ಸಣ್ಣ ಕೈಗಾರಿಕಾ ಕ್ಷೇತ್ರದಲ್ಲಿ ಬದಲಾವಣೆ ತರಲು ತಮಿಳು ನಾಡು ಪ್ರವಾಸ ಕೈಗೊಂಡ ಸಚಿವ ಎಸ್.ಆರ್ ಶ್ರೀನಿವಾಸ್

ಎಸ್. ಆರ್ ಶ್ರೀನಿವಾಸ್ ರವರು ಜೆಡಿಎಸ್ ನಿಂದ   ಗುಬ್ಬಿ ಕ್ಷೇತ್ರದ ಶಾಸಕರಾಗಿ  ನಾಲ್ಕನೇ  ಬಾರಿಗೆ ಮೇ 2018 ರಲ್ಲಿ ಮತ್ತೆ ಆಯ್ಕೆಯಾದರು. ನಂತರ 2008, 2013 ಹಾಗು 2018ರಲ್ಲಿ ಜೆಡಿ(ಎಸ್) ಪಕ್ಷದ ಅಭ್ಯರ್ಥಿಯಾಗಿ ಸೋಲಿಲ್ಲದ ಸರದಾರನಾಗಿದ್ದಾರೆ. ಈ ಯಶಸ್ಸಿಗೆ ಕಾರಣ ಅವರು ಗುಬ್ಬಿ ಕ್ಷೇತ್ರದ ಅಭಿವೃದ್ಧಿಗೆ  ಶ್ರಮಿಸಿರುವ ರೀತಿ.
ಶ್ರೀನಿವಾಸ್ ಅವರು  ಗುಬ್ಬಿ ಕ್ಷೇತ್ರದಲ್ಲಿ ಮಾಡಿರುವ ಅನೇಕ ಅಭಿವೃದ್ಧಿ ಕೆಲಸಗಳಿಗೆ ಅಕ್ಕಪಕ್ಕದ ಯಾವ ಕ್ಷೇತ್ರವನ್ನು  ಹೋಲಿಸಲು ಸಾಧ್ಯವಿಲ್ಲ. ಸಣ್ಣ ಕೈಗಾರಿಕೆ ಇಲಾಖೆಯಲ್ಲಿ ಎಂದೂ  ಕಂಡು ಕೇಳರಿಯದಷ್ಟು  ಅಭಿವೃದ್ಧಿ  ಮಾಡಿದ್ದಾರೆ. ಜನರು ಇವರನ್ನು ಪ್ರೀತಿಯಿಂದ ‘ವಾಸಣ್ಣ’ ಎಂದು ಕರೆಯುತ್ತಾರೆ. ಈ ಅಪಾರವಾದ ಪ್ರೀತಿ ಹಾಗು ಜನಪ್ರಿಯತೆಯನ್ನು ಸಂಪಾದಿಸಿರುವುದು  ಕೇವಲ ಅವರು ಗುಬ್ಬಿ ಕ್ಷೇತ್ರಕ್ಕೆ ಹಾಗು ಸಣ್ಣ ಕೈಗಾರಿಕೆ ಕ್ಷೇತ್ರದಲ್ಲಿ ಮಾಡಿರುವ  ಅಭಿವೃದ್ದಿಯಿಂದ ಎಂಬುವುದು ಅಕ್ಷರಶಃ  ಸತ್ಯ.
ನಮ್ಮ ರಾಜ್ಯದಲ್ಲಿ ಉದ್ಯಮಕ್ಕೆ ಹೊಸ ಆಯಾಮ ನೀಡುವ ನಿಟ್ಟಿನಲ್ಲಿ ಹಾಗು ಸಣ್ಣ ಕೈಗಾರಿಕೆ ಕ್ಷೇತ್ರದಲ್ಲಿ ಅಪಾರವಾದ ಅಭಿವೃದ್ಧಿಯನ್ನು  ತರಬೇಕೆಂಬ ಕನಸನ್ನು ಹೊತ್ತಿರುವ ಇವರು, ಶಾಸಕರು ಹಾಗೂ ಅಧಿಕಾರಿಗಳೊಂದಿಗೆ  ತಮಿಳುನಾಡಿನ ಕೊಯಂಬತ್ತೂರು ಜಿಲ್ಲೆಯ ಕೋವಿಲ್ಪಳಯಂ,ಕೊಟ್ಟೂರು,ಸಿಂಗನಲ್ಲೂರು,ಪೊಳಚಿಯ ವಿವಿಧ  ಕಾರ್ಖಾನೆಗಳಿಗೆ ಭೇಟಿ ನೀಡಿ ಅಲ್ಲಿನ  ತೆಂಗಿನ ನಾರನ್ನು ಬಳಸಿ ಹುರಿ, ಮ್ಯಾಟ್ ,ಮ್ಯಾಟಿಂಗ್,ರಬ್ಬರೈಸ್ಡ್ ಕಾಯರ್ ಹಾಸಿಗೆ,ದಿಂಬು,ಕಾಯರ್ ಭೂ ವಸ್ತ್ರವನ್ನು ಬಳಸಿ ರಸ್ತೆ ನಿರ್ಮಾಣದ ಕುರಿತ ಹಲವಾರು ಪ್ರಮುಖ ಮಾಹಿತಿಗಳನ್ನು ಸಂಗ್ರಹಿಸಿದ್ದಾರೆ.ಹಾಗು ಅಲ್ಲಿನ  ಸಣ್ಣ ಕೈಗಾರಿಕಾ ಕಾರ್ಖಾನೆಗಳು ಬಳಸುವ ಯಂತ್ರಗಳನ್ನು, ಅವರ ಕಾರ್ಯವೈಖರಿಯನ್ನು ಗಮನಿಸಿ,  ಅದೇ ಮಾದರಿಯ ವ್ಯವಸ್ಥೆಯನ್ನು ಹಾಗು ತಂತ್ರಜ್ಞಾನವನ್ನು ನಮ್ಮ ರಾಜ್ಯದಲ್ಲೂ  ಅಳವಡಿಸಲು ಈಗ ಕಾರ್ಯಾಚರಣೆ ನೆಡೆಸುತ್ತಿರುವುದು ವಿಶೇಷ.
ಇವರ ನೂತನ ವಿಷಯಗಳನ್ನು ಕಲಿಯಬೇಕೆಂಬ ಹಸಿವು, ಹಾಗು ಅದನ್ನು ವಿಭಿನ್ನ ಮಾದರಿಯಲ್ಲಿ ಅಳವಡಿಸಕೊಳ್ಳುವ ರೀತಿಯನ್ನು ಗಮನಿಸಿದರೆ, ಇವರು ಅತ್ಯಂತ ಕ್ರಿಯಾಶೀಲ ಸಚಿವ ಎಂಬುದು ತಿಳಿಯುತ್ತದೆ. ವಾಸಣ್ಣನವರು ಹೆಜ್ಜೆ ಇಟ್ಟಲ್ಲೆಲ್ಲಾ ಅಭಿವೃದ್ಧಿಗೆ ಕಾರಣರಾಗುತ್ತಾರೆ.
ಇಂತ ನಾಯಕರು ರಾಜಕೀಯದಲ್ಲಿ  ಇನ್ನು ಎತ್ತರದ ಸ್ಥಾನಗಳಿಗೆ ಏರಬೇಕು ಎಂಬುದು ನಮ್ಮ ಆಶಯ.

Leave a Reply