ದಿಗ್ವಿಜಯ ನ್ಯೂಸ್ ವರದಿಗಾರನಿಗೆ ಬೆವರಿಳಿಸಿದ ಯುವಕನ ವಿಡಿಯೋ ವೈರಲ್

ಒಬ್ಬ ವರದಿಗಾರನ  ಮುಖ್ಯ ಜವಾಬ್ದಾರಿ ಜನರಿಗೆ  ಸುದ್ದಿಗಳನ್ನು ನ್ಯಾಯವಾಗಿ, ತಾರ್ಕಿಕವಾಗಿ ಪಕ್ಷಾಂತರ ಮಾಡದೆ ತಲುಪಿಸುವುದು. ಆದರೆ ಕೆಲವು ಭ್ರಷ್ಟರಿಂದ ನಮ್ಮ ಸಮಾಜದ ಅವಿಭಾಜ್ಯ ಅಂಗವಾಗಿರುವ ಮಾಧ್ಯಮವು ಕುಶಲಿತವಾಗಿದೆ. ಇದಕ್ಕೆ ಒಂದು ಸೂಕ್ತ ಉದಾಹರಣೆಯೆಂದರೆ ಮೊನ್ನೆ ಒಬ್ಬ ಸಾಮಾನ್ಯ ಪ್ರಜೆ, ಸಮಾಜದಲ್ಲಿ ತನ್ನ ಜವಾಬ್ದಾರಿಯನ್ನು  ಅರಿತುಕೊಂಡು, ಜನರಿಗೆ ತಪ್ಪು ಮಾಹಿತಿಯನ್ನು ನೀಡುತಿದ್ದ ಬಿಜೆಪಿಯ ‘ಚಮಚ’ದಂತೆ ವರ್ತಿಸುತ್ತಿದ್ದ ದಿಗ್ವಿಜಯ ನ್ಯೂಸ್ ಚಾನೆಲ್  ವರದಿಗಾರನ ಮೇಲೆ ಕಿಡಿ ಕಾರಿದ್ದ ರೀತಿ.

ದಿಗ್ವಿಜಯ ನ್ಯೂಸ್  ವರದಿಗಾರನು ರಾಜ್ಯದ ಸರ್ಕಾರದ ಬಗ್ಗೆ ಕೀಳಾಗಿ ಮಾತಾಡಿ ಕುಮಾರಸ್ವಾಮಿ ಅವರು ನೂರು ದಿನಗಳಲ್ಲಿ 50  ದೇವಸ್ಥಾನಗಳಿಗೆ ಭೇಟಿ ನೀಡಿದ್ದಾರೆ , ಆದರೆ 30 ಜಿಲ್ಲೆಗಳಿಗೆ ಭೇಟಿನೀಡಲು ಸಾಧ್ಯವಾಗಿಲ್ಲ ಎಂದು ವ್ಯಂಗ್ಯ ಮಾಡಿದರು . ಬಿಜೆಪಿ  ಚಮಚದಂತೆ ವರ್ತಿಸುತ್ತಿದ್ದ ಇವನಿಗೆ  ಒಬ್ಬ ವ್ಯಕ್ತಿ ಕರೆ ಮಾಡಿ ಪ್ರಶ್ನಿಸಿದ್ದಕ್ಕೆ “ನಾನು ಯಾವುದೇ ಪಕ್ಷದ ಹೊಗಳ ಬಟ್ಟನಲ್ಲ,  ಸರಕಾರ ಮಾಡುವ ತಪ್ಪುಗಳನ್ನು ಎತ್ತಿ ತೋರಿಸುವುದೇ ನನ್ನ ಕೆಲಸ” ಎಂದು ಬೇಜವಾಬ್ದಾರಿಯಾಗಿ ಉತ್ತರ ನೀಡಿದನು. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಒಬ್ಬ ಯುವಕ ಕೌಂಟರ್ ಕೊಟ್ಟಿರುವ ವಿಡಿಯೋ ಈಗ ಎಲ್ಲರ ಮ್ ಮೊಬೈಲ್ ಗಳಲ್ಲಿ ಹರಿದಾಡುತ್ತಿದೆ.

ಈ ಯುವಕನು ” ಕುಮಾರಸ್ವಾಮಿ ಅವರು 100 ದಿನಗಳಲ್ಲಿ 50 ದೇವಸ್ಥಾನಗಳಿಗೆ ಭೇಟಿ ನೀಡಿದ್ದಾರೆ ಆದರೆ 30 ಜಿಲ್ಲೆಗಳನ್ನು ಭೇಟಿಮಾಡಲು ಸಾಧ್ಯವಾಗಿಲ್ಲ ಎಂಬುದನ್ನು ಹೈಲೈಟ್ ಮಾಡಿ ಹೇಳುತ್ತಿದ್ದೀರ. ನಾನು ಯಾರನ್ನು ಬೆಂಬಲಿಸಿ ಈ ಮಾತನ್ನು ಹೇಳುತ್ತಿಲ್ಲ. ಆದರೆ ಬಿಜೆಪಿ ಸರಕಾರ ಬಂದು 5 ವರ್ಷವಾಗುತ್ತಿದೆ. ಈ  5 ವರ್ಷಗಳಲ್ಲಿ ಎಷ್ಟು 100  ದಿನಗಳು ಬಂದಿವೆ ನಿಮಗೆ ಗೊತ್ತು. ಇಷ್ಟು ದಿನಗಳಲ್ಲಿ ಮೋದಿಯವರು ಎಷ್ಟು ಬಾರಿ ಕರ್ನಾಟಕ್ಕೆ ಭೇಟಿ ನೀಡಿದ್ದಾರೆ ?  ಮಂಗಳೂರು ಹಾಗು ಕೊಡಗು ಪ್ರದೇಶಗಳು ಪ್ರವಾಹ ಪೀಡಿತವಾಗಿ ಸುಮಾರು ಒಂದು ತಿಂಗಳಾಗುತ್ತಾ ಬಂದಿದೆ. ಇನ್ನು ಒಮ್ಮೆಯಾದರೂ ಭೇಟಿ ನೀಡಿದ್ದಾರ? ಅದೇ ಈ ಪರಿಸ್ಥಿತಿ ಗುಜರಾತ್ ಗೆ ಬಂದಿದ್ದರೆ ಹೋಗುತ್ತಿರಲಿಲ್ಲವಾ? ಎಲೆಕ್ಷನ್ ಗೆ 10 -15 ದಿನಗಳ ಮುಂಚೆ ಬಂದಿದ್ದ ಮೋದಿ ಅವರಿಗೆ ರಾಜ್ಯ ಸಂಕಷ್ಟದಲ್ಲಿ ಇದ್ದಾಗ ಬರಲು ಸಾಧ್ಯವಾಗಲಿಲ್ಲ. ನೀವು ಕೇವಲ ಒಬ್ಬ ವ್ಯಕ್ತಿಯನ್ನು ಬೆರಳು ಮಾಡಿ ತೋರಿಸುವುದು ನ್ಯಾಯವಲ್ಲ. ಎಲ್ಲ ರಾಜಕಾರಣಿಗಳ ಬಗ್ಗೆ ಹೀಗೆ ಮಾತಾಡಿ, ಆಗ ಒಪ್ಪಿಕೊಳ್ಳುತ್ತೇನೆ ನೀವು ಯಾರ ಹೊಗಳಬಟ್ಟರಲ್ಲವೆಂದು” ಎಂದು ವರದಿಗಾರನ ಮೇಲೆ ಕಿಡಿ ಕಾರಿದ್ದಾನೆ.

Leave a Reply