ಹಾಸನ ಎಮ್.ಎಲ್.ಎ ಪ್ರೀತಮ್ ಗೌಡನಿಂದ ಗೂಂಡಾಗಿರಿ

ನಗರಸಭೆ ಚುನಾವಣೆ ಹಿನ್ನೆಲೆಯಲ್ಲಿ ನಿನ್ನೆ ಮಧ್ಯ ರಾತ್ರಿ  ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ 8ನೇ ವಾರ್ಡ್‌ನ ಬಿಜೆಪಿ ಅಭ್ಯರ್ಥಿ ವೇಣು ಹಾಗೂ ಬೆಂಬಲಿಗರು ಮದ್ಯ ಹಂಚಿಕೆ ಮಾಡುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ದಾಳಿ ನಡೆಸಿದ್ದ ಪೊಲೀಸರು, ಆರೋಪಿಗಳನ್ನು ಬಂಧಿಸಿ ಠಾಣೆಗೆ ಕರೆತಂದು ದೂರು ದಾಖಲಿಸಿದ್ದರು. 
ತಡರಾತ್ರಿ ಪೊಲೀಸ್ ಠಾಣೆಗೆ ಆಗಮಿಸಿದ ಬಿಜೆಪಿ ಶಾಸಕ ಪ್ರೀತಮ್ ಗೌಡ  ತಮ್ಮವರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿದ್ದಾರೆ.

 

ಆದರೆ, ಚುನಾವಣೆ ಹಿನ್ನೆಲೆಯಲ್ಲಿ ಮದ್ಯ ಹಂಚಿಕೆ ಮಾಡುವ ಮೂಲಕ ಆಮಿಷ ಒಡ್ಡುವುದು ನೀತಿ ಸಂಹಿತೆಯ ಉಲ್ಲಂಘನೆ ಎಂದು ಪ್ರಕರಣ ದಾಖಲಿಸಲಾಗಿದೆ ಎಂದರೂ ಕೇಳದ ಶಾಸಕರು ಹಾಗೂ ಬೆಂಬಲಿಗರು ಪೊಲೀಸರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅಷ್ಟೇ ಅಲ್ಲದೆ, ಬಂಧಿತರನ್ನು ಕಾನೂನು ಬಾಹಿರವಾಗಿ ಪೊಲೀಸ್ ಠಾಣೆಯಿಂದ ಹೊರ ಕರೆತಂದಿದ್ದಾರೆ.

ಕಳೆದ ಬಾರಿ ಚುನಾವಣೆಯಲ್ಲಿ ಕೇವಲ ೬೦೦೦ ಮತಗಳನ್ನು ಪಡೆದು ಹೀನಾಯ ಸೋಲನ್ನು ಅನುಭವಿಸಿದ್ದ ಪ್ರೀತಮ್ ಗೌಡ ಈ ಬಾರಿ ೧೫೦೦೦ ಮತಗಳ ಮುನ್ನಡೆಯೊಂದಿಗೆ ಗೆದ್ದಾಗಲೇ ಈ ಗೆಲುವು ಕೇವಲ ಹಣ ಮತ್ತು ತನ್ನ ತೋಳ್ಬಲದಿಂದ ಮಾತ್ರ ಸಾದ್ಯವಿಗಿದೆಯೆಂದು ಅರಿತುಕೊಳ್ಳುವುದು ಕಷ್ಟವೇನು ಅಲ್ಲ. 

ಆರ್.ಎಸ್.ಎಸ್ ನಾ   ಮೂಲಕ ಜನರಿಗೆ ಶಿಸ್ತು ಹಾಗು ನೀತಿ ಪಾಠ ಬೋಧಿಸುತ್ತೇವೆ ಎಂದು ಬೀಗುವ  ಬಿ.ಜೆ.ಪಿ ಕಾರ್ಯಕರ್ತರಿಂದಲೆ ಈ ಗೂಂಡಾಗಿರಿಯ ವರ್ತನೆಯ ಕಂಡು ಬಂದಿದೆಯೆಲ್ಲ ಎಂದು ಅಚ್ಚರಿ  ಪಡುವ ಅವಶ್ಯಕತೆ ಇಲ್ಲ . ಏಕೆಂದರೆ ಬಿ.ಜೆ.ಪಿ ಕಾರ್ಯಕರ್ತರಿಂದ ಇಂತಹ ಅಸಭ್ಯ ನಡುವಳಿಕೆಗಳ ಉದಹರಣೆಗಳಿಗೆ ಏನು ಕಮ್ಮಿಯಿಲ್ಲ. ಬಿ.ಜೆ.ಪಿಯ ಒಬೊಬ್ಬ ಕಾರ್ಯಕರ್ತನು ಒಬೊಬ್ಬ ಪ್ರೀತಮ್ ಗೌಡ ಎಂದು ಹೇಳಿದರೆ ತಪ್ಪಾಗುವುದಿಲ್ಲ. 

ಹೀಗೆಯೇ ಮುಂದುವರೆದರೆ ಹಣದ ಅಮಲಿನಲ್ಲಿ ತೇಲುತ್ತಿರುವ ಬಿ.ಜೆ.ಪಿ ಪಕ್ಷದವರಿಂದ ರಾಜ್ಯದಲ್ಲಿ ಗೂಂಡಾಗಿರಿ ಹೆಚ್ಚುವುದರಲ್ಲಿ ಸಂದೇಹವಿಲ್ಲ.

One thought on “ಹಾಸನ ಎಮ್.ಎಲ್.ಎ ಪ್ರೀತಮ್ ಗೌಡನಿಂದ ಗೂಂಡಾಗಿರಿ

Leave a Reply