‘ಆಪರೇಷನ್ ಕಮಲ’ವನ್ನು ತಿರುಗುಬಾಣವನ್ನಾಗಿ ಮಾಡಲು ಸಮ್ಮಿಶ್ರ ಸರಕಾರದ ಸ್ಕೆಚ್

ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರಕಾರವನ್ನು ಪತನಗೊಳಿಸಲು ಬಿಜೆಪಿ ‘ಆಪರೇಷನ್ ಕಮಲ’ ಕಾರ್ಯಾಚರಣೆ ನೆಡೆಸುತ್ತಿರುವ ವಿಷಯ ಹೊಸದೇನಲ್ಲ. ಸುಮಾರ 15 ಕ್ಕೂ ಹೆಚ್ಚು ದಿನಗಳಿಂದ ಇದೆ ಕೆಲಸದಲ್ಲಿ ಬಿಜೆಪಿ ನಾಯಕರು ತಲ್ಲೀನರಾಗಿದ್ದಾರೆ. ಇದರ ಬಗ್ಗೆ ಸಂಪೂರ್ಣ ಮಾಹಿತಿ ಸಂಗ್ರಹಿಸಿರುವ ಸಿಎಂ ಕುಮಾರಸ್ವಾಮಿ ಹಾಗು ಡಿಸಿಎಂ ಪರಮೇಶ್ವರ ಅವರು ಸರಕಾರವನ್ನು ಭದ್ರಗೊಳಿಸಲ್ಲು ತಮ್ಮದೇ ಆದ ರಣತಂತ್ರಗಳನ್ನು ಹೆಣೆದಿದ್ದಾರೆ.

ಬಿಜೆಪಿಯ 5 ಘಟಾನುಘಟಿ ನಾಯಕರ ರಾಜೀನಾಮೆ ಕೊಡಿಸಿ ಅವರನ್ನು ಸಚಿವರನ್ನು ಮಾಡುವ ಆಮಿಷ ಒಡ್ಡುವ ಮೂಲಕ ಕಮಲ ಪಾಳಯಕ್ಕೆ ದೊಡ್ಡ ಆಘಾತವನ್ನೇ ನೀಡಲು ಸಿದ್ದರಾಗಿದ್ದಾರೆ.

ಇನ್ನು ಜೆಡಿಎಸ್ ನಿಂದ ಇಬ್ಬರು ಹಾಗು ಕಾಂಗ್ರೆಸ್ ನಿಂದ ಮೂವರು ಸಚಿವ ಸ್ಥಾನವನ್ನು ತ್ಯಜಿಸಲು ಸಿದ್ಧರಾಗಿದ್ದಾರೆ.
ಸರಕಾರ ಉಳಿಸುಕೊಳ್ಳಲು ಏನು ಬೇಕಾದರೂ ಮಾಡಲು ಸಿದ್ಧ.ಬಿಜೆಪಿಯ ಒಳಗಿನ ವಿದ್ಯಮಾನಗಳು ನಮಗೆ ಬೇಸರತರಿಸಿವೆ.ನಾವು ಕೇವಲ ನಮ್ಮ ವರ್ಚಸ್ಸಿನಿಂದ ಗೆದ್ದು ಬಂದಿದ್ದೇವೆ, ಮುಂದೆ ರಾಜೀನಾಮೆ ನೀಡಿ ಮತ್ತೆ ಚುನಾವಣೆಯಲ್ಲಿ ನಿಂತರು ಗೆಲ್ಲುವ ವಿಶ್ವಾಸವಿದೆ ಎಂದು ಹೇಳಿದ್ದಾರೆ. ರಾಜೀನಾಮೆ ನೀಡಲು ಸಿದ್ದರಾಗಿರುವ ಐವರು ಸಚಿವರ ಪೈಕಿಮೂವರು ಈಗಾಗಲೇ ರಾಜೀನಾಮೆ ಪತ್ರವನ್ನು ಸಂಬಂಧಪಟ್ಟವರಿಗೆ ತಲುಪಿಸಿ, ಇದನ್ನು ರಾಜಕೀಯ ಬೆಳವಣಿಗೆಗೆ ತಕ್ಕಂತೆ ಬಳಸಬಹುದು ಎಂದು ಸಮ್ಮತಿ ನೀಡಿದ್ದಾರೆ.

ಬಿಜೆಪಿಯಲ್ಲಿರುವ 104 ಮಂದಿ ಶಾಸಕರಲ್ಲಿ ಈ ಹಿಂದೆ ಪಕ್ಷಾಂತರ ಮಾಡಿ ಬಿಜೆಪಿ ಸೇರಿರುವ ಜೆಡಿಎಸ್ ಹಾಗು ಕಾಂಗ್ರೆಸ್ ಮೂಲದ ಶಾಸಕರನ್ನು ಸಂಪರ್ಕಿಸಿ ನಡೆಸಿದ ಸಮಾಲೋಚನಾ ಯಶಸ್ವಿಯಾದ ಕಾರಣದಿಂದಲೇ ನಮ್ಮ ಸರಕಾರದ ಉಳಿವಿಕೆಯ ಬಗ್ಗೆ ನಮಗೆ ಯೋಚನೆಯಿಲ್ಲ ಎಂದು ವಿಶ್ವಾಸದ ಮಾತುಗಳನ್ನು ಸಿಎಂ ಹಾಗು ಡಿಸಿಎಂ ಆಡಿದ್ದಾರೆ.
ಆದ್ದರಿಂದ ‘ಆಪರೇಷನ್ ಕಮಲಾ’ವನ್ನು ತಿರುಗುಬಾಣವಾಗಿಸಲು ಸಮ್ಮಿಶ್ರ ಸರಕಾರ ಸಿದ್ಧವಾಗಿದೆ.

Leave a Reply