ಮತದಾರರಿಗೆ ಹಂಚಲು ತಂದಿದ್ದ 7 ಕೋಟಿ ಮೌಲ್ಯದ ನಕಲಿ ನೋಟು ವಶ

ಬೆಳಗಾವಿ: ಚುನಾವಣೆ ಮೇಳೆ ಮತದಾರರಿಗೆ ಹಂಚಲು ಸಂಗ್ರಹಿಸಿದ್ದ 7 ಕೋಟಿ ಮೌಲ್ಯದ ನಕಲಿ ನೋಟುಗಳನ್ನು ವಶಕ್ಕೆ ಪಡೆಯಲಾಗಿದೆ.

2000 ಹಾಗೂ 500 ರೂ. ಮುಖಬೆಲೆಯ ನಕಲಿ ನೋಟುಗಳನ್ನು ವಿಶ್ವೇಶ್ವರಯ್ಯನಗರದ ಪಾಳು ಬಿದ್ದಿದ್ದ ಪಿಡಬ್ಲ್ಯೂಡಿ ವಸತಿ ಗೃಹದಲ್ಲಿ ಸಂಗ್ರಹಿಸಿಡಲಾಗಿತ್ತು.

ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಚುನಾವಣಾ ಫ್ಲೈಯಿಂಗ್ ಸ್ಕ್ವಾಡ್​ ಮತ್ತು ಎಪಿಎಂಸಿ ಪೊಲೀಸರು ನಕಲಿ ನೋಟುಗಳನ್ನು ವಶಕ್ಕೆ ಪಡೆದಿದ್ದಾರೆ. ಕಲರ್ ಪ್ರಿಂಟಿಂಗ್ ಮಷಿನ್​​ನಲ್ಲಿ ಪ್ರಿಂಟ್​ ಮಾಡಿರುವ ನೋಟುಗಳ ಜತೆಗೆ ಬ್ಯಾನ್​ ಆಗಿರುವ 1000 ಮುಖಬೆಲೆಯ ನೋಟುಗಳು ಪತ್ತೆಯಾಗಿವೆ.

2000 ನೋಟಿನ ಅಳತೆಯಲ್ಲಿ ಬಿಳಿ ಕಾಗದವನ್ನು ಕಟ್​ ಮಾಡಿದ್ದ ಬಂಡಲ್​ಗಳು ಪತ್ತೆಯಾಗಿದ್ದು, ವಿಜಯಪುರ ಮೂಲದ ಆರೋಪಿ ಅಜೀತ್​ ಕುಮಾರ್ ನಿಡೋಣಿ(35) ಎಂಬಾತನ್ನು ಬಂಧಿಸಲಾಗಿದೆ. ಈ ಸಂಬಂಧ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೃಪೆ : ದಿಗ್ವಿಜಯ ನ್ಯೂಸ್​

Leave a Reply