ಇಷ್ಟು ದಿನ ವಿದ್ಯಾರ್ಥಿಗಳು ವೇತನ ಪಡೆಯುವದಕ್ಕೆ ಹತ್ತಾರು ಸರಕಾರಿ ಕಚೇರಿಗೆ ಅಲೆಯಬೇಕಾಗಿತ್ತು . ಕೆಲಸ ಮುಗಿದರು ಅದನ್ನು ಪಡೆಯಲು ವಿದ್ಯಾರ್ಥಿಗಳು ತಿಂಗಳಾನುಗಟ್ಟಲೆ ಶಬರಿಯಂತೆ ಕಾಯಬೇಕಿತ್ತು. ಇನ್ನು ಕೆಲವರಿಗೆ ಇದರ ಬಗ್ಗೆ ಅಧಿಕೃತ ಮಾಹಿತಿ ಕೂಡ ಇಲ್ಲದೆ ಇದರ ಉಪಯೋಗವನ್ನು ಪಡೆಯುತ್ತಿರಲಿಲ್ಲ
ಆದರೆ ಈಗ ಶಿಕ್ಷಣ ಇಲಾಖೆ ರೂಪಿಸಿದ ಪ್ರತ್ಯೇಕ ವಿಧ್ಯಾರ್ಥಿ ವೇತನ ತಂತ್ರಾಂಶವನ್ನು(ಎಸ್.ಎಸ್.ಪಿ) ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿಯವರು ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಬುಧವಾರ ಬಿಡುಗಡೆ ಮಾಡಿದರು.

ಈ ತಂತ್ರಾಂಶದ ಮೂಲಕ ವಿಧ್ಯಾರ್ಥಿ ವೇತನವನ್ನು ನೇರವಾಗಿ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತದೆ.
ವೆಬ್ ಪೋರ್ಟಲ್ ಗೆ ಚಾಲನೆ ನೀಡಿ ಮಾತನಾಡಿದ ಸಿಎಂ, ಶಿಕ್ಷಣ ವ್ಯವಸ್ಥೆ ಬಹಳಷ್ಟು ಸುಧಾರಣೆಯಾಗುವ ಮತ್ತು ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಅಗತ್ಯವಿದೆ. ಈ ತಂತ್ರಾಂಶ ಬಳೆಕೆದಾರ ಸ್ನೇಹಿ ಆಗಿದ್ದು , ವಿಧ್ಯಾರ್ಥಿ ವೇತನ ಪಡೆಯುವ ಪ್ರಕ್ರಿಯೆಯನ್ನು ಸರಳಗೊಳಿಸಿದೆ. ಮಧ್ಯವರ್ತಿಗಳ ಹಾವಳಿಗೆ ಕಡಿವಾಣ ಬೀಳಲಿದೆ ಎಂದರು .