ಅಭಿಮಾನಿಗಳಲ್ಲಿ ಖುಷಿ ಮೂಡಿಸಿದ ಚಿರು – ಮೇಘನಾ

ಮೇ2 ರಂದು ನಟಿ ಮೇಘನಾ ರಾಜ್ ನಟ ಚಿರಂಜೀವಿ ಸರ್ಜಾ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಮದುವೆಯ ಮುನ್ನ ತನ್ನ ಭಾವಿ ಪತ್ನಿಗೆ ಚಿರು ಒಂದು ವಿಷಯ ಹೇಳಿದ್ದು, ಇದರಿಂದ ಮೇಘನಾ ಮಾತ್ರವಲ್ಲದೇ ಅವರ ಅಭಿಮಾನಿಗಳಿಗೂ ಖುಷಿ ಕೊಟ್ಟಿದೆ.

ಮದುವೆಯ ನಂತರ ನೀನು ನಟಿಸಲೇಬೇಕು. ಮದುವೆ ಆದ ನಂತರ ಯಾವುದೇ ರೀತಿಯ ಬದಲಾವಣೆಗಳಿಲ್ಲ. ನಿನ್ನ ವೃತ್ತಿಯನ್ನು ಹೀಗೆ ಮುಂದುವರೆಸು ಎಂದು ಚಿರಂಜೀವಿ ಸರ್ಜಾ ಮೇಘನಾ ಬಳಿ ಹೇಳಿದ್ದಾರೆ. ಇದರಿಂದ ಮೇಘನಾ ಅಭಿಮಾನಿಗಳು ಕೂಡ ಖುಷಿಯಾಗಿದ್ದಾರೆ.

ಸದ್ಯ, ಮದುವೆ ಸಂಭ್ರಮದಲ್ಲಿರುವ ಮೇಘನಾ ರಾಜ್ ಮುಂದಿನ ಸಿನಿಮಾಗಳಲ್ಲೂ ಅಭಿಮಾನಿಗಳನ್ನ ತನ್ನ ನಟನೆಯ ಮೂಲಕ ರಂಜಿಸಲಿದ್ದಾರೆ. ಸ್ಯಾಂಡಲ್ ವುಡ್ ಹಾಗೂ ಮಾಲಿವುಡ್ ಸಿನಿಮಾಗಳಲ್ಲೂ ಮೇಘನಾ ನಟಿಸಲಿದ್ದಾರೆ.

Image result for meghana chiru

Leave a Reply