ರೈತರಿಗೆ ಕಿರುಕುಳ ನೀಡುವ ಬ್ಯಾಂಕ್ ಮ್ಯಾನೇಜರ್ ಗಳಿಗೆ ರೇವಣ್ಣ ಖಡಕ್ ವಾರ್ನಿಂಗ್

ರೈತರಿಗೆ ಸಾಲ ಮರುಪಾವತಿಸಬೇಕೆಂದು ನೋಟೀಸ್ ಕೊಟ್ಟರೆ ರಾಷ್ಟ್ರೇಕೃತ ಬ್ಯಾಂಕ್ ನ ವ್ಯವಸ್ಥಾಪಕರು ಜೈಲಿಗೆ ಹೋಗಬೇಕಾಗುತ್ತದೆ ಎಂದು ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ ಅವರು ಎಚ್ಚರಿಸಿದ್ದಾರೆ.
ಬೆಲೆ ಕುಸಿತ, ಅತಿವೃಷ್ಟಿ & ಅನಾವೃಷ್ಟಿ, ದುಬಾರಿ ಪರಕಾರಗಳು, ಅಸ್ಥಿರ ಮಾರುಕಟ್ಟೆ ಹೀಗೆ ಹಲವಾರು ಸಂಕಷ್ಟಗಳನ್ನು ಎದುರಿಸುತ್ತಿರುವ ರೈತನಿಗೆ ಸಾಲದ ಹೊರೆ ಉರಿಯುವ ಬೆಂಕಿಗೆ ತುಪ್ಪ ಸುರಿದಂತೆ. ಒಳ್ಳೆ ಬೆಳೆ, ಆ ಬೆಳೆಗೆ ಉತ್ತಮ ಬೆಲೆಯ ನಿರೀಕ್ಷೆಯಲ್ಲಿ ಸಾಲ ಪಡೆಯುವ ರೈತನಿಗೆ, ಪ್ರಕೃತಿ ಮಾತೆ ಕೈ ಹಿಡಿಯುವುದಿಲ್ಲ. ಇದರಿಂದ ಸಾಲದ ಚಕ್ರವ್ಯೂಹಕ್ಕೆ ಸಿಲುಕಿಕೊಳ್ಳುವ ರೈತನಿಗೆ, ಬೆನ್ನಿಗೆ ಹತ್ತುವ ಬ್ಯಾಂಕ್ ಮ್ಯಾನೇಜರ್ ಎಂಬ ಬೇತಾಳನ ಕಾಟದಿಂದ ಮುಕ್ತಿ ಹೊಂದಲು  ಆತ್ಮಹತ್ಯೆ ಅನಿವಾರ್ಯವಾಗಿ ಬಿಡುತ್ತಿದೆ.
ಹೀಗೆ ವರ್ಷಕ್ಕೆ ಸಾವಿರಾರು ಅನ್ನದಾತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ.
ರೈತರಿಗೋಸ್ಕರ ಸದಾ ಮನ ಮಿಡಿಯುವ ಹೃದಯ ಸಿಎಂ ಕುಮಾರಸ್ವಾಮಿ ಅವರದ್ದು. ಆದ್ದರಿಂದ ಅವರು ಅಧಿಕಾರಕ್ಕೆ ಬಂದ ಕೂಡಲೇ ಸುಮಾರ 40 ಸಾವಿರ ಕೋಟಿ ರೈತರ ಸಾಲ ಮನ್ನಾ ಮಾಡಿದರು.
ಇದು ಸಂಪೂರ್ಣವಾಗಿ ಪರಿಣಾಮಕಾರಿಯಾಗಲು ಕೊಂಚ ಸಮಯ ಹಿಡಿಯುತ್ತದೆ. ಅಲ್ಲಿಯ ತನಕ ಯಾವುದೆ ಬ್ಯಾಂಕ್ ನವರು ರೈತರನ್ನು ಸಾಲ ಮರು ಪಾವಿತಿಸುವಂತೆ ಪೀಡಿಸುವಂತಿಲ್ಲ ಎಂದು  ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ ಅವರು ಎಚ್ಚರಿಸಿದ್ದಾರೆ. ಜಿಲ್ಲಾಧಿಕಾರಿ ಮತ್ತು ಎಸಪಿ ಅವರಿಗೆ ಈಗಾಗಲೇ  ಸ್ಪಷ್ಟ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.

Leave a Reply