ಬೋನ್ ಮ್ಯಾರೋ ಕಾಯಿಲೆಯಿಂದ ಬಳಲುತಿದ್ದ  ಆಟೋ ಚಾಲಕನ ಮಕ್ಕಳಿಗೆ ಆಸರೆ ಆದ ಕುಮಾರಣ್ಣ

ತುಮಕೂರು ಮೂಲದ ರಮೇಶ್ ದಂಪತಿಯರ ಇಬ್ಬರು  ಮಕ್ಕಳೂ ಮೂಳೆ ಮಜ್ಜೆಗೆ ಸಂಬಂಧಿಸಿದ್ದ ಒಂದು ಘೋರ  ಕಾಯಿಲೆ ಇಂದ ಬಳಲುತಿದ್ದವು. ಆದರೆ ಆರ್ಥಿಕವಾಗಿ ನಿಶಕ್ತರಾಗಿದ್ದ ಅವರಿಗೆ ಚಿಕಿತ್ಸೆಗೆ ಹಣವನ್ನು ಹೊಂದಿಸುವುದು ಅಸಾಧ್ಯವಾಗಿತ್ತು.  ಆಗ ದೇವರಂತೆ ಬಂದು ನಮ್ಮ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಚಿಕಿತ್ಸೆಗೆ ಬೇಕಾದ ಎಲ್ಲ ಸಹಾಯವನ್ನು ಮಾಡಲು ಮುಂದಾದರು.

ಕೋಲಾರದಲ್ಲಿ ಕುಮಾರಸ್ವಾಮಿ ಅವರನ್ನು ಬೇಟಿಮಾಡಿ ತಮ್ಮ  ಸಮಸ್ಯೆಯನ್ನು ಹೇಳಿಕೊಂಡಾಗ ಕುಮಾರಸ್ವಾಮಿ ಅವರು ‘ಏನು ಚಿಂತಿಸಬೇಡ ನನ್ನ ಮನೆಗೆ ಬಂದು  ಭೇಟಿ’ ಮಾಡು ಎಂದು ಧೈರ್ಯ ತುಂಬಿ ಕಳಿಸಿದರು. ಆದರೆ ರಮೇಶ್ ದಂಪತಿಯರಿಗೆ ಹಣದ ಕೊರತೆಯಿಂದ ಬೆಂಗಳೂರಿಗೆ ಬರಲು ಸಾಧ್ಯವಾಗಲಿಲ್ಲ. ಆದರೆ ಜನತಾ ದರ್ಶನಕ್ಕೆ ಬಂದಾಗ ಕುಮಾರಸ್ವಾಮಿ ಅವರು ಇಂದಿರಾ ಗಾಂಧಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಕೊಡಿಸಲು ಹೇಳಿದರು. ಆದರೆ ವೈಧ್ಯರು ‘ಇಲ್ಲಿ ಈ ಕಾಯಿಲೆಗೆ ಚಿಕಿತ್ಸೆ ನೀಡಲು ಸಾಧ್ಯವಿಲ್ಲ, ನೀವು ನಾರಾಯಣ ಹೃದಯಾಲಕ್ಕೆ ಹೋಗಬೇಕಾಗುತ್ತದೆ’ ಎಂದು ಹೇಳಿದರು. ಆದರೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲು ಅವರಿಗೆ ಆಗದರಿಂದ ಕುಮಾರಸ್ವಾಮಿ ಅವರು ‘ಎಷ್ಟೇ ಖರ್ಚಾದರೂ ಪರವಾಗಿಲ್ಲ ನಾನು ನೋಡಿಕೊಳ್ಳುತ್ತೇನೆ’ ಎಂದು ಹೇಳಿ ಖಾಸಗಿ ಆಸ್ಪತ್ರೆಯಲ್ಲೇ ಚಿಕಿತ್ಸೆಗೆ ಮುಂದಾಗಲು ಹೇಳಿ ಆಸರೆ ಆಗಿ ನಿಂತರು. 

 ಒಬ್ಬ ವ್ಯಕ್ತಿ ರಸ್ತೆ ಮೇಲೆ ಅಪಘಾತದಿಂದ ಬಿದ್ದು ಒದ್ದಾಡುತ್ತಿದ್ದರು ಅವನಿಗೆ ಸಹಾಯ ಮಾಡುವ ಬದಲು ಲೈಕ್ಸ್ಗಾಗಿ ವಿಡಿಯೋ ಮಾಡುವ ಅಮಾನವೀಯ ಕ್ರೂರ ಪ್ರಪಂಚವಿದು. ಅಂತದ್ದರಲ್ಲಿ ಅವರು ಬಲಗೈಯಲ್ಲಿ ಮಾಡಿದ್ದು ಎಡಗೈಗೆ ಗೊತ್ತಾಗದಂತೆ ಸಹಾಯ ಮಾಡುವ ನಮ್ಮ ಕುಮಾರಸ್ವಾಮಿಯವರ ಕುರಿತು –

” ಇಂತಹ ಮುಖ್ಯಮಂತ್ರಿಯನ್ನು  ನಾವು ಉಳಿಸಿಕೊಳ್ಳಬೇಕು. ಇಂತವರು ಇದ್ದರೆ ನಂಮಂತಹ ಸಾವಿರಾರು ಬಡ ಕುಟುಂಬಗಳಿಗೆ ಸಹಾಯವಾಗುತ್ತದೆ” ಎಂದು ರಮೇಶ್ ದಂಪತಿಯರು ಹೇಳಿದರು. 

     

Leave a Reply