ಯೆಡ್ಡಿಯೂರಪ್ಪನವರಿಗೆ ವಯಸ್ಸಾಗಿದೆ ಹೊರತು ಬುದ್ದಿ ಬಲಿತಿಲ

ಯೆಡ್ಡಿಯೂರಪ್ಪನವರಿಗೆ ವಯಸ್ಸಾಗಿದೆ ಹೊರತು ಬುದ್ದಿ ಬಲಿತಿಲ. ಅವರು ನ್ಯಾಯವಾಗಿ ಗೆಲ್ಲಲ್ಲು ಅಸಮರ್ಥರೆಂದು ಅವರಿಗೆ ಅರಿವಿದ್ದೂ, ಬಲವಂತವಾಗಿ ಕುರ್ಚಿ ಕಬಳಿಸಲು ಪ್ರಯತ್ನಿಸುವುದು ಅವರ ಚಾಳಿ. ಅವರಿಗೆ ಯೋಗ್ಯತೆ ಇದ್ದರೆ ಜನರೇ ಕರೆದು ಪದವಿ ನೀಡುತ್ತಾರೆ ಎಂಬುದು ಅವರ 75 ವರುಷಗಳ ಜೀವನ ಅನುಭವ ಕಲಿಸಿಲ್ಲ.

ಇಷ್ಟು ಕೂಡ ತಾರ್ಕಿಕವಾಗಿ ಯೋಚನೆ ಮಾಡಲು ಆಗದ ಯೆಡಿಯೂರಪ್ಪನವರಿಗೆ ಅಧಿಕಾರದ ದಾಹ ಬಿಟ್ಟರೆ ಜನಸೇವೆ ಮಾಡಬೇಕೆಂಬ ಯೋಚನೆಯೂ ಇಲ್ಲ.

ಈಗ 4 ತಿಂಗಳ ಯಶಸ್ವಿ ಆಡಳಿತ ನೆಡಿಸಿರುವ ಕುಮಾರಸ್ವಾಮಿ, ತಮ್ಮ ಸಾಲಮನ್ನಾದಂತಹ ಜನಪರ ಯೋಜನೆಗಳ ಮೂಲಕ ಜನಮನ ಗೆದಿದ್ದಾರೆ. ಆದ್ದರಿಂದ ‘ಆಪರೇಷನ್ ಕಮಲ’ವನ್ನು ಕಿಂಗ್ ಪಿನ್ ಗಳ ಸಹಾಯದಿಂದ ಪೂರೈಸುವಂತ ನೀಚ ಮಟ್ಟಕ್ಕೆ ಇಳಿದಿರುವ ಯೆಡಿಯೂರಪ್ಪನವರಿಗೆ ಸಿಎಂ ಪದವಿ ಬಿಸಿಲು ಕುದುರೆ ಎಂಬುದರಲ್ಲಿ ಸಂದೇಹವಿಲ್ಲ ಎಂದು ರಾಜ್ಯದ ಜನತೆಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Leave a Reply