ರೈತರು ಮತ್ತು ಬಡವರನ್ನು ರಕ್ಷಿಸಲು ಸಿಎಂ ಕುಮಾರಸ್ವಾಮಿ ತೆಗೆದುಕೊಂಡ ದಿಟ್ಟ ನಿರ್ಧಾರಗಳು!!

ಎಚ್.ಡಿ. ಕುಮಾರಸ್ವಾಮಿ ಅವರು ಅಧಿಕಾರಕ್ಕೆ ಬಂದು 4 ತಿಂಗಳಾಗಿವೆ.ಇಷ್ಟು ವರುಷಗಳಲ್ಲಿ ಹಲವಾರು ಮುಖ್ಯಮಂತ್ರಿಗಳನ್ನು, ಸರ್ಕಾರಗಳನ್ನು ಕಂಡಿದ್ದೇವೆ. ಯಾರದೇ ಸರಕಾರವಾಗಲಿ ಒಂದು ವಿಭಾಗವನ್ನು ಗಮನದಲ್ಲಿಟ್ಟುಕೊಂಡು, ಅದರ ಅಭಿವೃದ್ಧಿಗೆ ಕೆಲಸ ಮಾಡುತ್ತಾರೆ. ಆದರೆ ಕುಮಾರಸ್ವಾಮಿ ಅವರ ಇಷ್ಟು ದಿನದ ಆಡಳಿತವನ್ನು ಗಮಿನಿಸಿದರೆ, ಇವರು ರಾಜ್ಯದ ಎಲ್ಲ ವಿಭಾಗಳಲ್ಲೂ ಸಮತೋಲಿತವಾದ ಅಭಿವೃದ್ಧಿಗೆ ಕೆಲಸ ಮಾಡುತ್ತಿರುವುದು ಕಂಡು ಬರುತ್ತದೆ .

ಆದರೆ ಇವರ ಇಷ್ಟು ದಿನಗಳ ಆಡಳಿತದ ಮುಖ್ಯಾಂಶಗಳೆಂದರೆ, ಸುಮಾರು 40000 ಸಾವಿರ ಕೋಟಿ ರೈತರ ಸಾಲ ಮನ್ನಾ ಮಾಡುವ ಕಾರ್ಯಾಚರಣೆ. ಇದೊಂದು ಇತಿಹಾಸ ಸೃಷ್ಟಿಸಿದಂತ ಕಾರ್ಯಾಚರಣೆ ಎಂದೇ ಹೇಳಬಹುದು. ಇಷ್ಟು ದೊಡ್ಡ ಮೊತ್ತದ ಸಾಲ ಮನ್ನಾವನ್ನು ಮಾಡುವುದಿರಲಿ ಯಾವ ಸರ್ಕಾರಕ್ಕೂ ಊಹಿಸಲು ಸಹ ಗುಂಡಿಗೆ ಇರಲಿಲ್ಲ.

ಇನ್ನು ಬಡವರನ್ನು, ಕಷ್ಟದಲ್ಲಿ ಇರುವವರನ್ನು ಕಂಡರೆ, ಕುಮಾರಸ್ವಾಮಿ ಅವರ ಮನಸ್ಸು ಕರಗಿ ಅವರಿಗೆ ಸಹಾಯ ಮಾಡಲು ಶಕ್ತಿ ಮೀರಿ ಪ್ರಯತ್ನಿಸುವ ವಿಷಯ ಹೊಸದೇನಲ್ಲ. ಆದ್ದರಿಂದ ಈ ಮೀಟರ್ ಬಡ್ಡಿ ಹೆಸರಿನಲ್ಲಿ ಜನರ ರಕ್ತ ಹೀರುತ್ತಿದ್ದ ದಂಧೆಗು ಈಗ ಕೊನೆ ಹಾಡಿದ್ದಾರೆ. ಹೆಚ್ಚಾಗಿ ಈ ದಂಧೆ ನೆಡುಸುವ ರಾಕ್ಷಸರ ಬಳಿ ಪಶುವಾಗಿದ್ದ ಕೆಳ ಮಧ್ಯಮವರ್ಗದವರು ಇದರಿಂದ ನಿಟ್ಟುಸಿರು ಬಿಟ್ಟಿದ್ದಾರೆ.


ಹಿಂದೆಯೆಲ್ಲ ಮುಖ್ಯಮಂತ್ರಿಗಳನ್ನು ಭೇಟಿ ಮಾಡಬೇಕೆಂದರೆ ನೂರಾರು ‘ Appointment ‘ಗಳನ್ನೂ ತೆಗೆದುಕೊಂಡು, ಗಂಟೆ ಗಟ್ಟಲೆ ಕಾದರು ಭೇಟಿ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಜನತ ದರ್ಶನದ ಮೂಲಕ CM ಎಂದರೆ ಕೇವಲ ‘Chief Minister ‘ ಅಲ್ಲ ‘Common Man ‘ ಎಂದು ತೋರಿಸಿಕೊಟ್ಟು ಮಾದರಿಯಾಗಿದ್ದಾರೆ. ಜನತ ದರ್ಶನದ ಮೂಲಕ ಬಡವರು,ಅಂಗವಿಕಲರು ಹಾಗು ಸಾಮಾನ್ಯ ಜನರು ಮುಖ್ಯಮಂತ್ರಿ ಅವರನ್ನು ನೇರವಾಗಿ ಭೇಟಿಮಾಡಿ ತಮ್ಮ ಕಷ್ಟಗಳನ್ನೂ ತೋಡಿಕೊಳ್ಳುತ್ತಾರೆ. ಶೇ 50 – 60 ಜನಕ್ಕೆ ಸ್ಥಳದಲ್ಲೇ ತಮ್ಮ ಕಷ್ಟಗಳಿಗೆ ಪರಿಹಾರ ಒದಗಿಸಕೊಡಲಾಗಿದೆ .
ಹೀಗೆ ತಮ್ಮ ಖಾಸಗಿ ಬದುಕಿನ ಕಡೆ ಗಮನ ಕೊಡದೆ ರಾಜ್ಯದ ಜನತೆ ಪರ ಕೆಲಸ ಮಾಡುತ್ತಿರುವ ಕುಮಾರಸ್ವಾಮಿ ಅವರೊಂದಿಗೆ ಕೈ ಜೋಡಿಸಿ ಉತ್ತಮ ಆಡಳಿತ ಕೊಡಲು ಸಹಕರಿಸೋಣ.

One thought on “ರೈತರು ಮತ್ತು ಬಡವರನ್ನು ರಕ್ಷಿಸಲು ಸಿಎಂ ಕುಮಾರಸ್ವಾಮಿ ತೆಗೆದುಕೊಂಡ ದಿಟ್ಟ ನಿರ್ಧಾರಗಳು!!

  1. krish gowdru mandya jds says:

    yes 100% navu nim jothe erthivi

Leave a Reply