ತಮಟೆ ಏಟಿಗೆ ಕುಣಿದು ಕುಪ್ಪಳಿಸಿದ ಅಪ್ಪು

ಆಗಸ್ಟ್-ಸೆಪ್ಟೆಂಬರ್ ಬಂತು ಎಂದರೆ ಗಲ್ಲಿ ಇಂದ ದಿಲ್ಲಿಯವರೆಗೂ ಮೂಲೆ ಮೂಲೆಯಲ್ಲೂ ಸಡಗರ . ಈ ವಿಶೇಷ ಉತ್ಸಾಹಕ್ಕೆ ಕಾರಣ ಗಣೇಶ ಚತುರ್ಥಿ. ಇಡೀ ಭಾರತದಲ್ಲೇ ಪ್ರತಿಯೊಬ್ಬರೂ ಜಾತಿ,ಮತ ಎಂಬ ಭೇದ ಭಾವ ಮಾಡದೇ ಆಚರಿಸುವ ಏಕೈಕ ಹಬ್ಬ. ಭಾರತದವರು ಜಗತ್ತಿನಾದ್ಯಂತ ನಿವಾಸಿಸುತ್ತಿರುವದರಿಂದ ಈಗ ಇದು ಅಂತಾರಾಷ್ಟ್ರೀಯ ಹಬ್ಬವಾಗಿದೆ ಎಂದೇ ಹೇಳಬಹುದು. ಭಾರತ ಬಿಟ್ಟು ಕೆನಡಾ , ಮಾರಿಷಸ್ , ಥೈಲ್ಯಾಂಡ್ , ಸಿಂಗಪೋರ್ , ಕಾಂಬೋಡಿಯಾ , ಬರ್ಮಾ , ಯುನೈಟೆಡ್ ಸ್ಟೇಟ್ಸ್ , ಯುನೈಟೆಡ್ ಕಿಂಗ್ಡಮ್  ಹಾಗು  ಫಿಜಿ ಹೀಗೆ ಎಲ್ಲೆಡೆ ಸಂಭ್ರಮದಿಂದ ಆಚರಿಸಲಾಗುತ್ತದೆ.

ಈ ವಿಶೇಷ ಹಬ್ಬವೆಂದರೆ ನಮ್ಮ ಸ್ಯಾಂಡಲ್ವುಡ್ ತಾರೆಯರಿಗೂ ಬಹಳ ಪ್ರೀತಿ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹಾಗು ರಾಘವೇಂದ್ರ ರಾಜಕುಮಾರ್ ಸದಾಶಿವ ನಗರದಲ್ಲಿ ಗಣೇಶ ಉತ್ಸವದ ಸಮಯದಲ್ಲಿ ತಮಟೆ ಏಟಿಗೆ ಸ್ಟೆಪ್ ಹಾಕಿರುವ ವಿಡಿಯೋ ಈಗ ಸಂಚಲನ ಮೂಡಿಸಿದೆ.
 ಆ ವಿಡಿಯೋದ ಝಲಕ್ :

Leave a Reply