ಇಂದಿನ ನಿಜವಾದ ಪೆಟ್ರೋಲ್ ದರ ಕೇಳಿದರೆ ಬೆಚ್ಚಿಬೀಳುತ್ತೀರ!!!

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲದ  ದರ ಕೇಳಿದರೆ ತಬ್ಬಿಬ್ಬಾಗುತ್ತೀರ.  ಅಂತರಾಷ್ಟ್ರೀಯ ಮಾರುಕಟ್ಠೆಯಲ್ಲಿ ಇಂದು ಒಂದು ಬ್ಯಾರಲ್ ಪೆಟ್ರೋಲ್ ದರ 57.24 ಯು.ಎಸ್. ಡಾಲರ್. ಒಂದು ಬ್ಯಾರಲ್ ಪೆಟ್ರೋಲ್ ಅಂದ್ರೆ 159 ಲೀಟರ್. ಅಂದರೆ ಒಂದು ಲೀಟರ್ ಪೆಟ್ರೋಲ್ ಅನ್ನು  ಕೇಂದ್ರ ಸರಕಾರ ಕೇವಲ 25.95 ರೂ.ಗೆ  ಖರೀದಿಸಿತ್ತದೆ ! ಹೌದು ನಂಬಲು ಅಸಾಧ್ಯವಾದರೂ, ಮೋದಿ ಸರ್ಕಾರ ಪ್ರಾಪ್ತಿಸಿರುವ ಈ ‘ಅಚ್ಛೇ ದಿನ್’ ಅನ್ನು ನಾವು  ನಂಬಲೇ ಬೇಕು. ಈ ಖಾದಿ ಬಟ್ಟೆ ದರಿಸಿರುವ  ದಗಲುಬಾಜಿಗಳು 25. 95ರೂ ಗೆ ಖರೀಧಿಸುವ ಪೆಟ್ರೋಲನ್ನು , ಪೆಟ್ರೋಲ್ ಬಂಕ್ ನವರು ನಮ್ಮ  ವಾಹನಗಳ  ಟ್ಯಾಂಕ್’ಗೆ  ಸುರಿಯುವಾಗ ಬರೋಬ್ಬರಿ 82 ರೂ.ಗಳ ಗಡಿ ದಾಟುತ್ತದೆ.ಹಾಗಾದರೆ ಈ  ಹೆಚ್ಚುವರಿಯಾಗಿ ಪಡೆಯುವ 52 ರೂ. ವನ್ನು ಜನರಿಂದ ಕೊಳ್ಳೆ ಹೊಡೆಯಲಾಗುತ್ತಿದ್ದೆ ಎಂದು ಸ್ಪಷ್ಟವಾಗಿದೆ. ಏನ್ ಸ್ವಾಮಿ  ಜನರ ಮುಗ್ದತೆಯನ್ನು  ಹೀಗಾ ದುರುಪಯೋಗ ಪಡಸಿಕೊಳ್ಳುವುದು?

ಸದ್ಯ ನಾವು ಭಾರತೀಯರು  ಪ್ರತಿದಿನ 47 ಲಕ್ಷ ಬ್ಯಾರಲ್ ಅಂದರೆ  74.73 ಕೋಟಿ ಲೀಟರ್ ತೈಲವನ್ನು ಬಳಸುತ್ತಿದ್ದೇವೆ. ಹಾಗಾದರೆ ಸರಕಾರದ ಬೊಕ್ಕಸಕ್ಕೆ ಜನಸಾಮಾನ್ಯರು ತುಂಬುತ್ತಿರುವ ರೊಕ್ಕವೆಷ್ಟು ಎಂಬುವುದನ್ನು ನೀವೇ ಲೆಕ್ಕ ಮಾಡಿ.
ಅಂತರಾಷ್ಟ್ರೀಯ ಮಾರುಕಟ್ಟೆಯಿಂದ ಖರೀದಿಸಿದ ಪೆಟ್ರೋಲ್’ಗೆ ಕೇಂದ್ರ ಸರಕಾರ ದೊಡ್ಡ ಮೊತ್ತದ ಅಬಕಾರಿ ಸುಂಕ ವಿಧಿಸುತ್ತದೆ. ಅದರ ಮೇಲೆ ಪುನಃ ಶೇ. 21 ರಷ್ಟು ಮೌಲ್ಯವರ್ಧಿತ ತೆರಿಗೆ ಅಂಟಿಕೊಳ್ಳುತ್ತದೆ. ನಮಗೆ ಪೆಟ್ರೋಲ್ ನೀಡುವ ಡೀಲರ್ಸ್ ಶೇ. 4 ರಿಂದ 5 ರಷ್ಟು ಕಮಿಷನ್ ಪಡೆಯುತ್ತಾರೆ. ಹೀಗೇ 25.95 ರ ಪೆಟ್ರೋಲ್ ನಮ್ಮ ಕೈಯ್ಯನ್ನು ಸೇರುವಷ್ಟರಲ್ಲಿ  82 .ರೂ ಗಳಿಗೂ  ಅಧಿಕ ಮೌಲ್ಯವನ್ನು ಪಡೆದುಕೊಂಡು ಸುಡುತ್ತದೆ. ಜುಲೈ 2014ರಲ್ಲಿ ಒಂದು ಬ್ಯಾರಲ್ ತೈಲಕ್ಕೆ 106 ಯು.ಎಸ್. ಡಾಲರ್ ನೀಡಲಾಗುತಿತ್ತು. ಪ್ರಸ್ತುತ ದರ ಕೇವಲ 57.24 ಯು.ಎಸ್. ಡಾಲರ್. ಹಾಗಾದರೆ ಇಂದಿನ ಧಾರಣೆ ಎಷ್ಟಿರಬೇಕಿತ್ತು ಎಂಬುವುದನ್ನು ಊಹಿಸಿ.
ನಮ್ಮ ನೆರೆಯ ದೇಶ ಶ್ರೀಲಂಕಾಕ್ಕೆ ಭಾರತ ಪೆಟ್ರೋಲ್ ಮಾರಾಟ ಮಾಡುತ್ತದೆ. ಆದರೆ ಅಲ್ಲಿ ಇಂದು ಪೆಟ್ರೋಲ್ ಲೀಟರೊಂದಕ್ಕೆ 64 ರೂ. ಮಾತ್ರ! ನಮ್ಮಲ್ಲಿ ರೂ. 82/83 ಇರುವುದು ನಮ್ಮ ದೌರ್ಬಾಗ್ಯವೆಂದೇ ಹೇಳಬೇಕು . ನೆರೆಯ ದೇಶಗಳಾದ ಪಾಕಿಸ್ತಾನದಲ್ಲಿ 55 ರೂ. , ನೇಪಾಳದಲ್ಲಿ 69.71 ರೂ. ಹಾಗೂ ಬಾಂಗ್ಲಾದಲ್ಲಿ 73.91 ರೂ. ಇರುವಾಗ ನಮ್ಮ ರಾಷ್ಟ್ರದಲ್ಲಿ ಮಾತ್ರ ಈ ಪರಿ ಏರಿಕೆಯಾಗಲು ಕಾರಣವೇನು ಎಂಬ ಪ್ರಶ್ನೆಗೆ ಕೇಂದ್ರ ಸರಕಾರದಲ್ಲೇ ಉತ್ತರವಿದೆ. ಕೇಂದ್ರ ಸರಕಾರದ ಆರ್ಥಿಕ ಪರಿಸ್ಥಿತಿ ಅಧೋಗತಿಗೆ ತಲುಪಿದೆ. ಸರಕಾರಕ್ಕೆ ಸರಿಯಾದ ಆರ್ಥಿಕ ತಜ್ಞರ ಸಲಹೆ ಬೇಕು. ಜೊತೆಗೆ ಸೇವಾ ಮನೋಭಾವವೂ ಬೇಕು. ಕಾರ್ಪೊರೇಟರ್’ಗಳ ಕೈಗೊಂಬೆಯಾದರೆ ಭಾರತ ಮುಂದೊಂದು ದಿನ ದೇಶವನ್ನೇ ಅಡ ಇಡಬೇಕಾದಂತ ‘ಅಚ್ಛೇ ದಿನ್’  ತಲುಪಿದರು ಆಶ್ಚರ್ಯವಿಲ್ಲ.

Leave a Reply