ಸಿನಿಮಾದಲ್ಲಿ ಅವಕಾಶ ಗಿಟ್ಟಿಸಿಕೊಂಡ ಗುಂಡಮ್ಮ

ಸ್ಯಾಂಡಲ್ ವುಡ್ ರೆಬೆಲ್ ಸ್ಟಾರ್ ಅಂಬರೀಶ್ ನಾಯಕ ನಟನಾಗಿ ತೆರೆಗೆ ಬರುತ್ತಿರುವ ವಿಭಿನ್ನ ಶೀರ್ಷಿಕೆಯ ‘ಅಂಬಿ ನಿಂಗ್ ವಯಸ್ಸಾಯ್ತೋ’ ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ.

ಸದ್ಯದ ಸುದ್ದಿ ಏನಪ್ಪ ಅಂದ್ರೆ, ಜೀ ಕನ್ನಡ ಧಾರಾವಾಹಿಯ ಬ್ರಹ್ಮಗಂಟು ಧಾರಾವಾಹಿಯ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಗುಂಡಮ್ಮ ಪಾತ್ರದಾರಿ ಗೀತಾ ‘ಅಂಬಿ ನಿಂಗ್ ವಯಸ್ಸಾಯ್ತೋ’ ಚಿತ್ರದಲ್ಲಿ ನಟಿಸುತ್ತಿದ್ದಾರೆ, ಹಳ್ಳಿ ಹುಡುಗಿ ಪಾತ್ರ ಮಾಡುತ್ತಿರುವ ಶೃತಿ ಹರಿಹರನ್ ಗೆಳತಿಯ ಪಾತ್ರದಲ್ಲಿ ಗೀತಾ ನಟಿಸುತ್ತಿದ್ದಾರೆ.

ಇದೇ ಮೊದಲ ಬಾರಿಗೆ ಗುರುದತ್ ಗಾಣಿಗ ಆಕ್ಷನ್ ಕಟ್ ಹೇಳುತ್ತಿರುವ ಈ ಸಿನಿಮಾ ತಮಿಳಿನ ಹಿಟ್ ಚಿತ್ರ ‘ಪವರ್ ಪಾಂಡಿ’ ಚಿತ್ರದ ರೀಮೇಕ್ ಇದಾಗಿದೆ. ಪಾತ್ರವರ್ಗದಲ್ಲಿ ಸುದೀಪ್ ಮತ್ತು ಶ್ರುತಿ ಹರಿಹರನ್, ಸುಹಾಸಿನಿ ಸೇರಿದಂತೆ ಮುಂತಾದವರಿದ್ದಾರೆ.

Image may contain: 3 people, people standing

Leave a Reply