ಪ್ರತಿಯೊಬ್ಬ ಕನ್ನಡಿಗನು ತಿಳಿದುಕೊಳ್ಳಲೇ ಬೇಕಾದ ವಿಷಯಗಳು!!

ಭಾರತವು ಒಂದು ವೈವಿಧ್ಯಮಯ ದೇಶ. ಕರ್ನಾಟಕ ರಾಜ್ಯವು ಭಾರತದಲ್ಲೇ ಒಂದು ಭಾರತವಿದಂತೆ. ನಮ್ಮ ರಾಜ್ಯ ಅಷ್ಟು  ವೈಧ್ಯಮಯವಾದ ಪ್ರದೇಶ. ಕರ್ನಾಟಕದ  ರಾಜಧಾನಿ ಬೆಂಗಳೂರಿಗೆ  ಭಾರತದದ ಮೂಲೆ ಮೂಲೆಯಿಂದಲೂ ಜನರು ಉದ್ಯೋಗಾವಕಾಶವನ್ನು ಹುಡುಕುತ್ತ ವಲಸೆ ಬರುತ್ತಾರೆ. ಕನ್ನಡದವರು ಹೊಂದಿಕೊಳ್ಳುವಿಕೆಯ ಗುಣಕ್ಕೆ ಪ್ರಸಿದ್ದರು. ವಲಸೆ ಬಂದ ಜನರಿಗೆ ತವರಿನಂತೆ ಭಾವನೆ ಮೂಡಿಸುವ ಕನ್ನಡಿಗರು ಆತಿಥ್ಯಕ್ಕೆ ಹೆಸರಾದವರು.

ಕರ್ನಾಟಕದ ಚರಿತ್ರೆಯು ಪೂರ್ವ ಶಿಲಾಯುಗದಷ್ಟು ಹಳೆಯದಾಗಿದೆ.ಭಾಷೆ  ಆಧಾರಿತದ ಮೇರೆಗೆ ೧೯೫೬ರಲ್ಲಿ  ಕರ್ನಾಟಕ ಏಕೀಕರಣವಾಯಿತು.  ಕರ್ನಾಟಕವು ಶಾಂತಿ ಮತ್ತು ಧೈರ್ಯವನ್ನು ಸೂಚಿಸುವ ಹಳದಿ ಮತ್ತು ಕೆಂಪು ಧ್ವಜದಿಂದ ಗುರುತಿಸಲ್ಪಡಲಾಗುತ್ತದೆ. ಭಾರತದಲ್ಲಿ ಧ್ವಜವನ್ನು ಹೊಂದಿರುವ ಏಕೈಕ ರಾಜ್ಯ ಎಂಬ ಹಿರಿಮೆ ನಮ್ಮದು.
ಇನ್ನು ಪ್ರತಿಯೊಬ್ಬ ಕನ್ನಡಿಗನು ಹೆಮ್ಮೆ ಪಡಬೇಕಾದಂತ ಅಂಶಗಳೆಂದರೆ ಮೊದಲನೆಯದಾಗಿ ನಮ್ಮ ಭಾಷೆ ಕನ್ನಡ.
ಕನ್ನಡಕ್ಕೆ ಸುಮಾರು ೧೫೦೦-೧೬೦೦ ವರುಷಗಳ ಇತಿಹಾಸವಿದೆ. ೨೦೧೧ರ ಜನಗಣತಿಯ ಪ್ರಕಾರ ಜಗತ್ತಿನಲ್ಲಿ ೬.೪ ಕೋಟಿ ಜನಗಳು ಕನ್ನಡ ಮಾತನಾಡುತ್ತಾರೆ.
ಬೇಲೂರು, ಹಳೇಬೀಡು, ಪಟ್ಟದಕಲ್ಲು, ಹಂಪಿ, ಮುರುಡೇಶ್ವರ,  ಜೋಗ ಹಾಗು ಶಿವನಸಮುದ್ರ ಜಲಪಾತಗಳು, ಬಂಡೀಪುರ ಹಾಗು ನಾಗರಹೊಳೆ ನ್ಯಾಷನಲ್ ಪಾರ್ಕ್ಗ ಗಳು, ವಿಧಾನ ಸೌಧ, ಮೈಸೂರು ಅರಮನೆ ಹೀಗೆ ಕರ್ನಾಟಕದ ಹಲವಾರು ಸ್ಥಳಗಳು ಭಾರತದ ನೋಡಲೇ ಬೇಕಾದ ಪ್ರವಾಸಿ ತಾಣಗಳ ಪಟ್ಟಿಯಲ್ಲಿವೆ.
ಇನ್ನು ಸಾಹಿತ್ಯಕ್ಕೆ ಕನ್ನಡಿಗರ ಕೊಡುಗೆ ಅಪಾರ. ಮಹಾನ್ ಕವಿಗಳಾದ ಕುವೆಂಪು, ದ.ರಾ ಬೇಂದ್ರೆ, ಮಾಸ್ತಿ ವೆಂಕಟೇಶ ಅಯ್ಯಂಗಾರ್ , ಗಿರೀಶ್ ಕಾರ್ನಾಡ್, ವಿ.ಕೃ.ಗೋಕಾಕ್ ಹೀಗೆ ಹಲವಾರು ಕವಿಗಳು ನಮ್ಮ ರಾಜ್ಯದ ಬಾವುಟವನ್ನು ಎತ್ತಿ ಹಿಡಿದಿದ್ದಾರೆ.ಎಂಟು ಕನ್ನಡ ಸಾಹಿತಿಗಳು ಜ್ಞಾನಪೀಠ ಪ್ರಶಸ್ತಿಯಿಂದ ಪುರಸ್ಕೃತಗೊಂಡು, ಕನ್ನಡವನ್ನು ಅತೀ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದ ಭಾಷೆಯನ್ನಾಗಿ ಮಾಡಿರುವುದು ನಮ್ಮ ಹಿರಿಮೆಯ ಕಿರೀಟದ ಒಂದು ಗರಿ.
 ಪ್ರತಿಯೊಂದು ಕ್ಷೇತ್ರದಲ್ಲೂ ಕನ್ನಡಿಗರು ರಾಷ್ಟ್ರೀಯ ಹಾಗು ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಸಂಪಾದಿಸಿ ಭಾರತದ ಕೀರ್ತಿ ಹೆಚ್ಚಿಸಿದ್ದಾರೆ.
ಕ್ರೀಡೆ ಬಗ್ಗೆ ಮಾತನಾಡಬೇಕೆಂದರೆ ಕ್ರಿಕೆಟ್ ನಲ್ಲಿ ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ, ಜಾವಗಲ್ ಶ್ರೀನಾಥ್; ಬ್ಯಾಡ್ಮಿಟನ್ ನಲ್ಲಿ ಪ್ರಕಾಶ್ ಪಡುಕೋಣೆ, ಅಶ್ವಿನಿ ಪೊನ್ನಪ್ಪ; ಟೆನ್ನಿಸ್ ನಲ್ಲಿ ರೋಹನ್ ಬೋಪಣ್ಣ; ಬಿಲಿಯರ್ಡ್ಸ್ ನಲ್ಲಿ ಪಂಕಜ್ ಅಡ್ವಾಣಿ; ಅಥ್ಲೆಟಿಕ್ಸ್ ನಲ್ಲಿ ವಿಕಾಸ್  ಗೌಡ, ಅಶ್ವಿನಿ ನಾಚಪ್ಪ ಹೀಗೆ ಹಲವಾರು ಕ್ರೀಡಾ ಪಟುಗಳು.
ಇನ್ನು ವಿಜ್ಞಾನದಲ್ಲೂ ಯಾವ ರಾಜ್ಯಕ್ಕೂ ಕಮ್ಮಿ ಇಲ್ಲ. ಇಸ್ರೋನ ಪ್ರಧಾನ ಕಚೇರಿ ಬೆಂಗಳೂರಿನಲ್ಲಿ ಸ್ಥಾಪಿತವಾಗಿದೆ. ಹಾಸನದಲ್ಲಿ ಇರುವ  ಎಂಸಿಎಫ್ ಇಸ್ರೊನ ಎಲ್ಲ ಉಪಗ್ರಹಗಳ  ನಿಯಂತ್ರಣ ಹಾಗು ಉಸ್ತುವಾರಿಯ ಜವಾಬ್ದಾರಿಯನ್ನು ಹೊಂದಿದೆ. ಸರ್ಕಾರದ ಏರೋಸ್ಪೇಸ್ ಕಾರ್ಖಾನೆ ಎಚ್.ಎ.ಎಲ್  ಕೂಡ ಬೆಂಗಳೂರಿನಲ್ಲೇ ಸ್ಥಾಪಿತವಾಗಿದೆ. ಇತ್ತೀಚಿಗೆ ಭಾರತ ರತ್ನ ಪಡೆದ ಸಿ.ಏನ್. ಆರ್  ರಾವ್ ಹಾಗು ಭಾರತವನ್ನು ನ್ಯೂಕ್ಲಿಯರ್ ಸಮರ್ಥ ದೇಶ ಮಾಡುವುದರಲ್ಲಿ ಪ್ರಮುಖ ಭಾಗವಿಗಿದ್ದ ಭೌತಶಾಸ್ತ್ರಿ ರಾಜ ರಾಮಣ್ಣ ಕೂಡ ಕನ್ನಡದವರೇ. ಹೀಗೆ ವಿಜ್ಞಾನದಲ್ಲೂ ಕನ್ನಡಿಗರು ಅಭೂತಪೂರ್ವ ಸಾಧನೆಗಳನ್ನು ಮಾಡಿದ್ದಾರೆ.
ಭಾರತ ಕಂಡ ಅತ್ಯುತ್ತಮ ಇಂಜಿನಿಯರ್ ಸರ್.ಎಂ ವಿಶ್ವೇಶ್ವರಯ್ಯನವರ ಬಗ್ಗೆ ಪರಿಚಿಸುವ ಅವಶ್ಯಕತೆ ಇಲ್ಲ.
ಬೆಂಗಳೂರನ್ನು ಭಾರತದ ಬಿಸ್ನೆಸ್ ಸ್ಟಾರ್ಟ್ ಅಪ್ ಹಬ್ ಎಂದೇ ಹೇಳಬಹುದು. ಇನ್ಫೋಸಿಸ್, ವಿಪ್ರೊ, ಫ್ಲಿಪ್ಕಾರ್ಟ್, ಹೀಗೆ ಹಲವಾರು ಕಂಪನಿಗಳ ಪ್ರಧಾನ ಕಚೇರಿ ಬೆಂಗಳೂರಿನಲ್ಲಿದೆ. 
ದಕ್ಷಿಣ ಭಾರತದ ಶಾಸ್ತ್ರೀಯ ಸಂಗೀತ ಪದ್ಧತಿಯಾದ ಕರ್ನಾಟಕ ಸಂಗೀತ , ಹಾಗು ವಿಶಿಷ್ಟವಾದ  ನೃತ್ಯಕಲೆ ಯಕ್ಷಗಾನ ಉಗಮವಾದದ್ದೂ  ಕರ್ನಾಟಕದಲ್ಲಿಯೇ.
ಫೀಲ್ಡ್ ಮಾರ್ಷಲ್ ಕರಿಯಪ್ಪ, ಜನರಲ್ ತಿಮ್ಮಯ್ಯ, ಮೇಜರ್ ಸಂದೀಪ್ ಉನ್ನಿಕೃಷ್ಣರವರು ದೇಶಕ್ಕೆ ಮಾಡಿರುವ ಸೇವೆಯನ್ನು ಮರಿಯುವಂತಿಲ್ಲ.
ಸಿ.ಏನ್ ಮಂಜುನಾಥ್ , ಎಂ.ಸಿ.ಮೋದಿ , ಶರಣ್ ಪಾಟೀಲ್, ದೇವಿ ಶೆಟ್ಟಿ ಹೀಗೆ ಹಲವಾರು ವೈಧ್ಯಕೀಯ ಕ್ಷೇತ್ರಕ್ಕೆ ತಮ್ದೇ ಆದ ಕೊಡುಗೆಯನ್ನು ನೀಡಿದ್ದಾರೆ.
ಇನ್ನು ಸಿನಿಮಾ ಕ್ಷೇತ್ರದಲ್ಲಿ ಪದ್ಮಭೂಷಣ ಡಾ. ರಾಜಕುಮಾರ್, ಡಾ. ವಿಷ್ಣುವರ್ಧನ್, ಶಂಕರ್ನಾಗ್ ಹೀಗೆ ಹಲವಾರು ಕಲಾವಿದರು ಇಡೀ ಭಾರತವೇ ಕರ್ನಾಟಕದತ್ತ ತಿರುಗಿ ನೋಡುವಂತೆ ಮಾಡಿದವರು.
ಹಾಗು ದಕ್ಷಿಣ ಭಾರತದಿಂದ  ಪ್ರಧಾನಿಗಳಾಗಿರುವ ಕೇವಲ 5  ಜನರಲ್ಲಿ ಎಚ್.ಡಿ ದೇವೇಗೌಡರು ಒಬ್ಬರು.
ಹೀಗೆ ಪ್ರತಿಯೊಂದು ಕ್ಷೇತ್ರದಲ್ಲಿಯೂ ಅಪಾರ ಸಾಧನೆಗಳನ್ನು ಮಾಡಿರುವ ಕನ್ನಡಿಗರ ಬಗ್ಗೆ ಕರ್ನಾಟಕದ ಜನತೆ ಇರಲಿ ಭಾರತವೇ ಹೆಮ್ಮೆ ಪಡುವಂತ ಒಂದು ರಾಜ್ಯ ಕರ್ನಾಟಕ.

Leave a Reply