತ್ನ ಸಾಗುತ್ತಿದ್ದು, ಇದೇ ವೇಳೆ 800 ಬಾರೀ ಸಾಮರ್ಥ್ಯದ ಲೋಕೋಮೋಟಿವ್‌ ಇಂಜಿನ್‌ಗಳನ್ನು ಉತ್ಪಾದಿಸಲು ಭಾರತೀಯ ರೈಲ್ವೇ ನೋಡುತ್ತಿದೆ. ಈ ಮೂಲಕ 12000 ಎಚ್‌ಪಿ ಸಾಮರ್ಥ್ಯದ ಲೋಕೋಮೋಟಿವ್‌ಗಳನ್ನು ಹೊಂದಿರುವ ರಷ್ಯಾ, ಚೀನಾ, ಜರ್ಮನಿ ಹಾಗು ಸ್ವಿಡನ್‌ಗಳ ಗುಂಪಿಗೆ ಭಾರತ ಸೇರಿಕೊಳ್ಳಲಿದೆ. ಇಲ್ಲಿಯವರೆಗೂ ಭಾರತೀಯ ರೈಲ್ವೇಯಲ್ಲಿದ್ದ ಅತ್ಯಂತ ಬಲಿಷ್ಠ ಲೋಕೋಮೋಟಿವ್‌ ಇಂಜಿನ್‌ 6000 ಎಚ್‌ಪಿ ಸಾಮರ್ಥ್ಯದ್ದಾಗಿತ್ತು. ಈ ಮೂಲಕ ರೈಲುಗಳ ಸಾಮರ್ಥ್ಯ ಹಾಗು ವೇಗ ವೃದ್ಧಿಸಿ ರೈಲ್ವೇ ಮಾರ್ಗಗಳನ್ನು ಸಂಚಾರ ದಟ್ಟಣೆಯನ್ನು ಸಮರ್ಪಕವಾಗಿ ನಿಭಾಯಿಸಬಹುದಾಗಿದೆ.

ಐದು ಲೋಕೋಮೋಟಿವ್‌ಗಳನ್ನು ಮಾಧೇಪುರದಲ್ಲಿ 2019ರ ವರೆಗೂ ಜೋಡಣೆಮಾಡಲಾಗುವುದು. ಬಳಿಕ ಮಿಕ್ಕ 795 ಲೋಕೋಮೋಟಿವ್‌ಗಳನ್ನು ಮೇಕ್‌ ಇನ್‌ ಇಂಡಿಯಾ ಧ್ಯೇಯೋದ್ದೇಶದಲ್ಲಿ ಭಾರತದಲ್ಲೇ ಉತ್ಪಾದನೆ ಮಾಡಲಾಗುವುದು. ಮೊದಲ ಲೋಕೋ ಇಂದು ಹಳಿಕಗೆ ಬರಲಿದ್ದು, ಇದೇ ವಿತ್ತೀಯ ವರ್ಷದಲ್ಲಿ ಇನ್ನೂ ನಾಲ್ಕು ಲೋಕೋಗಳು ಸಂಚಾರ ಆರಂಭಿಸಲಿವೆ. ಮುಂದಿನ ವಿತ್ತೀಯ ವರ್ಷದಲ್ಲಿ(2019-20) 35 ಲೋಕೋಗಳನ್ನು ಉತ್ಪಾದಿಸಲಿದ್ದು, 2020-21ರಲ್ಲಿ 60 ಲೋಕೋಗಳನ್ನು ಉತ್ಪಾದನೆ ಮಾಡಲಾಗುವುದು. ಬಳಿಕ, ವರ್ಷಕ್ಕೆ 100ರಂತೆ ಮಿಕ್ಕ ಲೋಕೋಗಳ ಉತ್ಪಾದನೆ ಆರಂಭಗೊಳ್ಳಲಿದೆ.

ಬಿಹಾರ ರಾಜಧಾನಿ ಪಟನಾದಿಂದ 284ಕಿಮೀ ಈಶಾನ್ಯದಲ್ಲಿರುವ ಮಧೇಪುರದಲ್ಲಿರುವ ಕಾರ್ಖಾನೆಗೆ 2007ರಲ್ಲಿ ಶಿಲಾನ್ಯಾಸ ನೆರವೇರಿಸಲಾಗಿತ್ತು. ಈ ಲೋಕೋಗಳನ್ನು ಕಬ್ಬಿಣ ಹಾಗು ಕಲ್ಲಿದ್ದಲಿನ ಅದಿರನ್ನು ಹೊತ್ತೊಯ್ಯಲು ಬಳಸಲಾಗುವುದು. ಲೋಕೋಗಳು ಸರಕು ಸಾಗಣೆ ರೈಲು ವ್ಯವಸ್ಥೆಗೆ ಹೊಂದಿಕೊಳ್ಳಲಿವೆ. 20,000 ಕೊಟಿ ರುಗಿಂತ ಹೆಚ್ಚಿನ ಖರ್ಚಿನಲ್ಲಿ ನಿರ್ಮಿಸಿರುವ ಕಾರ್ಖಾನೆಯಲ್ಲಿ 35ಕ್ಕೂ ಹೆಚ್ಚು ಇಂಜಿನಿಯರ್‌ಗಳ ತಂಡ ಹಗಲು ರಾತ್ರಿ ಎನ್ನದೇ ಶ್ರಮಿಸಿ ಇಂಜಿನ್‌ಗಳನ್ನು ಜೋಡಣೆ ಮಾಡುತ್ತಿದ್ದಾರೆ.

Image result for indian railway

Leave a Reply