ಮೀಟರ್ ಬಡ್ಡಿ ದಂಧೆಗೆ ಫುಲ್ ಸ್ಟಾಪ್ ಇಟ್ಟ ಸಿಎಂ

ಮುಂಜಾನೆಯಾದರೆ  “ಮೀಟರ್ ಬಡ್ಡಿ ದಂಧೆ ಹೆಸರಿನಲ್ಲಿ ಕಿರುಕುಳ: ಇಬ್ಬರ ಸೆರೆ ” ಎಂಬ ಸುದ್ದಿಗಳನ್ನು ಮಾಧ್ಯಮಗಳಲ್ಲಿ ಕೇಳುತ್ತಲೇ ಇರುತ್ತೇವೆ. ಈ ಕಿರುಕಳಕ್ಕೆ ಒಳಗಾಗುವರು ಕೆಳ ಮಧ್ಯಮ ವರ್ಗದವರೇ ಹೆಚ್ಚು. ದಿನದ ವ್ಯಾಪಾರವನ್ನೇ ಜೀವನಾಂಶವಾಗಿ ನಂಬಿಕೊಂಡಿರುವ ಬಡವರ ರಕ್ತ ಹೀರಿ ಚಿತ್ರಹಿಂಸೆ ಮಾಡುವ ನರ ರಾಕ್ಷಸರ ಈ ಮೀಟರ್ ಬಡ್ಡಿ ದಂದೆಗೆ ಕುಮಾರಸ್ವಾಮಿಯವರು  ಕೊನೆ ಹಾಡಲು ತೀರ್ಮಾನಿಸಿದ್ದಾರೆ.

“ಬಡವರ ಬಂಧು” ಎಂಬ ಯೋಜನೆಯನ್ನು ಜಾರಿಗೆ ತರುವ ಸಿದ್ಧತೆಯಲ್ಲಿರುವ  ಮುಖ್ಯಮಂತ್ರಿಯವರ ಈ ನಿರ್ಧಾರ ಬೀದಿಬದಿ ವ್ಯಾಪಾರಿಗಳ ಮುಖದಲ್ಲಿ ಮಂಧಹಾಸ ಮೂಡಿಸಿದೆ.
ಈ ಯೋಜನೆ ಜಾರಿ ಕುರಿತು ಬೀದಿಬದಿ ವ್ಯಾಪಾರಿಗಳ ಜತೆ ಸಭೆ ನಡೆಸಲು ಸಚಿವ ಬಂಡೆಪ್ಪ ಕಾಂಶೆಂಪೂರ್ ಮತ್ತು ಸ್ಥಳೀಯ ಜೆಡಿಎಸ್ ಶಾಸಕ ಗೋಪಾಲಯ್ಯನವರು  ಯಶವಂತಪುರ ಎಪಿಎಂಸಿ ಮಾರುಕಟ್ಟೆಗೆ ತೆರಳಿದ್ದರು, ಅಲ್ಲಿನ ವರ್ತಕರ ಜೊತೆಗೆ  ಮಾತುಕತೆ ನಡೆಸಿದರು.
ಮೀಟರ್ ಬಡ್ಡಿ ದಂಧೆ ತಪ್ಪಿಸಲು ಮೊಬೈಲ್ ಅಪ್ಲಿಕೇಷನ್ ಮೂಲಕ ಧನ ಸಹಾಯ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ, ಜತೆಗೆ ಸರ್ಕಾರವು ದಿನದ ಬಡ್ಡಿ ರಹಿತ ಸಾಲವನ್ನು ನೀಡಲು ಮುಂದಾಗಿದೆ. ಇದರ ಉಪಯೋಗವನ್ನು ವ್ಯಾಪಾರಿಗಳು ಪಡೆದುಕೊಳ್ಳಬೇಕು ಎಂದರು.
ಒಂದು ದಿನದ ಬಡ್ಡಿ ರಹಿತ ಸಾಲವನ್ನೂ ಕೂಡ ನೀಡುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಹೀಗಾಗಿ ದಿನದ ಹಸಿವನ್ನು ನೀಗಿಸಿಕೊಳ್ಳಲು ವ್ಯಾಪಾರ ನೆಡೆಸುವ ಬೀದಿಬಧಿ ವ್ಯಾಪಾರಿಗಳು ನಿಟ್ಟುಸಿರು ಬಿಡುವಂತಾಗಿದೆ.

Leave a Reply