ನಿರುದ್ಯೋಗಿಗಳ ಪಾಲಿನ ಆಶಾಕಿರಣವಾದ ಸಿಎಂ ಕುಮಾರಸ್ವಾಮಿ

ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದ್ದ ಬೃಹತ್ ಉದ್ಯೋಗ ಮೇಳ ಕಾರ್ಯಕ್ರಮದ ಉದ್ಘಾಟನೆ ಮಾಡಿದ ಕುಮಾರಸ್ವಾಮಿ ಅವರು ನಿರುದ್ಯೋಗಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ಜಿಲ್ಲಾಡಳಿತ, ಕಾರ್ಮಿಕ ಇಲಾಖೆ ಸೇರಿ ಆಯೋಜಿಸಿದ್ದ ಈ ಉದ್ಯೋಗಮೇಳದಲ್ಲಿ ರಾಜ್ಯದ 100ಕ್ಕೂ ಹೆಚ್ಚು ಪ್ರತಿಷ್ಠಿತ ಕಂಪನಿಗಳು ಪಾಲ್ಗೊಂಡಿದ್ದವು. ಈ ಜನಪರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕುಮಾರಸ್ವಾಮಿ  ಅವರು ‘ ಉದ್ಯೋಗ ಸೃಷ್ಟಿ ರಾಜ್ಯ ಸರಕಾರದ ಮೊದಲ ಆಧ್ಯತೆ. ಇದು ಕಾಟಚಾರಿಕ ಉದ್ಯೊಗಮೇಳವಲ್ಲ. ‘ ಎಂದು ತಿಳಿಸಿದರು.

ವಿದ್ಯಾರ್ಹತೆ ಮತ್ತು ಅನುಭವದ ಆಧಾರದ ಮೇಲೆ ನಿರುದ್ಯೋಗಿಗಳಿಗೆ ಉದ್ಯೋಗ ಒದಗಿಸಿಕೊಡುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿತ್ತು.
ಪ್ರಥಮ ಬಾರಿ ಹಾಜರಾಗುವ ಪರಿಶಿಷ್ಟ ಜಾತಿ/ಪಂಗಡದ ಅಭ್ಯರ್ಥಿಗಳಿಗೆ ಕಾರ್ಮಿಕ ಇಲಾಖೆಯ ಮಹತ್ವಾಕಾಂಕ್ಷೆ ಆಶಾದೀಪ ಯೋಜನೆಯಡಿಯಲ್ಲಿ 1000  ಹುದ್ದೆಗಳ ಅವಕಾಶ ಒದಗಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ  4500ಕ್ಕೂ ಹೆಚ್ಚು ಉದ್ಯೋಗ ಆಕಾಂಕ್ಷಿಗಳಲ್ಲಿ ಸುಮಾರು 600 ಮಂದಿಗೆ ಸ್ಥಳದಲ್ಲೇ ಉದ್ಯೋಗ ಕಲ್ಪಿಸಿಕೊಡಲಾಗಿದ್ದು ಅಚ್ಚರಿಯ ವಿಷಯ. ಇನ್ನು 1300ಕ್ಕೂ ಹೆಚ್ಚು ಜನರ ಮಾಹಿತಿ ಸಂಗ್ರಹಿಸಲಾಗಿದ್ದು ಅವರ ವಿದ್ಯಾರ್ಹತೆ ಮೇರೆಗೆ ಉದ್ಯೋಗ ನೀಡಲಾಗುತ್ತದೆ.
ಇಂತಹ ಕಾರ್ಯಕ್ರಮಗಳು ರಾಜ್ಯದಲ್ಲಿ  ಮತ್ತಷ್ಟು ನೆಡೆಯಲಿವೆ ಎಂದು ಕುಮಾರಸ್ವಾಮಿ ಅವರು ಹೇಳಿದ್ದು, ನಿರುದ್ಯೋಗಿಗಳ ಪಾಲಿನ ಆಶಾಕಿರಣವಾಗಿದ್ದರೆ.

One thought on “ನಿರುದ್ಯೋಗಿಗಳ ಪಾಲಿನ ಆಶಾಕಿರಣವಾದ ಸಿಎಂ ಕುಮಾರಸ್ವಾಮಿ

  1. Rafeeqpatel says:

    Utter Karnatakada uvakarigu swalpaudyoga Bhagya kodisi sir include me I am also graduate pass in 2010 but until I am searching a job so please us

Leave a Reply