ನೊಂದ ಜೀವಗಳಿಗೆ ಧೈರ್ಯ ತುಂಬಿದ ಯುವರಾಜ ನಿಖಿಲ್ ಕುಮಾರಸ್ವಾಮಿ

ಪ್ರಸಿದ್ಧ ನಾಯಕ ನಟ ನಿಖಿಲ್ ಕುಮಾರಸ್ವಾಮಿ ಅವರು ಮಂಡ್ಯ ನಗರದ ಗುತ್ತಲು ರಸ್ತೆ ಯಲ್ಲಿ ನಡೆದ ಭೀಕರ ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳನ್ನು ಭೇಟಿಮಾಡಿದ್ದಾರೆ.

ತಮ್ಮ ತಂದೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಂತೆ ಇವರ ಮನಸ್ಸು ಕೂಡ ಜನರ ಸಂಕಷ್ಟಕ್ಕೆ ಮಿಡಿಯುತ್ತದೆ.
ಈ ಭೀಕರ ರಸ್ತೆ ಅಪಘಾತದಿಂದ ನಾಲ್ವರು ಮೃತಪಟ್ಟಿದ್ದು, 10 ಮಂದಿ ತೀವ್ರ ಗಾಯಗೊಂಡಿದ್ದಾರೆ. ನಿಖಿಲ್ ಅವರು ಆಸ್ಪತ್ರೆಗೆ ತೆರಳಿ ಅವರ ಅರೋಗ್ಯ ವಿಚಾರಿಸಿ ಅವರಿಗೆ ನೆರವು ನೀಡಿದರು.
ನಂತರ ಮೃತ ಪಟ್ಟವರ ಬಗ್ಗೆ ತಿಳಿದು ಮನನೊಂದ ನಿಖಿಲ್ ಅವರು ಜಿಲ್ಲಾ ಪಂಚಾಯತಿ ಸಧಸ್ಯರಾದ ಎಚ್.ಏನ್.ಯೋಗೇಶ್ ಅವರೊಂದಿಗೆ ಮೃತಪಟ್ಟ ರಫಿ, ರಾಹುಲ್, ಶಶಾಂಕ್ ಹಾಗೂ ಗಿರಿಜಮ್ಮ ಅವರ  ಮನೆಗೆ ತೆರಳಿ ಶೋಕಗೊಂಡಿದ್ದ ಅವರ ಕುಟುಂಬ ಸಧಸ್ಯರಿಗೆ ಸಾಂತ್ವನ ಹೇಳಿ ಒಂದು ಲಕ್ಷ ರೂಪಾಯಿ ನಗದು ಪರಿಹಾರ ನೀಡಿದ್ದಾರೆ.
ನಮಗೆ ಆಸ್ತಿ ಬೇಡ, ಏನೂ ಬೇಡ ಮಗ ಬೇಕು ಎಂದು ಮೃತ ಶಶಾಂಕ್ ಕುಟುಂಬಸ್ಥರು ಅಳಲು ತೋಡಿಕೊಂಡು, ನಿಖಿಲ್ ಕಾಲಿಗೆ ಬೀಳಲು ಮುಂದಾದರು. ಆಗ ಅವರನ್ನು ತಡೆದ ನಿಖಿಲ್, ಸಾಂತ್ವಾನ ಹೇಳಿದರು.
ಶಶಾಂಕ್ ಮತ್ತು ರಾಹುಲ್ ಮನೆಯ ಓರ್ವ ಸದಸ್ಯರಿಗೆ ಎಲ್ಲಿಯಾದರೂ ಉದ್ಯೋಗ ಕೊಡಿಸುವ ಭರವಸೆ ನೀಡಿದರು.
ನಿಖಿಲ್ ಅವರು ಕಷ್ಟ ದಲ್ಲಿದವರಿಗೆ ಸಹಾಯ ಮಾಡುವ ಮೂಲಕ ತಂದೆಗೆ ತಕ್ಕ ಮಗನೆಂದು ಸಾಬೀತು ಪಡಿಸಿದ್ದಾರೆ.

2 thoughts on “ನೊಂದ ಜೀವಗಳಿಗೆ ಧೈರ್ಯ ತುಂಬಿದ ಯುವರಾಜ ನಿಖಿಲ್ ಕುಮಾರಸ್ವಾಮಿ

  1. Nice sir future cm of Karnataka

  2. Nikhil is carrying the legacy of his family. .
    It’s in blood of there family. ..

Leave a Reply