ಅರಸೀಕೆರೆಯಲ್ಲಿ ನೂತನವಾಗಿ ತೆಂಗಿನ ನಾರಿನ ಕಾರ್ಖಾನೆ ಉದ್ಘಾಟಿಸಿದ ಸಣ್ಣ ಕೈಗಾರಿಕ ಸಚಿವ ಎಸ್.ಆರ್. ಶ್ರೀನಿವಾಸ್

ಕರ್ನಾಟಕ ರಾಜ್ಯ ತೆಂಗಿನ ನಾರು ಸಹಕಾರ ಮಹಾ ಮಂಡಳಿ ನಿಯಮಿತ ವತಿಯಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಗಳ ಮೂಲಭೂತ ಸೌಕರ್ಯದ ಯೋಜನೆಯಡಿ ನಗರದ ಹೊರವಲಯದಲ್ಲಿನ ಯಾದವಪುರ ರಸ್ತೆಯಲ್ಲಿ ನಿರ್ಮಿಸಲಾಗಿರುವ ತೆಂಗಿನ ನಾರಿನ ತರಬೇತಿ ಮತ್ತು ಉತ್ಪಾದನ ಘಟಕದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಸಣ್ಣ ಕೈಗಾರಿಕಾ ಸಚಿವರಾದ ಎಸ್.ಆರ್.ಶ್ರೀನಿವಾಸ್ ರವರು ಕೃಷಿ ಮೂಲದ ಕಚ್ಚಾ ವಸ್ತುಗಳನ್ನು ಬಳಸಿಕೊಂಡು ಸಣ್ಣ ಕೈಗಾರಿಕೆಯ ಮೂಲಕ ರೈತರಿಗೆ ವರಮಾನ ತರುವ ದೊಡ್ಡ ಮಟ್ಟದ ಯೋಜನೆಯನ್ನು ಮಾಡುವ ಚಿಂತನೆಯನ್ನು ನಡೆಸಿದ್ದೇನೆ. ರೈತರಿಗೆ ಪರ್ಯಾಯ ಆದಾಯ ಮಾಡಿಕೊಡುವುದು ನನ್ನ ಮೂಲ ಉದ್ದೇಶವಾಗಿದೆ ಎಂದು ಹೇಳಿದರು.

ಶಾಸಕರಾದ ಕೆ.ಎಂ. ಶಿವಲಿಂಗೇಗೌಡರು ಮಾತನಾಡಿ ಅರಸೀಕೆರೆ ತಾಲೂಕಿನಿಂದ ಉದ್ಯೋಗಕ್ಕೆಂದು ಸಾವಿರಾರು ಯುವಕ ಯುವತಿಯರು ವಲಸೆ ಹೋಗಿದ್ದಾರೆ. ನಮ್ಮ ಜನ ನಮಲ್ಲೇ ಉತ್ತಮ ಆದಾಯ ಕಂಡುಕೊಳ್ಳವಂತೆ ಮಾಡಬೇಕು ಎಂಬುದು ನನ್ನ ಕನಸು. ಇದಕ್ಕೆ ಮಾನ್ಯ ಸಚಿವರು ಸಹಕರಿಸಬೇಕು. ಅರಸೀಕೆರೆಯ ಮಂಡಳಿಯಲ್ಲಿ ಶೆಡ್ ನಿರ್ಮಾಣ ಮಾಡಿ ಹರಾಜು ಪ್ರಕ್ರಿಯೆ ನಡೆಸಿ, ಆ ಮೂಲಕ ಲಕ್ಷಾಂತರ ರೂಪಾಯಿಗಳ ಭ್ರಷ್ಟಾಚಾರ ಎಸಗಿದ್ದಾರೆ. ಇದರ ಬಗ್ಗೆ ಸಚಿವರು ಸೂಕ್ತ ತನಿಖೆ ನಡೆಸಲು ಆದೇಶಿಸಬೇಕು ಎಂದು ಸಚಿವರಲ್ಲಿ ಮನವಿ ಮಾಡಿಕೊಂಡರು.

ತೆಂಗಿನ ನಾರಿನ ಮಂಡಳಿಯಲ್ಲಿ ದೊಡ್ಡ ದೊಡ್ಡ ಹೆಗ್ಗಣಗಳು ಸೇರಿಕೊಂಡು ಹಣವನ್ನು ಲೂಟಿ ಮಾಡುತ್ತಿವೆ. ಈ ವಿಷಯ ನನ್ನ ಗಮನಕ್ಕೂ ಬಂದಿದ್ದು, ಇದರ ಬಗ್ಗೆ ಸೂಕ್ತ ಕ್ರಮಕ್ಕೆ ಮುಂದಾಗುತ್ತೇನೆ. ಇರುವ ಅಧಿಕಾರವನ್ನು ಸದುಪಯೋಗ ಪಡೆಸಿಕೊಂಡು ಇಲಾಖೆ ಅಭಿವೃದ್ಧಿ ಪಡಿಸಿ ಈ ಮೂಲಕ ಬಡ ಜನರ ಶ್ರೇಯೋಭಿವೃದ್ದಿಗೆ ಶ್ರಮಿಸಿ ಎಂದು ಸಣ್ಣ ಕೈಗಾರಿಕಾ ಸಚಿವ ಎಸ್.ಆರ್ ಶ್ರೀನಿವಾಸ್ ತಿಳಿಸಿದ್ದಾರೆ. ಮೋದಿ ಅವರು ಹಿಟ್ಲರ್ ನಂತೆ ಇಡೀ ಭಾರತವನ್ನು ತಮ್ಮ ಮುಷ್ಟಿಗೆ ತೆಗೆದುಕೊಳ್ಳುವ ಯತ್ನದಲ್ಲಿ ಇದ್ದಾರೆ. ಆದರೆ ಜನರು ದಡ್ಡರಲ್ಲ. ಅದು ಅಷ್ಟು ಸುಲಭವಾಗಿ ನೆರವೇರುವುದಿಲ್ಲ ಎಂದರು.ರಾಜ್ಯದಲ್ಲಿ ಕುಮಾರಸ್ವಾಮಿಯವರ ನೇತೃತ್ವದ ಸರಕಾರ ಏನೇ ಆದರೂ 5 ವರ್ಷಗಳ ಕಾಲ ಆಡಳಿತ ನಡೆಸುವುದರಲ್ಲಿ ಸಂಶಯವಿಲ್ಲ ಎಂಬ ವಿಶ್ವಾಸ ವ್ಯಕ್ತ ಪಡಿಸಿದರು.

Leave a Reply