ಇನ್ನು ಮುಂದೆ ಮದುವೆ ಮನೆಗಳಲ್ಲಿ ಮಿನರಲ್ ವಾಟರ್ ಬಾಟಲ್ ಬ್ಯಾನ್!!

Non – biodegradable ಕಸದ ಬಗ್ಗೆ ಬಿಬಿಎಂಪಿ ಈಗ ಕಠಿಣ ನಿಲುವನ್ನು ತೆಗುದುಕೊಂಡಿದೆ.  ಈಗಾಗಲೇ ಮಿತಿ ಮೀರಿ ಹದ ಗೆಟ್ಟಿರುವ ನಮ್ಮ ಪರಿಸರದ ಬಗ್ಗೆ ಈಗಲೂ ಕಾಳಜಿ ವಹಿಸದಿದ್ದರೆ, ನಮ್ಮ ನಗರ  ಮನುಜ ಕುಲ ಬದುಕಲು ಅಯೋಗ್ಯವಾದ ಸ್ಥಳವಾಗುತ್ತದೆ  ಎಂದು ಕುಮಾರಸ್ವಾಮಿಯವರು ಅರಿತುಕೊಂಡಿದ್ದಾರೆ . ಧಾರ್ಮಿಕ  ಸಭಾಂಗಣಗಳಿಗೆ  ಬಿಬಿಎಂಪಿ ಅವರು ಇನ್ನು ಮುಂದೆ ಪ್ಲಾಸ್ಟಿಕ್ ಲೋಟಗಳನ್ನಾಗಲಿ, ತಟ್ಟೆಗಳನ್ನಾಗಲಿ ಅಥವಾ ಮಿನರಲ್ ವಾಟರ್ ಬಾಟಲ್ ಗಳನ್ನ ಆಗಲಿ ಉಪಯೋಗಿಸುವಂತಿಲ್ಲ ಎಂದು ವಾರ್ನಿಂಗ್ ನೀಡದ್ದಾರೆ.

ಪ್ಲಾಸ್ಟಿಕ್ ಬಳಕೆಯನ್ನು ಬ್ಯಾನ್ ಮಾಡಿದ ಬಳಿಕವೂ ಅದರ ಬಗ್ಗೆ ಗಮನ ನೀಡದೆ ಉಪಯೊಗಿಸುತಿದ್ದ  ವ್ಯಾಪಾರಿಗಳ ಮೇಲೆ ಬಿಬಿಎಂಪಿ ಕಠಿಣ ಕ್ರಮವನ್ನು ತೆಗೆದುಕೊಂಡಿದೆ.

ಬಿಬಿಎಂಪಿ  ಕಮಿಷನರ್  ಏನ್  ಮಂಜುನಾಥ್  ಪ್ರಸಾದ್ ರವರು ಶುಕ್ರವಾರ ಎಲ್ಲ ಮದುವೆ ಹಾಗು ಧಾರ್ಮಿಕ ಸಭಾಂಗಣಗಳ ಮಾಲೀಕರಿಗೆ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸಬೇಕು ಎಂದು ನೋಟಿಸ್ ಕಳುಹಿಸದ್ದರು. ನೀರಿಗೆ ಮಿನರಲ್ ವಾಟರ್ ಬಾಟಲಿಯ ಉಪಯೊಗವನ್ನು ನಿಶೆದಿಸಿದ್ದು, ಕೇವಲ 20  ಲೀಟರ್ ಗಳ ನೀರಿನ  ಕ್ಯಾನ್ ಗಳನ್ನು   ಬಳಸಬಹುದು ಎಂದು ಹೇಳಿದ್ದಾರೆ.

ಘನ ತ್ಯಾಜ್ಯ ನಿರ್ವಹಣೆ ಇಲಾಖೆಯ ಮೂಲ ಉದ್ದೇಶ reduce – reuse – recycle ಆಗಿದ್ದು, ಬಿಬಿಎಂಪಿ ಈಗಾಗಲೇ ನಗರದಲ್ಲಿ ಹೆಚ್ಚುತ್ತಿರುವ ತ್ಯಾಜ್ಯದ ನಿರ್ವಹಣೆಗೆ ಪರೆದಾಡುತ್ತಿದೆ. ಆದ್ದರಿಂದ ಮರುಬಳಿಕೆ ಮಾಡಬಹುದಂತ ವಸ್ತುಗಳನ್ನು ಉಪಯೋಗಿಸುವುದು ಅನಿವಾರ್ಯ ಎಂದು ಹೇಳಿದ್ದಾರೆ.

ಕುಮಾರಸ್ವಾಮಿ ಅವರು ಕೂಡ ಪ್ಲಾಸ್ಟಿಕ್ ಅನ್ನು ಸಂಪೂರ್ಣ ನಿಷೇದಿಸಬೇಕೆಂಬ ಸೂಚನೆಯನ್ನು ನೀಡಿದ್ದು, ಈ ನಿರ್ಧಾರವು ಅವರ ಪರಿಸರ ಪ್ರೇಮ ಹಾಗು ಕಾಳಜಿಯನ್ನು  ತೋರುತ್ತದೆ.

One thought on “ಇನ್ನು ಮುಂದೆ ಮದುವೆ ಮನೆಗಳಲ್ಲಿ ಮಿನರಲ್ ವಾಟರ್ ಬಾಟಲ್ ಬ್ಯಾನ್!!

  1. Nice and good decision

Leave a Reply