ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತನ ವಿರುದ್ಧ ದೂರು ದಾಖಲು

ಸಿದ್ದರಾಮಯ್ಯ ರವರ ಆಪ್ತನೊಬ್ಬರು ಸರಕಾರದ ವತಿಯಿಂದ ನಡೆಯುವ ಸಂಸ್ಕೃತಿಕಾ ಕಾರ್ಯಕ್ರಮಕ್ಕೆ ಅನುಮತಿ ಕೊಡಿಸುವುದಾಗಿ ಹಣ ಪಡೆದು ವಂಚನೆ ಮಾಡಿರುವನ ವಿರುದ್ಧ ಹನುಮಂತನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಆಪ್ತನಾಗಿರುವ ಬಸವರಾಜು ಎಂಬಾತನ ವಿರುದ್ಧ ದೂರು ದಾಖಲಾಗಿದೆ. ವಂಚನೆಗೊಳಗಾದ ಶಿವಾನಂದ ಎಂಬಾತ ದೂರು ದಾಖಲಿಸಿದ್ದಾರೆ.

ಬಸವರಾಜು, ಶಿವಾನಂದರವರಿದ ಒಂದೂವರೆ ಲಕ್ಷ ಹಣ ಪಡೆದು ಮೋಸ ಮಾಡಿದ್ದಾನೆ ಎಂದು ಆರೋಪ ಮಾಡಿದ್ದಾರೆ. ಸರಕಾರದಿಂದ ನಡೆಯುವ ಕಲ್ಚರಲ್ ಈವೆಂಟ್‌ಗೆ ಅನುಮತಿ ಕೊಡಿಸುವುದಾಗಿ ಹಣ ಪಡೆದಿದ್ದ. ಇದೀಗ ಹಣ ಕೇಳಿದರೆ ಸಿಎಂ ಮಗನ ನೆನಪಿನ ಶ್ರದ್ದಾಂಜಲಿಗಾಗಿ ವಿನಿಯೋಜಿಸಿರುವುದಾಗಿ ಹೇಳುತ್ತಿದ್ದಾನೆ. ಮತ್ತೊಮ್ಮೆ ಹಣ ಕೇಳಿದರೆ ಒಂದು ಗತಿ ಕಾಣಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಹನುಮಂತ ನಗರ ಪೊಲೀಸ್ ಠಾಣೆಯಲ್ಲು ಪ್ರಕರಣ ದಾಖಲಾಗಿದೆ.

Leave a Reply