ಹಿಂದೂಸ್ತಾನ್ ಟೈಮ್ಸ್ ಲೀಡರ್ಶಿಪ್ ಸಮ್ಮಿಟ್ ಗೆ ಮುಖ್ಯಮಂತ್ರಿ ಕುಮಾರಸ್ವಾಮಿ

ಹಿಂದೂಸ್ತಾನ್ ಟೈಮ್ಸ್ ಅವರು ನಡೆಸುತ್ತಿರುವ 16ನೇ  ಹಿಂದೂಸ್ತಾನ್ ಟೈಮ್ಸ್ ಲೀಡರ್ಶಿಪ್ ಸಮ್ಮಿಟ್ ಎಂಬ ನವ ದೆಹಲಿಯಲ್ಲಿ ನಡೆಯುವ ಎರಡು ದಿನದ ಕಾರ್ಯಕ್ರಮಕ್ಕೆ ಕರ್ನಾಟಕದ ಗೌರವಾನ್ವಿತ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಆಹ್ವಾನಿಸಲಾಗಿದೆ. ಇದು ನಮ್ಮ ನಾಡಿನ ಜನತೆ ಹೆಮ್ಮೆ ಪಡುವ ವಿಷಯ. ಈ ಕಾರ್ಯಕ್ರಮದಲ್ಲಿ ಕ್ರೀಡೆ, ಕಲೆ, ರಾಜಕೀಯ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಅಪಾರ ಸಾಧನೆ ಮಾಡಿದವರನ್ನು  ಆಹ್ವಾನಿಸಲಾಗುತ್ತದೆ. ಪ್ರೇಕ್ಷಕರ ಆಯ್ಕೆ ಪ್ರಕ್ರಿಯೆಯು ಬಹಳ ಕಟ್ಟು ನಿಟ್ಟಾಗಿ ನೆಡೆಯುತ್ತದೆ. ಕೇವಲ ರಾಜಕಾರಣಿಗಳು, ಅಧಿಕಾರಿಗಳು,ಚಿಂತಕರು, ರಾಜತಾಂತ್ರಿಕರು, ಉದ್ಯಮಿಗಳಂತಹ ಸಂವೇಧನಾಶಾಲಿಗಳನ್ನು ಆಯ್ಕೆ ಮಾಡಲಾಗುತ್ತದೆ. ಈ ಸಭೆಯನ್ನು ಉದ್ದೇಶಿಸಿ ನಮ್ಮ ದೇಶವನ್ನು ರೂಪಿಸುವಲ್ಲಿ  ಪ್ರಮುಖ ಪಾತ್ರ ವಹಿಸುವ ನಾಯಕರು ಮಾತನಾಡಿ ದೇಶದ ಭವಷ್ಯದ ಬಗ್ಗೆ ಚರ್ಚೆ ನಡೆಸುತ್ತಾರೆ.

ಈ ಬಾರಿಯ ಕಾರ್ಯಕ್ರಮ ಅಕ್ಟೋಬರ್ 5 ಹಾಗು 6 ರಂದು ನಡೆಯುತ್ತದೆ.’ಭವಿಷ್ಯದ ಮರುಚಿಂತನೆ ‘ ಈ ಬಾರಿ ಚರ್ಚೆ ಆಗುವ ಮುಖ್ಯ ವಿಷಯ.
ಇನ್ನು ಕುಮಾರಸ್ವಾಮಿ ಅವರನ್ನು ಹೊರತುಪಡಿಸಿ ಖ್ಯಾತ ಹಾಲಿವುಡ್ ನಟ-ನಿರ್ಮಾಪಕ-ಸಂಗೀತಗಾರ ವಿಲ್ ಸ್ಮಿಥ್, ಫುಟ್ಬಾಲ್ ದಂತಕಥೆ ಪೀಲೆ, ಗ್ಲೋಬಲ್ ಕಾರ್ಪೊರೇಟ್ ಅಫ್ಫೇರ್ಸ್ ನ ಅಧ್ಯಕ್ಷ ಎಸ್. ಜಯಶಂಕರ್, ಹಾಂಗ್ ಕಾಂಗ್ನ ಬೇಪ್ಟಿಸ್ಟ್ ವಿಶ್ವವಿದ್ಯಾನಿಲಯದ ಜೀನ್ ಪೇಯ್ರ್, ಫೇಸ್ಬುಕ್ ನ ರಿಚರ್ಡ್ ಅಲೆನ್, ನಟ ರಣವೀರ್ ಸಿಂಗ್, ನಟಿ ದೀಪಿಕಾ ಪಡುಕೋಣೆ, ಹೀಗೆ ಹಲವಾರು ಘಟಾನು ಘಟಿಗಳು ಪ್ರಸ್ತುತರಿರುತ್ತಾರೆ.
ಇಂತ ಒಂದು ದೊಡ್ದು ಕಾರ್ಯಕ್ರಮದಲ್ಲಿ ಕುಮಾರಸ್ವಾಮಿ ಅವರನ್ನು ಆಹ್ವಾನಿಸಿರುವುದು ರಾಜ್ಯದ ಪ್ರತಿಯೊಬ್ಬರೂ ಹೆಮ್ಮೆ ಪಡುವ ವಿಷಯ.

Leave a Reply