ನ್ಯೂಸ್ ಚಾನೆಲ್’ಗಳ ಮೇಲೆ ಕಿಡಿಕಾರಿದ ಮಾಜಿ ಪ್ರಧಾನಿ ದೇವೇಗೌಡರು,ಏನಂದರು ??

ಮೀಡಿಯಾದವರಿಗೆ ಸದಾ ಬೇಡದಿರುವ ವಿಷಯಗಳನ್ನೂ  ಅಥವಾ ಸಂಬಂಧ ಪಡದ ವಿಷಯಗಳನ್ನು ಸಂಬಂಧ ಪಡದ ವ್ಯಕ್ತಿಗಳಿಗೆ ಕೇಳುವುದು ಒಂದು ಚಾಳಿ. ಇದರ ಬಗ್ಗೆ ಎಲ್ಲರಿಗು ಅಸಮಾಧಾನವಿರುವುದು ಸುಳಲ್ಲ. ಕೆಲವರು ಮೀಡಿಯಾದ ರಿಪೋರ್ಟರ್ ಗಳನ್ನು ನೇರವಾಗಿ ತರಾಟೆಗೆ ತೆಗೆದುಕೊಂಡದ್ದು ಇದೆ.

ಇದೆ ರೀತಿ ಮೀಡಿಯಾದ ಮುಂದೆ ಮೀಡಿಯಾದವರ ಬಗ್ಗೆ ಮಾಜಿ ಪ್ರಧಾನಿ ದೇವೇಗೌಡರು ಗುಡುಗಿದ್ದಾರೆ. ದೇವೇಗೌಡರಿಗೆ ಸಂಬಂಧ ಪಡದ ಪ್ರಶ್ನೆಗಳನ್ನು ಕೇಳಿದಾಗ ” ನಾವು ಇಲ್ಲಿ ಒಂದು ಬ್ಯಾಂಕ್ ನ ಉದ್ಘಾಟನೆಗೆ ಬಂದಿದ್ದೇವೆ. ಇದು ಮುಗಿಯುತಿದ್ದ ಹಾಗೆ  ಬೆಂಗಳೂರಿಗೆ ಮರಳುತ್ತೇವೆ ಎಂದರು. ನಂತರ ಒಬ್ಬ ಪತ್ರಕರ್ತ ಜಾರಕಿಹೊಳಿ ಸಹೋದರರ ಬಗ್ಗೆ ಅವರ ಅಭಿಪ್ರಾಯ ಕೇಳಿದಾಗ, ನೀವು ಅವರನ್ನೇ ಕೇಳಿದರೆ ಉತ್ತಮ್ಮ. ನನಗೆ ಸಂಬಂಧ ಪಡದ ವಿಷಯಗಳ ಬಗ್ಗೆ ನನನ್ನು ಕೇಳಬೇಡಿ ಎಂದು ಹೇಳಿದರು. ನಂತರ ನಿಮ್ಮ ಮೇಲೆ ನನಗೆ ಗೌರವವಿದೆ,ನಾನು ಮೂರು ತಿಂಗಳಿಂದ ಗಮನಿಸುತ್ತಿದ್ದೇನೆ ,ನಿಮಗೆ ಏನು ಕೆಲಸವಿಲ್ಲವಾ? ಕುಮಾರಸ್ವಾಮಿ ಅವರ ಸರಕಾರ  ರೈತರ ಸಾಲ ಮನ್ನಾ ಮಾಡಿದ ಕುರಿತು ಅಥವಾ ಅವರು ಮಾಡಿರುವ ಅಭಿವೃದ್ಧಿಗಳ  ಬಗ್ಗೆ ನಿಮಗೆ ತೋರಿಸಲು ಸಮಯವಿಲ್ಲಾ. ಕೇವಲ ಕುಮಾರಸ್ವಾಮಿ ಅವರ ಸರಕಾರ ಬೀಳುವುದೇ? ಎಂಬುದರ ಬಗ್ಗೆ ಚರ್ಚಿಸುತ್ತೀರಾ ಎಂದು ವ್ಯಂಗ್ಯವಾಗಿ ಅಸಮಾಧಾನ ವ್ಯಕ್ತ ಪಡಿಸಿದರು.

Leave a Reply