ವಿನಯ್ ಗುರೂಜಿ ಹೇಳಿದ ಭವಿಶ್ಯ ಕೇಳಿ ಕಂಗಾಲಾದ ಯಡಿಯೂರಪ್ಪ !

ರಾಜಕಾರಣಿಗಳು ಪ್ರಸಿದ್ಧ ದೇವಸ್ಥಾನಗಳ್ಲಲಿ ವಿಶೇಷ ಪೂಜೆ ಮಾಡಿಸುವುದು, ಮಠದ ಗುರುಗಳನ್ನು ಭೇಟಿ ಮಾಡುವುದು , ಸಂಕಷ್ಟ ಬಂದಾಗ ಜ್ಯೋತಿಷಿಗಳು ಹಾಗು ಮಂತ್ರವಾಧಿಗಳ ಮೊರೆ ಹೋಗುವುದು ಹೊಸದೇನಲ್ಲ. ಕಾಲ ಚಕ್ರ ಉರುಳಿದಂತೆ ಜನರು ತಮ್ಮ ಮನಸ್ಸಿನಲ್ಲಿ  ಪೀಠಾಲಂಕಾರ  ಮಾಡಿ ಮೆರೆಸುವ ಗುರೂಜಿಗಳು ಬದಲಾಗುತ್ತಿರುತ್ತಾರೆ. ಹೀಗೆಯೇ ಈಗ ಶೃಂಗೇರಿಯಾ  ಗೌರಿಗದ್ದೆಯ  ವಿನಯ್ ಗುರೂಜಿಯವರ ಬಹಳಷ್ಟು ಪ್ರಖ್ಯಾತರಾಗಿದ್ದಾರೆ.

 

  ಈ ರೋಬೊಟಿಕ್ಸ್ ಯುಗದಲ್ಲಿ ನಾಡಿನ ತಂತ್ರಜ್ಞಾನದ ಬೆಳವಣಿಗೆಯ ಕಡೆ ಗಮನ ಹರಿಸಬೇಕಾದ ನಮ್ಮ ಬಿ.ಎಸ್.ಯಡಿಯೂರಪ್ಪನವರು  ಗುರುವಾರ  ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಮತ್ತು ಬೈಂದೂರು ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಅವರ ಜೊತೆ ಗೌರಿಗದ್ದೆ  ವಿನಯ್ ಗುರೂಜಿಯವರ ಆಶ್ರಮಕ್ಕೆ ಬೇಟೆ ನೀಡಿದ್ದಾರೆ. 

ಬೆಳ್ಳಿಗೆ  ೧೦.೩೦ಕ್ಕೆ ಆಗಮಿಸಿದ ಅವರು ಸುಮಾರು ಎರಡು ತಾಸು ಗುರೂಜಿಯವರ ಜೊತೆ ಚೆರ್ಚೆ ನೆಡಿಸಿದ್ದಾರೆ. ಕುಮಾರಸ್ವಾಮಿ ಅವರು ಸಿ.ಎಂ ಆಗುವುದು ದೇವರ ಇಚ್ಛೆ ಎಂದು ಹಿಂದೊಮ್ಮೆ ಇವರು  ಭವಿಷ್ಯ ನುಡಿದಿದ್ದರು.  ಇವರ ಬಳಿ ಯಡಿಯೂರಪ್ಪ  ಸತತ ಎರಡು ಘಂಟೆಗಳ ಕಾಲ ಏನು ಚೆರ್ಚೆ ಮಾಡಿರಬಹುದು ಎಂಬ ಕುತೂಹಲ ಜನರಿಗೆ ಕೆರಳಿದೆ. ೨೦೧೯ ರ ಲೋಕ ಸಭಾ ಚುನಾವಣೆಯಲ್ಲಾದರೂ ಏನಾದ್ರು ಫಲ ಸಿಗಬಹುದಾ ಎಂಬುದರ ಬಗ್ಗೆ ಚಿರ್ಚಿಸಿದಾಗ ,ಯೆಡಿಯೂರಪ್ಪ ನವರ ಜಾತಕ ನೋಡಿ ವಿನಯ್ ಗುರೂಜಿಯವರು ನುಡಿದ ಭವಿಷ್ಯಕ್ಕೆ ಯಡಿಯೂರಪ್ಪನವರು ಕಂಗಾಲಾಗಿದ್ದಾರೆ. ವಿನಯ್ ಗುರೂಜಿಯವರು ಮುಂದಿನ ಲೋಕ ಸಭಾ ಚುನಾವಣೆಯಲ್ಲಿ ಬಿ.ಜೆ.ಪಿ ಗೆ  ದೋಸ್ತಿ ಸರ್ಕಾರದ ಎದುರು ಸೋಲು ಕಟ್ಟಿಟ್ಟ ಬುತ್ತಿ ಹಾಗು ಬಿ.ಜೆ.ಪಿ ಇನ್ನಷ್ಟು ಕ್ಷೇತ್ರಗಳನ್ನು ಕಳೆದುಕೊಳ್ಳಬಹುದು  ಎಂದು ನುಡಿದ್ದಾರೆ ಎಂದು ಬಲ್ಲ  ಮೂಲಗಳಿಂದ  ತಿಳಿದುಬಂದಿದ್ದೆ.

ಎಷ್ಟೇ ಆದರೂ ಮಂತ್ರಕ್ಕೆ ಮಾವನಿಕಾಯಿ ಉದುರುವ ಕಾಲ ಇದಲ್ಲದರಿಂದ, ಜನರ ಪರ ಕೆಲಸ ಮಾಡಿದವರಿಗೆ ಜನರು ಎಂದೂ ಕೈ ಬಿಡುವುದಿಲ್ಲ ಎಂದು ಯಡಿಯೂರಪ್ಪನವರು ತಿಳಿದುಕೊಳ್ಳುವುದು ಉತ್ತಮ.

One thought on “ವಿನಯ್ ಗುರೂಜಿ ಹೇಳಿದ ಭವಿಶ್ಯ ಕೇಳಿ ಕಂಗಾಲಾದ ಯಡಿಯೂರಪ್ಪ !

Leave a Reply