ಕುಮಾರಸ್ವಾಮಿ ಸರ್ಕಾರ ಬೀಳಿಸಲು ಸುಪಾರಿ ಪಡೆದಿದೆಯ ಪಬ್ಲಿಕ್ ಟಿವಿ.!!!???ಮಾಧ್ಯಮಗಳ ಬಣ್ಣ ಬಯಲು.

ಸಮ್ಮಿಶ್ರ ಸರ್ಕಾರದ ಹಗ್ಗ ಜಗ್ಗಾಟದ ಬಗ್ಗೆ ಸುಳ್ಳು ಸುದ್ದಿ ಬಿತ್ತರಿಸಿ ಜನರಲ್ಲಿ ಅಸಹ್ಯ ಮೂಡಿಸುತ್ತಿರುವ ಮಾಧ್ಯಮಗಳು

ಸಮ್ಮಿಶ್ರ ಸರ್ಕಾರ ಅಂದಮೇಲೆ ಹಗ್ಗ ಜಗ್ಗಾಟ,ಅಸಮಾಧಾನ ಇದ್ದಿದ್ದೇ,ಆದರೆ ಇರುವ ಸುದ್ದಿ ಅಲ್ಲದೆ ಇವರೇ ಅಸಮಾಧಾನವನ್ನು ಹುಟ್ಟಿ ಹಾಕುವುದು,ಇವರೇ ಖಾತೆಗಳನ್ನು ಹಂಚುವುದು,ಇವರೇ ಪಕ್ಷಾಂತರದ ಸುದ್ದಿಗಳನ್ನು ಬಿಟ್ಟು ಜನರನ್ನು ಟಿವಿ ಮುಂದೆ ಕುರುವಂತೆ ಮಾಡುತ್ತಿದ್ದಾರೆ.ಇವರ ಟಿ ಆರ್ ಪಿ ಹುಚ್ಚಿಗಾಗಿ ಜನರಿಗೆ ರಾಜಕಾರಣದ ಸುದ್ದಿಯೇ ಬೇಡ,ಕಾಂಗ್ರೆಸ್ – ಜೆಡಿಎಸ್ ಸರ್ಕಾರ ಜನರು ಮಾಡಿದ ದೊಡ್ಡ ಅಪರಾಧ ಎನ್ನುವಂತೆ ಒತ್ತಿ ಒತ್ತಿ ಹೇಳುತ್ತಿದ್ದಾರೆ.

ಇನ್ನು ಶುರುವಾಗದ ಆಡಳಿತ ಯಂತ್ರ.

ಸಮ್ಮಿಶ್ರ ಸರ್ಕಾರ ಆದ ಕಾರಣ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮಂತ್ರಿ ಮಂಡಲ ರಚಿಸಬೇಕಾಗುತ್ತದೆ.ಜಮ್ಮು ಕಾಶ್ಮೀರದಲ್ಲಿ ಎರಡು ತಿಂಗಳು ಹಿಡಿದಿರುವಾಗ,ಕರ್ನಾಟಕದಲ್ಲಿ 15 ದಿನ ಆದ ನಂತರ ಮಂತ್ರಿ ಮಂಡಲ ರಚನೆ ಆಗಿದೆ.

ಇದನ್ನೇ ಬಂಡವಾಳ ಮಾಡಿಕೊಂಡ ಮಾಧ್ಯಮಗಳು ಹೇಗಾದರೂ ಮಾಡಿ ಶಾಸಕರಲ್ಲಿ ಅತೃಪ್ತಿ ತಂದು ಸರ್ಕಾರ ಬೀಳಿಸುವ ಸುಪಾರಿ ಪಡೆದಂತೆ ವರ್ತಿಸುತ್ತಿವೆ.

ಮಾಧ್ಯಮಗಳ ಈ ನಡುವಳಿಕೆಗೆ ಕಾರಣ ಏನು ?

ಮಾಧ್ಯಮಗಳ ಈ ಅಸಹ್ಯಕರ ನಡವಳಿಕೆಗೆ ಮುಖ್ಯವಾದ ಕಾರಣ,

ಹಲವು ಚಾನೆಲ್’ಗಳ ಒಡೆಯರು ಬಿಜೆಪಿ ವಲಯದಲ್ಲಿ ಗುರುತಿಸಿಕೊಂಡಿರುವವು ಅಥವಾ ಭೋಗ್ಯ ಲೆಕ್ಕದಲ್ಲಿ ಬಿಜೆಪಿಗೆ ಮಾರಿಕೊಂಡಿರುವವು.

ಉದಾ : ಧಿಗ್ವಿಜಯ – ವಿಜಯ ಸಂಕೇಶ್ವರ.

ಪಬ್ಲಿಕ್ ಟಿವಿ – ಲಹರಿ ವೇಲು.

ಸುವರ್ಣ ಟಿವಿ – ರಾಜೀವ್ ಚಂದ್ರಶೇಖರ್ (ಪಾಲುದಾರ).

ಟಿ ಆರ್ ಪಿ ದಾಹ,ಹಣದ ವ್ಯಾಮೋಹ.

ಮಾಧ್ಯಮದವರ ಪಕ್ಷಪಾತ ಸುದ್ದಿ,ಜಾತಿ ವ್ಯಾಮೋಹ.

ಬಿಜೆಪಿ ಸೋತ ಹತಾಶೆ.

ಬಿಜೆಪಿಯವರು ನೀಡಿರುವ ಎಂ. ದುಡ್ಡಿನ ಋಣ ತೀರಿಸುವುದಕ್ಕೆ, ಈ ದಾರಿ ಹಿಡಿದಿರುವುದು ಬಹುತೇಕ ಎಲ್ಲರಿಗೂ ಗೊತ್ತಿರುವ ವಿಷಯವೇ.

ಮಾಧ್ಯಮಗಳಿಗೆ ಕಡಿವಾಣ ಹೇಗೆ ?

ಇವೆಲಕ್ಕೂ ಕಡಿವಾಣ ಹಾಕಬೇಕಾದರೆ ಮಾಧ್ಯಮಗಳಿಗೆ ಅನ್ವಯಿಸುವಂತೆ ಕಠಿಣ ನೀತಿ ನಿಯಮಗಳನ್ನು ಜಾರಿ ಮಾಡಬೇಕಿದೆ.

ಮಾಧ್ಯಮಗಳನ್ನು ಬಹುತೇಕ ಜಾಗಗಳಿಗೆ ನಿರ್ಬಂಧ ಹೇರಬೇಕಿದೆ.

ಮಾಧ್ಯಮಗಳು ಸುಳ್ಳು ಸುದ್ದಿಗಳನ್ನು, ದ್ವೇಷ ಸಾರುವ ಸುದ್ದಿಗಳನ್ನು, ಜನರ ದಿಕ್ಕು ತಪ್ಪಿಸುವ ಸುದ್ದಿಗಳನ್ನು ಪ್ರಸಾರ ಮಾಡಿದಾಗ ಕೇಸು ದಾಖಲಿಸಿ ಸೂಕ್ತ ಶಿಕ್ಷೆ ಆಗುವಂತೆ ಮಾಡಿ,ಹೆಚ್ಚು ಮೊತ್ತದ ದಂಡ ವಿಧಿಸಬೇಕು.

3 thoughts on “ಕುಮಾರಸ್ವಾಮಿ ಸರ್ಕಾರ ಬೀಳಿಸಲು ಸುಪಾರಿ ಪಡೆದಿದೆಯ ಪಬ್ಲಿಕ್ ಟಿವಿ.!!!???ಮಾಧ್ಯಮಗಳ ಬಣ್ಣ ಬಯಲು.

  1. Ramesh palabhavi says:

    Fake channels

  2. Sunil M gowda says:

    Super e chanaalglige raddu madi

  3. RAM MOHAN VHANAKHANDE says:

    CHANNELS WANTS TRP DON’T DO CORRUPTION SUPPORT MAKE GOOD GOVET

Leave a Reply