ಎಸ್. ಎಂ ಕೃಷ್ಣ ಜೆಡಿಸ್ ಸೇರುತ್ತಾರೆ

ಗದಗ:ಈ ಬಾರಿ ಜೆಡಿಎಸ್ ಅಧಿಕಾರಕ್ಕೆ ಬಂದ್ರೆ ರೈತರ ಸಂಪೂರ್ಣ ಸಾಲ ಮನ್ನಾ ಮಾಡೋದಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ. ಅವರಿಂದು ಗದಗ ಜಿಲ್ಲೆ ನರಗುಂದ ಪಟ್ಟಣದಲ್ಲಿ ನಡೆದ ವಿಕಾಸಪರ್ವ ಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದ್ರು.

ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬಂದ್ರೆ ೨೪ ಗಂಟೆಗಳಲ್ಲಿ ಸಂಪೂರ್ಣ ಸಾಲ ಮನ್ನಾ ಮಾಡೋದರ ಜೊತೆ ರೈತರಿಗಾಗಿ ಹೊಸ ಕೃಷಿ ನೀತಿ ರಾಜ್ಯದಲ್ಲಿ ಜಾರಿ ತರೋದಾಗಿ ಹೇಳಿದ್ರು. ಅಷ್ಟೇ ಅಲ್ಲದೆ ಮಳೆಯ ಹಾಗೂ ಜಲಾಶಯದ ನೀರಿನ ಲಭ್ಯತೆ ಆಧಾರದ ಮೇಲೆ ಬೆಳೆಗಳ ಬೆಳೆಯಲು ಸರ್ಕಾರದಿಂದಲೇ ಅನುಕೂಲ ಕಲ್ಪಿಸುವ ವ್ಯವಸ್ಥೆ, ಬೆಳೆ ಬೆಳೆಯುವ ಮುನ್ನವೇ ಬೆಂಬಲ ಬೆಲೆ ಘೋಷಣೆ ಮಾಡೋ ಮೂಲಕ ಕೃಷಿ ಕ್ಷೇತ್ರದಲ್ಲಿ ಇರಬಹುದಾದ ಮಾಫಿಯಾಗಳ ಸಂಪೂರ್ಣ ನಿರ್ನಾಮ ಮಾಡೋದಾಗಿ ಹೇಳಿದ್ರು.

ಇನ್ನು ಕಾರ್ಯಕ್ರಮದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಎಸ್ ಎಂ ಕೃಷ್ಣ ಅವರು ಜೆಡಿಎಸ್ ಪಕ್ಷ ಸೇರೋ ಬಗ್ಗೆ ನನಗೆ ಮಾಹಿತಿಯಿಲ್ಲ, ರಾಜ್ಯದ ಆಡಳಿತದ ದೃಷ್ಠಿಯಿಂದ ಜೆಡಿಎಸ್ ಬೆಂಬಲಿಸಿದ್ರೆ ನಾನು ಅವರ ನಿರ್ಧಾರ ಸ್ವಾಗತಿಸುವೆ. ನನ್ನ ಬಗ್ಗೆ ಅವರಿಗೆ ಮಮತೆ ಇದೆ. ನನ್ನ ಬಗೆಗಿನ ಅವರ ಭಾವನೆ ಜಾರಿಗೆ ತರಲು ಬೆಂಬಲಿಸಿದ್ರೆ ನಾನು ಸ್ವಾಗತಿಸುವೆ. ಆದ್ರೆ ಇದುವರೆಗೂ ಈ ಬಗ್ಗೆ ನನ್ನ ಜೊತೆ ಚರ್ಚೆಯಾಗಿಲ್ಲ ಎಂದ್ರು.

ರಾಜ್ಯದ ಸಮಸ್ಯೆ ಪರಿಹಾರಕ್ಕೆ ಅವರ ಶಕ್ತಿ ನನಗೆ ಧಾರೆ ಎರೆದ್ರೆ ಅವರ ನಿರೀಕ್ಷೆ ಮುಟ್ಟಲು ಪ್ರಯತ್ನಿಸುವೆ ಒಂದು ವೇಳೆ
ರಾಜ್ಯದ ಹಿತದೃಷ್ಠಿಯಿಂದ ಅವರು ಜೆಡಿಎಸ್ ಸೇರಿದ್ರೆ ಉತ್ತಮ ಬೆಳವಣಿಗೆ ಅಂತ ಪ್ರತಿಕ್ರಿಯೆ ನೀಡಿದ್ರು.

Leave a Reply