ಪ್ರಜ್ವಲ್ ರೇವಣ್ಣ ಕಾಂಗ್ರೆಸ್ , ಬಿಜೆಪಿ ಇಂದ ಟಿಕೆಟ್ ಆಫರ್ ಮಾಡಿತ್ತೆ?.

ಹಾಸನ :ನನ್ನ ಮಗ ಪ್ರಜ್ವಲ್ ಗೆ ಟಿಕೇಟ್ ಸಿಗದಿದ್ದಕ್ಕೆ ನಿಜಕ್ಕೂ ಬೇಸರ ತರಿಸಿದೆ ಎಂದು ಟಿಕೇಟ್ ಸಿಗದಿದ್ದಕ್ಕೆ ಭವಾನಿ ರೇವಣ್ಣ ಮನನೊಂದಿದ್ದಾರೆ.

ಹಾಸನ ಜಿಲ್ಲೆ ಹೊಳೆನರಸೀಪುರದಲ್ಲಿ ಮಾತನಾಡಿದ ಅವ್ರು ಆರ್ ಆರ್ ನಗರಕ್ಕೆ ಪ್ರಜ್ವಲ್ ಸ್ಪರ್ಧೆಗೆ ಟಿಕೇಟ್ ಗೆ ಅರ್ಜಿ ಸಲ್ಲಿಸಿದ್ದೆವು, ಆದ್ರೆ ಕೊನೆ ಕ್ಷಣದಲ್ಲಿ ದೇವೇಗೌಡರ ತೀರ್ಮಾನಕ್ಕೆ ನಾವು ಬದ್ದರಾಗಿದ್ದೇವೆ ಎಂದರು.

ದೇವೇಗೌಡರೇ ಪ್ರಜ್ವಲ್ ಬೆಳೆಸುವ ಹೊಣೆ ಹೊತ್ತಿದ್ದಾರೆ, ಇನ್ನೂ ಬಿಜೆಪಿ, ಕಾಂಗ್ರೆಸ್ ಯಾವುದೇ ಪಕ್ಷದವರು ಪ್ರಜ್ವಲ್ ಟಿಕೇಟ್ ವಿಚಾರವಾಗಿ ಯಾರೂ ನಮ್ಮನ್ನು ಸಂಪರ್ಕಿಸಿಲ್ಲ ಇದೆಲ್ಲಾ ಸುಳ್ಳು ಎಂದು ಸ್ಪಷ್ಟಪಡಿಸಿದ್ರು.

ಅಲ್ಲದೇ ನಾನು ನಾಳೆಯಿಂದ ಮತ ಪ್ರಚಾರದಲ್ಲಿ ತೊಡಗುತ್ತೇನೆ ಎಂದು ಭವಾನಿ ರೇವಣ್ಣ ಹೇಳಿದ್ದಾರೆ.

Leave a Reply