ರಸ್ತೆ ಬದಿಯಲ್ಲಿ ಕಂತೆ ಕಂತೆ ಹಣ!

ಕರ್ನಾಟಕ ಸೇರಿದಂತೆ ದೇಶದ ಹಲವು ರಾಜ್ಯಗಳ ಎಟಿಎಂಗಳಲ್ಲಿ ಹಣ ಸಿಗದೆ ಜನರು ಪರಿತಪಿಸುತ್ತಿದ್ದರೆ, ತುಮಕೂರಿನಲ್ಲಿ ಅಕ್ರಮವಾಗಿ ಕಂತೆ ಕಂತೆ ಹಣ ಸಾಗಿಸುತ್ತಿರುವುದು ಬಯಲಾಗಿದೆ. ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಅಕ್ರಮ ಹಣ ಸಾಗಣೆಯನ್ನು ತಡೆಗಟ್ಟಲು ಚುನಾವಣಾ ಆಯೋಗ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡಿದೆ. ಆದರೂ ಪೊಲೀಸರ ಕಣ್ಣು ತಪ್ಪಿಸಿ ಹಣ ಸಾಗಿಸಲಾಗುತ್ತಿದೆಯಾ ಎಂಬ ಪ್ರಶ್ನೆಯನ್ನು ಈ ಘಟನೆ ಹುಟ್ಟು ಹಾಕಿದೆ.

ಕಣಿಗಲ್​ ಸಮೀಪದ ಆಲಪ್ಪನ ಗುಡ್ಡೆ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಟಾಟಾ ಏಸ್​ ವಾಹನದಿಂದ ಕಂತೆ ಕಂತೆ ಹಣ ರಸ್ತೆಯ ಮೇಲೆ ಬಿದ್ದಿದೆ. ಇದನ್ನು ಕಂಡ ವ್ಯಾನ್​ ಚಾಲಕ ತರಾತುರಿಯಲ್ಲಿ ಪ್ಲಾಸ್ಟಿಕ್​ ಕವರ್​ನಲ್ಲಿ ಹಣ ತುಂಬಿಸಿಕೊಂಡು ಅಲ್ಲಿಂದ ಪರಾರಿಯಾಗಿದ್ದಾನೆ.

 

Leave a Reply