ರಾಜ್ಯದ ಜನತೆಗೆ ಮತ್ತೊಂದು ಸಿಹಿ ಸುದ್ದಿ ನೀಡಿದ ಸಿಎಂ

ಸಾಲ ಮನ್ನಾದಂತಹ ಹಲವಾರು ಜನಪರ ಯೋಜನೆಗಳ ಮೂಲಕ ರಾಜ್ಯದ ಜನತೆಯ ಮನಗೆದ್ದಿರುವ ಕುಮಾರಸ್ವಾಮಿ ಅವರು ಈಗ ಹೆಣ್ಣು ಮಕ್ಕಳಿಗೆ ಮತ್ತೊಂದು ಸಿಹಿ ಸುದ್ದಿ ನೀಡಿದ್ದಾರೆ.

ಹೆಣ್ಣು ಮಕ್ಕಳು ಹೆಚ್ಚಾಗಿ ಉದ್ಯೋಗದಲ್ಲಿ ತೊಡಗಿಸಿಕೊಂಡು ಸ್ವಾವಲಂಬಿಯಾಗಿ ಬದುಕಬೇಕೆಂಬ ಉದ್ದೇಶದಿಂದ ಉದ್ಯೋಗಿನಿ ಯೋಜನೆಯನ್ನು ಜಾರಿಗೆ ತರಲಾಗಿತ್ತು. ಈಗ ಈ ಯೋಜನೆಯನ್ನು ಜನರ ಅನುಕೂಲಕ್ಕೆ ತಕ್ಕಂತೆ  ಮತ್ತಷ್ಟು  ವಿಸ್ತರಿಸಲಾಗಿದೆ.

ಮೊದಲು 45 ವರ್ಷದ ಒಳಗಿನ ಮಹಿಳೆಯರಿಗೆ ಮಾತ್ರ ಈ ಯೋಜನೆ ಅನ್ವಯಿಸುತ್ತಿತ್ತು. ಆದರೆ ಈಗ 55 ವರ್ಷದ ಮಹಿಳೆಯರು ಕೂಡ ಈ ಯೋಜನೆಯ ಲಾಭವನ್ನ ಪಡೆಯಬಹದುದು, ಹಾಗೆಯೇ ವಾರ್ಷಿಕ ಆದಾಯ 40 ಸಾವಿರ ಇರುವವರು ಮಾತ್ರ ಈ ಸೌಲಭ್ಯ ಲಭ್ಯವಿತ್ತು ಆದರೆ ಈಗ ವಾರ್ಷಿಕ ಆದಾಯ 1 .5 ಲಕ್ಷ ಇರುವವರು ಕೂಡ ಈ ಯೋಜನೆಯ ಲಾಭವನ್ನ ಪಡೆಯಬಹುದು.
ಮಹಿಳೆಯರು ತಮ್ಮ ಜಿಲ್ಲೆಗಳಲ್ಲಿ ಇರುವ ಮಹಿಳಾ ಅಭಿವೃದ್ಧಿ ನಿಗಮದ ಮೂಲಕ ಈ ಯೋಜನೆ ಕಾರ್ಯಗತವಾಗಲಿದ್ದು, 3 ಲಕ್ಷ ರೂಪಾಯಿ ಸಾಲ ಮತ್ತು 90 ರೂಪಾಯಿಯನ್ನ ಸಬ್ಸಿಡಿ ಪಡೆಯಬಹುದು. ಪಡೆದುಕೊಂಡ  3 ಲಕ್ಷ ರೂಪಾಯಿ ಸಾಲದ ಮೊತ್ತದಲ್ಲಿ  2 ಲಕ್ಷದ 10 ಸಾವಿರ ರೂಪಾಯಿಯನ್ನ ತೀರಿಸಿದರೆ ಸಾಕು, ಉಳಿದ 90 ಸಾವಿರವನ್ನು  ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ಭರಿಸಲಿದೆ.
ವಾಣಿಜ್ಯ ಬ್ಯಾಂಕ್ ಮತ್ತು ಜಿಲ್ಲೆಯ ಸಹಕಾರಿ ಬ್ಯಾಂಕ್ ಗಳ ಮೂಲಕ ಸಾಲವನ್ನ ಒದಗಿಸಲಾಗುವುದು, ಇನ್ನು 55 ವರ್ಷದ ಮಹಿಳೆಯರಿಗೆ ಯಾವ ಯಾವ ಕೆಲಸಗಳಿಗೆ ಈ 3 ಲಕ್ಷ ರೂಪಾಯಿಯನ್ನ ಸಾಲ ಕೊಡುತ್ತಾರೆ ಅಂತ ನೋಡುವುದಾದರೆ, ಬೇಕರಿ, ಮೀನು ಮಾರಾಟ, ದಿನಸಿ ಅಂಗಡಿ, ಉಪ್ಪಿನ ಕಾಯಿ ಮತ್ತು ಅಗರಬತ್ತಿ, ಕಾಫಿ ಮತ್ತು ಟೀ ಅಂಗಡಿ, ಟೈಲೆರಿಂಗ್, ಬ್ಯುಟಿ ಪಾರ್ಲರ್, ಜಿಮ್, ಸ್ವೀಟ್ ಅಂಗಡಿಗಳು, ಹಿಟ್ಟಿನ ಗಿರಣಿ ಚಪ್ಪಲಿ ಮಾರಾಟ, ಫೋಟೋ ಸ್ಟುಡಿಯೋ ಹೀಗೆ 88 ಕ್ಕೂ ಹೆಚ್ಚು ಸಣ್ಣ ಅಂಗಡಿಗಳಿಗೆ ಈ ಸಾಲ ಸೌಲಭ್ಯವನ್ನ ಒದಗಿಸಲಾಗುತ್ತದೆ.

3 thoughts on “ರಾಜ್ಯದ ಜನತೆಗೆ ಮತ್ತೊಂದು ಸಿಹಿ ಸುದ್ದಿ ನೀಡಿದ ಸಿಎಂ

  1. wonderful.congrats c.m.god bless you

Leave a Reply