ರಬಾತ್(ಮೊರಾಕ್ಕೊ): ಉತ್ತರ ಆಫ್ರಿಕಾದ ದೇಶ ಮೊರಾಕ್ಕೊ 2026ರ ಫಿಫಾ ವಿಶ್ವಕಪ್ಗೆ ಬಿಡ್ ಸಲ್ಲಿಸಲು ಉತ್ಸಾಹ ತೋರಿದೆ. ವಿಶ್ವಕಪ್ ಬಿಡ್ನ ಸಾಮರ್ಥ್ಯ ಪರೀಕ್ಷೆಗೆ ಫಿಫಾ ಟಾಸ್ಕ್ ಫೋರ್ಸ್ ಈಗಾಗಲೇ ಮೊರಾಕ್ಕೊಗೆ ತೆರಳಿದ್ದು, ಫುಟ್ಬಾಲ್ನ ಶ್ರೇಷ್ಠ ಟೂರ್ನಿಗೆ ಎದುರಾಗಬಹುದಾದ ಅಪಾಯ ಹಾಗೂ ದೇಶದ ಆರ್ಥಿಕ ಸಾಮರ್ಥ್ಯಗಳನ್ನು ಪರಿಶೀಲನೆ ಮಾಡಲಿದೆ. ಇದರ ನಡುವೆ, ಸಲಿಂಗಕಾಮದ ವಿಚಾರವೇ ವಿಶ್ವಕಪ್ ಬಿಡ್ಗೆ ಅಡ್ಡಿಯಾಗುವ ಸಾಧ್ಯತೆ ಇದೆ.
ಮೊರಾಕ್ಕೊ ದೇಶದ ನೀತಿಸಂಹಿತೆ 489 ಪ್ರಕಾರ, ಸಲಿಂಗಕಾಮ ಅಪರಾಧ. ಇದಕ್ಕಾಗಿ 6 ತಿಂಗಳಿಂದ ಗರಿಷ್ಠ 3 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ‘ಮೊರಾಕ್ಕೊದ ಮಾನವ ಹಕ್ಕುಗಳ ಆಯೋಗ ಫಿಫಾಗೆ ಸಲ್ಲಿಸಿರುವ ವರದಿಯಲ್ಲಿ ಸಲಿಂಗಕಾಮದ ಕುರಿತಾಗಿ ಉದ್ದೇಶಪೂರ್ವಕ ಮೌನ ತಾಳಿದೆ. ದೇಶದಲ್ಲಿ ಇದು ಅಪರಾಧ ಎನ್ನುವ ಸಂಗತಿ ಅವರಿಗೂ ತಿಳಿದಿದೆ’ ಎಂದು ಅಧ್ಯಕ್ಷ ಅಹ್ಮದ್ ಎಲ್ ಹೈಜಿ ಹೇಳಿದ್ದಾರೆ.
ಮೊರಾಕ್ಕೊ ಆತಿಥ್ಯ ಪಡೆದಲ್ಲಿ, ಪಂದ್ಯ ವೀಕ್ಷಣೆಗೆ ಎಲ್ಜಿಬಿಟಿ ಸಮುದಾಯದವರೂ ಬರುತ್ತಾರೆ. ಈ ವೇಳೆ ದೇಶದ ಕಾನೂನಿಂದ ತೊಂದರೆಯಾಗಲಿದೆ ಎಂದು ಫಿಫಾ ಕಳವಳ ವ್ಯಕ್ತಪಡಿಸಿದೆ.
ಕೃಪೆ : ವಿಜಯವಾಣಿ