ಮದುವೆ ಸಮಾರಂಭಗಳಿಂದ ದೂರ ಉಳಿದ ರಾಜಕಾರಣಿಗಳು, ಮದ್ಯಕ್ಕೆ ಬರ

ಚುನಾವಣಾ ಸಮಯದಲ್ಲಿ ರಾಜಕಾರಣಿಗಳು ಅದರಲ್ಲೂ ಅಭ್ಯರ್ಥಿಗಳು ಮದುವೆ, ಹುಟ್ಟುಹಬ್ಬ ಸೇರಿದಂತೆ ಯಾವುದೇ ಸಮಾರಂಭಗಳನ್ನು ಮಿಸ್ ಮಾಡಿಕೊಳ್ಳಲು ಬಯಸುವುದಿಲ್ಲ, ಏಕೆಂದರೇ ಅಲ್ಲಿ ಮತದಾರರನ್ನು ಅವರು ಭೇಟಿಯಾಗಿ ಮತ ಯಾಚನೆ ಮಾಡಬಹುದಾಗಿದೆ. ಈ ಬಾರಿ ಅಭ್ಯರ್ಥಿಗಳು ಯಾವುದೇ ಮದುವೆ ಕಾರ್ಯಕ್ರಮ ಹಾಗೂ ಸಮಾರಂಭಗಳಿಗೆ ರಾಜಕಾರಣಿಗಳು ಹಾಜರಾಗುತ್ತಿಲ್ಲ, ಸಮಾರಂಭಗಳಲ್ಲಿ ಮತಕ್ಕಾಗಿ ಅಭ್ಯರ್ಥಿಗಳು ಲಂಚ, ಉಡುಗೊರೆ ಆಮೀಷ ಒಡ್ಡುತ್ತಾರೆಂಬ ಕಾರಣಕ್ಕಾಗಿ ಆಯೋಗ ನಡೆಯುವ ಪ್ರತಿಯೊಂದು ಸಮಾರಂಭದ ಮೇಲೂ ಹದ್ದಿನ ಕಣ್ಣಿಟ್ಟಿದೆ.
ರಾಜಕಾರಣಿಗಳು ಹಾಜರಾಗಿದ್ದ ಕೆಲವು ಸಮಾರಂಭಗಳಲ್ಲಿ ಹೆಚ್ಚುವರಿ ಮಧ್ಯ ಹಾಗೂ ಉಡುಗೊರೆಗಳು ಇದ್ದು, ಅವುಗಳು ಪರಿಶೀಲನೆಗೊಳಪಡಿಸಲಾಯಿತು ಎಂಬ ಮಾತುಗಳು ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಕೇಳಿ ಬರುತ್ತಿವೆ.
ಉಡುಪಿ ಜಿಲ್ಲೆಯ ಪಲಿಮಾರು ಗ್ರಾಮದ ನಿವಾಸಿಯೊಬ್ಬರ ಮದುವೆ ಸಮಾರಂಭವಿದೆ, ಅಲ್ಲಿನ ಸ್ಥಳೀಯ ರಾಜಕಾರಣಿ ಈ ಕುಟುಂಬದ ಆಪ್ತರು, 1 ತಿಂಗಳ ಹಿಂದೆ ಆ ರಾಜಕಾರಣಿಗೆ ಆಹ್ವಾನ ಪತ್ರಿಕೆ ನೀಡಲಾಗಿತ್ತು, ಮದುವೆಯ ದಿನ ಹತ್ತಿರವಾಗುತ್ತಿರುವಂತೆ ಜ್ಞಾಪಿಸಲು ಅವರು ಹೇಳಿದ್ದರು, ಆದರೆ ಅವರನ್ನು ಮತ್ತೆ ಆಹ್ವಾನಿಸದಿರಲು ನಿರ್ಧರಿಸಿದ್ದೇವೆ, ಮದುವೆ ಕಾರ್ಯಕ್ರಮಕ್ಕೆ ಚುನಾವಣಾ ಅಧಿಕಾರಿಗಳು ಬಂದು ಸಮಾರಂಭದ ಸಂತೋಷವನ್ನು ಹಾಳು ಮಾಡುವುದು ನಮಗೆ ಇಷ್ಟವಿಲ್ಲ ಎಂದು ಮದುವೆ ಆಯೋಜಕರು ಹೇಳಿದ್ದಾರೆ.
ಚುನಾವಣಾ ಆಯೋಗದ ಈ ಕ್ರಮಕ್ಕೆ ಕಾಂಗ್ರೆಸ ಎಂಎಲ್ ಸಿ ಐವಾನ್ ಡಿಸೋಜಾ ಆಕ್ಷೇಪ ವ್ಯಕ್ತ ಪಡಿಸಿದ್ದಾರೆ, ಆಯೋಗದ ನಿರ್ಧಾರದಿಂದ ಮದುವೆ ಸಮಾರಂಭಗಳಿಗೆ ಮಾತ್ರವಲ್ಲ, ಆಯೋಜಕರು ಯಾವುದೇ ಧಾರ್ಮಿಕ ಹಾಗೂ ಇನ್ನಿತರ ಸಭೆ ಸಮಾರಂಭಗಳಿಗೂ ಆಹ್ವಾನಿಸುತ್ತಿಲ್ಲ ಎಂದು ಹೇಳಿದ್ದಾರೆ, ಈ ರೀತಿಯ ಚುನಾವಣಾ ನೀತಿ ಸಂಹಿತೆಗಳು ಎಲ್ಲಿಯೂ ಇಲ್ಲ, ಎಲ್ಲಿಯಾದರೂ ಇದ್ದರೇ ಅವರು ಅದನ್ನು ನನಗೆ ತೋರಿಸಲಿ ಎಂದು ಹೇಳಿದ್ದಾರೆ. ಕ್ಯಾಥೋಲಿಕ್ ರ ಮದುವೆ ಸಮಾರಂಭಗಳಲ್ಲಿ ಮದ್ಯದ ಪೂರೈಕೆ ಇರುತ್ತದೆ, ಆದರೆ ನೀತಿ ಸಂಹಿತೆಯಿಂದಾಗಿ ಮದುವೆ ಕಾರ್ಯಕ್ರಮಕ್ಕೆ ಹೆಚ್ಚಿನ ಮದ್ಯ ಖರೀದಿ ಮಾಡಲು ಆಗುತ್ತಿಲ್ಲ.

Leave a Reply