ಅನ್ನದಾತರ ವಿಷಯಕ್ಕೆ ಬಂದರೆ ಹುಷಾರ್!!

ಮುಗ್ದ ರೈತರಿಗೆ ಕೃಷಿ ಮಾರುಕಟ್ಟೆಯಲ್ಲಿ ಅನ್ಯವಾಗುತ್ತಿರುವ ವಿಷಯ ಎಲ್ಲರಿಗು ಗೊತ್ತೇ ಇದೆ. ಸರಕಾರ ರೈತರಿಗೆ ಅನುಕೂಲವಾಗುವಂಥ ಯೋಜನೆಗಳನ್ನು ಜಾರಿಗೆ ತಂದರು, ವರ್ತಕರ ದೆಸೆಯಿಂದ ಅದು ಅವರಿಗೆ ತಲುಪುತ್ತಿಲ್ಲ. ಈಗ ಇದನ್ನು ತಪ್ಪಿಸಲು ಕುಮಾರಸ್ವಾಮಿ ನೇತೃತ್ವದ ಸರಕಾರ ಮಹತ್ವದ ಹೆಜ್ಜೆ ಇಟ್ಟಿದೆ.
ಸರಕಾರ 2018-2019 ನೇ ಸಾಲಿಗೆ ಕೃಷಿ ಉತ್ಪನ್ನಗಳ ಕನಿಷ್ಠ ಬೆಂಬಲ ಬೆಲೆಯನ್ನು ಗಮನಾರ್ಹವಾಗಿ ಹೆಚ್ಚಿಸಿದ್ದರ ಫಲವನ್ನು ನೇರವಾಗಿ ರೈತರಿಗೆ ಒದಗಿಸುವ ಸದ್ದೇಶವಿದೆ. ಆದರೆ ಕೆಲವು ವರ್ತಕರು ಎಂಎಸ್ ಪಿಗಿಂತ ಕಡಿಮೆ ಬೆಲೆಯಲ್ಲಿ ರೈತರ ಉತ್ಪನ್ನ ಖರೀದಿಸುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿರುವುದರಿಂದ ಎಸಿಎಂಸಿ ಕಾಯ್ದೆ ತಿದ್ದುಪಡಿಗೆ ಸರ್ಕಾರ ಚಿಂತನೆ ನೆಡೆಸಿದೆ.
ಈಗಿರುವ ಎಸಿಎಂಸಿ ಕಾಯ್ದೆಯಲ್ಲಿ ರೈತರಿಗೆ ಮೋಸ ಮಾಡುತ್ತಿರುವ ವರ್ತಕರ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಅಸಾಧ್ಯವಾದ್ದರಿಂದ ಕಾಯ್ದೆಯಲ್ಲಿ ತಿದ್ದುಪಡೆ ಅನಿವಾರ್ಯ.
ಈ ಮೂಲಕ ಅನ್ನದಾತರನ್ನು ವಂಚಿಸುವ ವರ್ತಕರಿಗೆ 1 ವರ್ಷ ಜೈಲು ಶಿಕ್ಷೆ ಹಾಗು 50 ಸವಿರು ರೂ. ವರೆಗೆ ದಂಡ ವಿಧಿಸಬೇಕೆಂದು ನಿರ್ಧಾರ ಕೈಗೊಳ್ಳಲಾಗಿದೆ.
ರಾಜ್ಯ ಸರಕಾರ ಈ ವಿಭಿನ್ನ ಕಾಯ್ದೆ ಜಾರಿಗೆ ತರಲು ಮುಂದಾಗುವ ಮೂಲಕ ದೇಶಕ್ಕೆ ಮಾದರಿಯಾಗಿದೆ.

Leave a Reply