ಫೇಸ್ ಬುಕ್ ಲೈವ್ ನಲ್ಲಿ ಪ್ರತಿಕ್ರಿಯೆ ಕೊಟ್ಟ ನಟ ಯಶ್

ನಟ ಯಶ್ ತನ್ನ ಮೇಲಿನ ಆರೋಪಗಳಿಗೆ ಫೇಸ್ ಬುಕ್ ಲೈವ್ ನಲ್ಲಿ ಬುಧವಾರ ಪ್ರತಿಕ್ರಿಯಿಸಿ ದ್ದಾರೆ. ಈ ಲೈವ್ ಬಾಡಿಗೆ ಮನೆ ಕುರಿತಾಗಿದೆ. ದಬ್ಬಾಳಿಕೆ ಮಾಡಿದ್ದಾನೆ, ಬಾಡಿಕೆ ನೀಡಿಲ್ಲ, ಮೋಸ ಮಾಡಿದ್ದಾನೆ ಎಂದು ಆರೋಪ ನನ್ನ ಮೇಲಿದೆ. ಆದರೆ ಮನೆ ಮಾಲೀಕರಿಗೆ ತೊಂದರೆ ಕೊಡುತ್ತಿಲ್ಲ. ಮನೆ ಖಾಲಿ ಮಾಡು ವಾಗ ನನ್ನ ತಾಯಿ ಜತೆ ಜಗಳ ಮಾಡಿದ್ದಾರೆ, ತಾಯಿಯನ್ನು ಹೀನಾಯವಾಗಿ ನಿಂದಿಸಿ ದ್ದಾರೆ. ಆದರೆ ಆ ಮನೆ ಬಿಟ್ಟ ನಂತರವೇ ಎರಡು ಚಿತ್ರ ಮಾಡಿದೆ. ನನ್ನ ಪರಿಶ್ರಮದಿಂದ ಎರಡೂ ಸಿನಿಮಾ ಹಿಟ್ ಆಗಿವೆ.

ಮನೆ ಖಾಲಿ ಮಾಡುವಾಗ ವಾದ ವಿವಾದ ನಡೆದಿದೆ. ಅನಗತ್ಯವಾಗಿ ವಿಚಾರವನ್ನು ಕೆಣಕುತ್ತಿದ್ದಾರೆ. ಆದರೆ ನಾನು ಸುಮ್ಮನೆ ಇರೋದನ್ನೇ ದುರುಪಯೋಗಪಡಿಸಿಕೊಳ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಪ್ರತಿ ತಿಂಗಳು ಮನೆ ಬಾಡಿಗೆ ಕಟ್ಟಿದ್ದೇವೆ. ಹಾಗಾಗಿ, ಮನೆ ಬಾಡಿಗೆ ಕಟ್ಟದಿರುವ ಪರಿಸ್ಥಿತಿ ನನಗೆ ಬಂದಿಲ್ಲ. ಆದರೆ ನಾನು ಆ ಮನೆ ಬಿಟ್ಟ ಬಳಿಕವೇ ಒಳಿತಾಗಿದೆ. ಆ ಮನೆ ನನಗೆ ಇಷ್ಟವಾಗಿತ್ತು, ಅದಕ್ಕಾಗಿ ನಾನು ವಾಸವಿದ್ದೆ. ಆ ಮನೆ ‘ಲಕ್ಕಿ’ ಎಂಬ ಮೂಢನಂಬಿಕೆ ನನ್ನಲಿಲ್ಲ. ನನ್ನ ಮೇಲೂ ಕೆಲವೊಂದು ಅಪವಾದ ಇದೆ. ಚಿಕ್ಕಂದಿನಿಂದಲೂ ಕಷ್ಟ ಅನುಭವಿಸಿದ್ದು, ಈಗ ಮನಸ್ಸು ಕಲ್ಲಾಗಿದೆ. ಪ್ರೀತಿಸುವವರು ಸಾವಿರ ಜನ ಇದ್ದಾರೆ, ದ್ವೇಷಿಸುವವರೂ ಇದ್ದಾರೆ. ಆದರೆ ನನ್ನನ್ನು ಅರಿತವರಿಗೆ ನಾನು ಏನೆಂದು ಗೊತ್ತು ಎಂದು ಅಭಿಮಾನಿಗಳಿಗೆ ಸ್ಪಷ್ಟಪಡಿಸಿದ್ದಾರೆ.

4 ಜನರಿಗೆ ಒಳ್ಳೆಯದಾಗಲೂ, ನಾನು ಕೆಟ್ಟವನಾದರೂ ಪರವಾಗಿಲ್ಲ. ಮನೆ ಮಾಲೀಕ 23 ಲಕ್ಷ ಮನೆ ಬಾಡಿಗೆ ಕಟ್ಟಬೇಕೆಂದು ದಾವೆ ಹೂಡಿದ್ದರು. ಆದರೆ 40 ಸಾವಿರ ರು ಕೊಡದಷ್ಟು ಹೀನ ಸ್ಥಿತಿಗೆ ನಾನು ತಲುಪಿಲ್ಲ. ಜ.2018ರ ವರೆಗೆ ಬ್ಯಾಂಕ್ ಖಾತೆಗೆ ಹಣ ಹಾಕಿದ್ದೇನೆ. ನನ್ನ ವಿರುದ್ದ ಆರೋಪ ಬಂದಾಗ ಅಭಿಮಾನಿಗಳು ಬೆನ್ನಿಗೆ ನಿಂತಿದ್ದಾರೆ ಎಂದು ಯಶ್ ಹೇಳಿದ್ದಾರೆ.

 

Leave a Reply