ರೈತನ ಜಾತಿ ಲೆಕ್ಕಾಚಾರ ಮಾಡಿದ ಪಬ್ಲಿಕ್ ಟಿವಿ ರಂಗನಾಥ್’ಗೆ ಸಾರ್ವಜನಿಕರೊಬ್ಬರ ಉತ್ತರ ನೋಡಿ ಬೆರಗಾಗುತ್ತೀರಿ.

ಸಾಲಮನ್ನಾ ಜಿಲ್ಲವಾರು ಲೆಕ್ಕಾಚಾರ.

ಈ ಸರ್ಕಾರ ರೈತರ ಕೃಷಿ ಸಾಲ ಮನ್ನಾಕ್ಕಾಗಿ ಮೀಸಲಿಟ್ಟಿರುವ ಹಣ ೩೪ ಸಾವಿರ ಕೋಟಿ ರೂಪಾಯಿಗಳು. ಇದರ ಸಿಂಹ ಪಾಲು ಪಡೆಯುತ್ತಿರುವ ಜಿಲ್ಲೆ ಬೆಳಗಾವಿ. ಬೆಳಗಾವಿ ಜಿಲ್ಲೆಯ ರೈತರ ಬರೋಬ್ಬರಿ ೭ ಸಾವಿರ ಕೋಟಿ ರೂಪಾಯಿಗಳ ಸಾಲ ಮನ್ನಾ ಈ ಕಾರ್ಯಕ್ರಮದಲ್ಲಿ ಅಡಗಿದೆ. ಕಲಬುರಗಿ ಜಿಲ್ಲೆಗೆ ಸಾಲ ಮನ್ನಾದಿಂದ ಸಿಕ್ಕ ಲಾಭ ಎಷ್ಟು ಗೊತ್ತೆ ೬ ಸಾವಿರ ಕೋಟಿ ರೂಅಪಾಯಿಗಳು.

ಅನ್ನದಾತನ ಜಾತಿ ಲೆಕ್ಕ ಹಾಕಿದ TRP ಮಾಧ್ಯಮಗಳು.

ಸಾಲ ಮನ್ನಾದಲ್ಲಿ ಒಕ್ಕಲಿಗರಿಗೆ ಹೆಚ್ಚಿನ ಲಾಭವಾಗುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಆದರೆ, ಒಕ್ಕಲಿಗರು ಹೆಚ್ಚಿರುವ ಹಾಸನ ಜಿಲ್ಲೆಗೆ ಸಾಲ ಮನ್ನಾ ಕಾರ್ಯಕ್ರಮದಲ್ಲಿ ಸಿಕ್ಕ ಹಣ ಎಷ್ಟು ಗೊತ್ತೆ ೧೫೦೦ ಕೋಟಿ ರೂಪಾಯಿಗಳು ಮಾತ್ರ. ಮಂಡ್ಯಕ್ಕೆ ಸಿಗಲಿರುವ ಹಣ ೧ ಸಾವಿರ ಕೋಟಿ ರೂಪಾಯಿ. ಇನ್ನುಳಿದ ಜಿಲ್ಲೆಗಳಿಗೆ ಸಾವಿರ ಕೋಟಿ ರೂಪಾಯಿಗಳಿಗಿಂತಲೂ ಕಡಿಮೆ ಹಣ ಸಾಲ ಮನ್ನಾ ಕಾರ್ಯಕ್ರಮದಿಂದ ಪ್ರಾಪ್ತವಾಗಲಿದೆ. ಹಾಗಿದ್ದಮೇಲೆ ಸಾಲ ಮನ್ನಾದ ಬಹುದೊಡ್ಡ ಫಲಾನುಭವಿ ಪ್ರದೇಶ ಉತ್ತರ ಕರ್ನಾಟಕ ಎಂಬುದು ಇಲ್ಲಿ ಯಾರಿಗೇ ಆಗಲಿ ಆರ್ಥವಾಗುವ ಆಂಶ.

ಏಳು ಸಾವಿರ ಕೋಟಿ ಸಿಕ್ಕಿರುವ ಬೆಳಗಾವಿ, ಆರು ಸಾವಿರ ಕೋಟಿ ರೂಪಾಯಿಗಳನ್ನು ಪಡೆಯುತ್ತಿರುವ ಕಲಬುರಗಿಯಲ್ಲಿ ಎಷ್ಟು ಮಂದಿ ಒಕ್ಕಲಿಗ ರೈತರಿದ್ದಾರೆ? ಹಾಗಿದ್ದೂ, ಕಾರ್ಯಕ್ರಮವನ್ನು ಜಾತಿ ದೃಷ್ಟಿಯಿಂದ ವಿಶ್ಲೇಷಿಸುತ್ತಿರುವುದು ಎಷ್ಟು ಸರಿ? ಹಳೇ ಮೈಸೂರು ಭಾಗದ ಯಾವುದೇ ಜಿಲ್ಲೆಗಳಿಗೂ ಇಷ್ಟು ಮೊತ್ತದ ಹಣ ಸಿಕ್ಕಿಲ್ಲ ಎಂಬುದನ್ನು ವಿಶ್ಲೇಷಣಾಕಾರರು ಗಮನಿಸಬೇಕು. ಈ ಸರ್ಕಾರ ಬಜೆಟ್‌ ಮತ್ತು ಸಾಲ ಮನ್ನಾ ವಿಚಾರದಲ್ಲಿ ಪ್ರದೇಶ, ಜಾತಿಯ ರಾಜಕಾರಣ ಮಾಡಿಲ್ಲ ಎಂಬುದು ನಿರ್ವಿವಾದ.

Leave a Reply