ಜನತಾ ದರ್ಶನ: ಒಂದೇ ದಿನದಲ್ಲಿ ನೂರಾರು ಜನರ ಸಮಸ್ಯೆಗಳನ್ನು ಆಲಿಸಿ ಪರಿಹಾರ ನೀಡಿದ ಸಿ.ಎಂ

ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಅವರು 12 ವರ್ಷದ ಹಿಂದೆ ನೆಡೆಸುತಿದ್ದ ಮಾದರಿಯ  ಜನತಾದರ್ಶನ ಕಾರ್ಯಕ್ರಮ ಇಂದು ಮತ್ತೆ ಪ್ರಾರಂಭವಾಯಿತು . ರಾಜ್ಯದ ಮೂಲೆ ಮೂಲೆಯಿಂದಲೂ   ತಮ್ಮ ತೊಂದರೆಗಳನ್ನು ಹೇಳಿಕೊಂಡು ಪರಿಹಾರ ಕಂಡುಕೊಳ್ಳುವ ವಿಶ್ವಾಸದಲ್ಲಿ ‘ಕೃಷ್ಣ’ದ ಮುಂದೆ ಸಾವಿರಾರು ಮಂದಿ ಸೇರಿದ್ದರು. 

ಜನತಾ ದರ್ಶನವು ಸಾಮಾನ್ಯ ಜನರು ತಮ್ಮ ಕಷ್ಟಗಳಿಗೆ ಪರಿಹಾರ ಕಂಡುಕೊಳ್ಳುವ ಒಂದು ಅತ್ಯಂತ ಸುಲಭವಾದ ದಾರಿ. ಇಲ್ಲಿ  ಅಂಗವಿಕಲರಿಗೆ , ವೃದ್ಧರಿಗೆ ಪ್ರೇತ್ಯಕವಾದ ಕ್ಯೂಗಳು  ನೇಮಕವಾಗಿತ್ತು . ಜನರು ಟೋಕನ್ ಪಡೆದು ಸಿ.ಎಂ ರನ್ನು ಖುದ್ದಾಗಿ  ಭೇಟಿ ಮಾಡಿದರು.ಈ ಮುಂಚೆ ಟೋಕನ್ ವ್ಯವಸ್ಥೆ ಇಲ್ಲದ ಕಾರಣ ಜನರು ಪರೆದಾಡುವು ಪರಿಸ್ಥಿತಿ ಇತ್ತು. ಆದರೆ ಈಗ ಅದಕ್ಕೆ ಪರಿಹಾರ ಕಂಡು  ಕೊಂಡಿರುವದರಿಂದ ಜನರು ನಿಟ್ಟುಸಿರು ಬಿಡುವಂತಾಗಿದೆ   . ಈ ಕಾರ್ಯಕ್ರಮದ ಮೂಲ ಉದ್ದೇಶ ಜನರೊಂದಿಗೆ ಮುಖ್ಯಮಂತ್ರಿಯವರು ನೇರವಾಗಿ ಸಂಭಾಷಿಸಿ ಅವರ ಕಷ್ಟಗಳ ಪರಿಹಾರ ಮಾಡುವುದು.ಇಂದು ನೆಡೆದ ಜನತಾ ದರ್ಶನದಲ್ಲಿ  ಹೆಚ್ಚಾಗಿ ಕಂಡುಬಂದಿದ್ದು ಅಂಗವಿಕಲರು, ವಯಸ್ಕರು  , ನಿರುದ್ಯೋಗಿಗಳು ಹಾಗು ಬಡ ಕುಟುಂಬದವರು. ಅಚ್ಚರಿಯ ವಿಷಯವೇನೆಂದರೆ ಈ ಕಾರ್ಯಕ್ರಮದಲ್ಲಿ ಶೇ.೫೦ ಜನಕ್ಕೆ ಸ್ಥಳದಲ್ಲೇ ಪರಿಹಾರ ದೊರಕಿದೆ .ಆದ್ದರಿಂದ  ಮುಖ್ಯಮಂತ್ರಿಯವರು ನೆಡುಸುವ ಹಲವಾರು ಜನಪರ ಕಾರ್ಯಕಮಗಳಂತೆ ಇದು ಕೂಡ ಅತ್ಯಂತ ಯಶಸ್ವಿ ಕಾರ್ಯಕಮವಾಗಿ ಜನಪ್ರಿಯತೆ  ಗಳಿಸಿದೆ . 

“ಮೈತ್ರಿ ಸರ್ಕಾರ 100 ದಿನ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಜನರ ಕಷ್ಟಗಳನ್ನು ಆಲಿಸಿ, ಸಕಾರಾತ್ಮಕವಾಗಿ ಸ್ಪಂದಿಸುವ ನಿಟ್ಟಿನಲ್ಲಿ ಪ್ರತಿ ಶನಿವಾರ ಬೆಂಗಳೂರಿನಲ್ಲಿ ಇರುವಾಗ 12 ವರ್ಷಗಳ ಹಿಂದಿನಂತೆ ಪರಿಣಾಮಕಾರಿ ಜನತಾದರ್ಶನ ನಡೆಸಲಾಗುವದು. ಈ ನೂರು ದಿನಗಳ ಅವಧಿಯಲ್ಲಿ ಪ್ರತಿ ದಿನ ಜನತಾ ದರ್ಶನ ನಡೆಸಿದ್ದೇನೆ; ಜನರ ಕಷ್ಟಗಳಿಗೆ ಸ್ಪಂದಿಸಿದ್ದೇನೆ. ಇಂದಿನಿಂದ ಪ್ರತಿ ಶನಿವಾರ ಮಾತ್ರ ಜನತಾ ದರ್ಶನ ನಡೆಸಲಾಗುವುದು. ಇತರ ದಿನಗಳಲ್ಲಿ ಸರ್ಕಾರದ ಇತರ ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನೀಡಲಾಗುವುದು” ಇಂದು  ಮುಖ್ಯಮಂತ್ರಿಗಳು  ತಿಳಿಸಿದರು.    

 

Leave a Reply