ಕೆಲ್ಸಕ್ ಕರಿಬೇಡಿ ವೋಟ್ ಹಾಕಕ್ ಮರಿಬೇಡಿ – ಇದು ಯಡ್ಡಿಯೂರಪ್ಪನ ಸಿದ್ದಾಂತ

 

ಯಡ್ಡಿಯೂರಪ್ಪನವರು  ಪರೀಕ್ಷೆ ದಿನ ಶಾಲೆಗೆ ಹೋಗದೆ ನಂತರ ಪಾಸ್ ಮಾಡಲು ಶಿಕ್ಷಕರನ್ನು ಬೇಡಿಕೊಳ್ಳುವ ಶಿಶುವಿನ ಹಾಗೆ. ‘ಕೆಲ್ಸಕ್ ಕರಿಬೇಡಿ ವೋಟ್ ಹಾಕಕ್ ಮರೀಬೇಡಿ’ ಅನ್ನೋ ಜಾಯಮಾನದವರು ಇವರು. ನೆನ್ನೆ ಕೊಡಗಿನ ಅತಿವೃಷ್ಟಿ ಕುರಿತ ನಡೆದ ಸರ್ವಪಕ್ಷ ನಿಯೋಗಕ್ಕೆ ಯಡ್ಡಿಯೂರಪ್ಪನವರು ಚಕ್ಕರ್ ಹೊಡೆದಿದ್ದಾರೆ.

 

 

ಸಾಮಾನ್ಯ ಜನರೇ ತಮಗೆ ಕೈಲಾದಷ್ಟು ಸಹಾಯ ಮಾಡುತ್ತಿರುದ್ದಾರೆ. ಇನ್ನುಎಷ್ಟೋ ಜಿಲ್ಲೆಗಳ ಜನತೆಯ ಪ್ರತಿನಿಧಿ ಆಗಿರುವ ಬಿಜೆಪಿ ಪಕ್ಷದವರಿಗೆ, ತಮ್ಮದೇ ಪಕ್ಷದ ನಾಯಕನನ್ನು ರಾಜ್ಯ ಸಂಕಷ್ಟದಲ್ಲಿರುವುದರ  ಕುರಿತು  ಭೇಟಿ ಮಾಡಲು ಸಮಯವಿಲ್ಲ ಪಾಪ . ಜನರು ಸಾಯುತ್ತಿರುವಾಗಲು ಇವರು  ರಾಜಕೀಯ ಮಾಡ್ಬೇಕಾ ಸ್ವಾಮಿ?

ಇವರು ತುಂಬ ಬ್ಯುಸಿ ಎಂದೇ ಕೊಳ್ಳೋಣ. ಇರುವ 17  ಎಂ.ಪಿ ಗಳಲ್ಲಿ   ಒಬ್ಬರಾದರು ಬರ್ಬೋದಿತ್ತಲ್ಲ. ಪ್ರತಾಪ್ ಸಿಂಹನ ಗರ್ಜನೆ ನಾಡು ಸಂಕಷ್ಟದಲ್ಲಿ ಇರುವಾಗ ಕೇಳುವುದೇ ಇಲ್ಲ. ತಾವು ಎಂತ ಬೇಜವಾಬ್ದಾರಿ ನಾಯಕರು ಎಂದು ಬಿಜೆಪಿ ಪಕ್ಷದವರು ಸಾಬೀತು ಪಡಿಸಿರುವುದು ಇದೇನು ಮೊದಲಬಾರಿಯಲ್ಲ . ಹೆಂದೆ ಕಾವೇರಿ ವಿಷಯದಲ್ಲಿ ಸರ್ವಪಕ್ಷ ಸಭೆ ನೆಡೆದಿದ್ದಾಗಲೂ ಬಿಜೆಪಿ ಇಂದ ಒಂದು ನೊಣ ಕೂಡ  ಉಪಸ್ಥಿತವಾಗಿರಲಿಲ್ಲ. 
ಇದರ ಬಗ್ಗೆ ಜನರ ಕೆಲವು  ಅಭಿಪ್ರಾಯಗಳು  ಝಲಕ್ ಇಲ್ಲಿದೆ ನೋಡಿ  :
ಕನ್ನಡಿಗರ ಕಷ್ಟಕ್ಕೆ ಆಗದ ಈ ನಾಲಾಯಕ್ ನಾಯಕರು, ಅದ್ಯಾವ ಮುಖ ಇಟ್ಟುಕೊಂಡು ಮತ ಕೇಳಲು ಬರುತ್ತಾರೋ ಗೊತ್ತಿಲ್ಲ.

Leave a Reply