ಹಾಸನ ಜನತೆಯಿಂದ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಪ್ರಜ್ವಲ್ ರೇವಣ್ಣರವಿರಿಗೆ ಒತ್ತಾಯ

ಪ್ರಜ್ವಲ್ ರೇವಣ್ಣ ಅವರು ಲೋಕೋಪಯೋಗಿ ಇಲಾಖೆ ಸಚಿವ ಎಚ್.ಡಿ.ರೇವಣ್ಣ ಅವರ ಪುತ್ರ. ಇವರು ಕೇವಲ 28 ವರ್ಷಕ್ಕೆ ಜೆಡಿಎಸ್ ನ ಪ್ರಧಾನ ಕಾರ್ಯದರ್ಶಿ ಹುದ್ದೆಯ ಜವಾಬ್ದಾರಿ ಹೊರೆಸಿಕೊಂಡಿದ್ದಾರೆ. ಇದು ಅವರ ಸಮಾಜ ಸೇವೆ ಕಡೆಗಿನ ಒಲವನ್ನು ತೋರುತ್ತದೆ. ಈಗ ಹಾಸನ ಜನತೆ ಇವರು ಮುಂದಿನ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಬೇಕೆಂದು ಹಂಬಲಿಸುತಿದ್ದಾರೆ.
ಬುಧವಾರ ನಗರದ ಗಣಪತಿ ಪೆಂಡಾಲ್ ನಲ್ಲಿ ಪೂಜೆ ಸಲ್ಲಿಸಿ ಮಾತನಾಡಿದ ಇವರು ” ದೇವೇಗೌಡರು ಈ ರಾಜ್ಯ ಹಾಗು ದೇಶದ ಶಕ್ತಿ. ಅವರೇ ಮತೊಮ್ಮೆ ಸ್ಪರ್ಧಿಸುವುದಾದರೆ ಸ್ಪರ್ಧಿಸಲಿ ಎಂಬುದು ನನ್ನ ಆಸೆ,” ಎಂದರು.
“ದೇವೇಗೌಡರು ಏನು ಸಲಹೆ ನೀಡುತ್ತಾರೋ ಅದನ್ನು ಪಾಲಿಸುತ್ತೇನೆ. ಸಧ್ಯ ನಾನು ಪಕ್ಷ ಬಲಪಡಿಸುವ ಕೆಲಸದಲ್ಲಿ ತೊಡಗಿದ್ದೇನೆ” ಎಂದು ತಿಳಿಸಿದರು.
ಮುಂದಿನ ಲೋಕಸಭೆ ಚುನಾವಣೆಯಲ್ಲಿ ಯುವ ನಾಯಕ ಪ್ರಜ್ವಲ್ ಅವರು ಸ್ಪರ್ಧಿಸುತ್ತಾರೋ ಇಲ್ಲವೋ ಎಂದು ಕಾದು ನೋಡಬೇಕು.

Leave a Reply