ಆದಿಶಕ್ತಿ ಮಹಿಳಾ ಸಂಘದ ಕಾರ್ಯಕರ್ತ ರಘು ಚಂದ್ರಪ್ಪನಿಗೆ ಹಿಗ್ಗ ಮುಗ್ಗ ಬಾರಿಸಿದ ನಟಿ ಸುಶ್ಮಿತ

ಭಾರತೀಯರು ವಿಜ್ಞಾನ, ತಂತ್ರಜ್ಞಾನದಲ್ಲಿ ಎಷ್ಟೇ ಮುಂದುವರೆದರು, ನಮ್ಮ ಸಮಾಜದಲ್ಲಿ ಇನ್ನು ಹಲವಾರು ಮನೆಗಳಲ್ಲಿ ಹೆಣ್ಣು ಮಕಳ್ಳೆಂದರೆ ಅಸ್ಸಡ್ಡೆ ಹಾಗು ಹೊರೆ ಎಂಬ ಬಾವ ತುಲಳುಕುತ್ತಿದೆ. ಕೆಲವು  ಹೆಣ್ಣು ಮಕಳ್ಳು ಹುಟ್ಟಿದಾಗಿನಿಂದಲೂ ಶೋಷಣೆಯಲ್ಲಿಯೇ ಜೀವನ ಸಾಗಿಸುತ್ತಾರೆ. ಆದ್ದರಿಂದ ಅವರಿಗೆ ಒಳ್ಳೆಯ ಮಾರ್ಗದರ್ಶನ ನೀಡಿ ಹೆಣ್ಣು ಕೂಡ ಸ್ವಾವಲಂಬಿಯಾಗಿ ಬದುಕಬಹುದು ಎಂದು ಕಲಿಸಿಕೊಡುವುದು ಮಹಿಳಾ ಸಂಘಗಳ ಉದ್ದೇಶ.

ಆದರೆ  ಹೆಣ್ಣು ಮಕಳನ್ನು ಕೀಳಾಗಿ ನೋಡುವರ ವಿರುದ್ಧ ಸಿಡಿದೇಳುವ ಬದಲು,ಕೆಲವರು ಇಡಿ ಗಂಡು ಜಾತಿಯಾ ಮೇಲೆ ತಿರುಗಿಬೀಳುತ್ತಿರುವುದು ಇವರ ಹುಚ್ಚಾಟ.
ನಟಿ  ಸುಷ್ಮಿತಾ ಅವರು ಆದಿಶಕ್ತಿ ಮಹಿಳಾ ಸಂಘದ ಕಾರ್ಯಕರ್ತ ರಘು ಚಂದ್ರಪ್ಪ ಮೇಲೆ 6 ಜನ ಸಹಚರರೊಂದಿಗೆ ಸೇರಿ ರಸ್ತೆಯಲ್ಲಿ ಅಡ್ಡಗಟ್ಟಿ ಹಲ್ಲೆ ನಡೆಸಿದ್ದಾರೆ.ಮಹಿಳಾ ಸಂಘಕ್ಕೆ ರಾಜ್ಯಾಧ್ಯಕ್ಷೆ ಮಾಡುವುದಾಗಿ ನಂಬಿಸಿ ಕಿರುತೆರೆ ನಟಿಗೆ ವಂಚನೆ ಪ್ರಕರಣ ರಘು ಎಂಬ ಕಾರ್ಯಕರ್ತನ ಮೇಲೆ ನಟಿ ಹಾಗೂ ಸಹಚರರಿಂದ ಹಲ್ಲೆ ನಡೆದಿದೆ ಎಂದು ಆರೋಪಿಸಲಾಗಿದೆ.

ರಘು ಒಬ್ಬನೇ ಹಣ ಮಾಡುತ್ತಿದ್ದಾನೆ ಎಂದು ಹಲ್ಲೆ ನಡೆಸಿದ್ದು, ಕಾರು, ಹಣ ಹಾಗೂ ಲ್ಯಾಪ್​ಟ್ಯಾಪ್ ದೋಚಿದ್ದಾರೆಂದು ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆದಿ ಶಕ್ತಿ ಮಹಿಳಾ ಸಂಘಕ್ಕೆ ರಾಜ್ಯಾಧ್ಯಕ್ಷೆಯಾಗಿ ಮಾಡುವುದಾಗಿ ನಂಬಿಸಿ ಹಣ ಪಡೆದಿದ್ದು, ಈಗ ಹಣ ವಾಪಸ್ಸು ಕೇಳಿದರೆ ರಘು ಚಂದ್ರಪ್ಪ ಜೀವ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿ, ನಟಿ ಸುಶ್ಮಿತಾ ಅವರು ಈ ಹಿಂದೆ ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ದೂರು ನೀಡಿದ್ದರು.

Leave a Reply