ಕೊಡಗು ಪುನರ್ನಿರ್ಮಾಣ ಮಾಡಲು ಛಲ ಬಿಡದೆ ಶ್ರಮಿಸುತ್ತಿರುವ ಸಿಎಂ ಹೆಚ್.ಡಿ.ಕುಮಾರಸ್ವಾಮಿ

ರಾಜ್ಯದಲ್ಲಿ ಪ್ರವಾಹಗಳಿಂದ ಉಂಟಾದ ನಷ್ಟವನ್ನು ಆದಷ್ಟು ಬೇಗ ಸರಿ ಪಡಸಿಲು ಕುಮಾರಸ್ವಾಮಿ ಅವರು ಛಲ ಬಿಡದೆ ಶ್ರಮಿಸುತ್ತಿದ್ದಾರೆ.

ಪಶ್ಚಿಮ ಘಟ್ಟದಲ್ಲಿ ಜೂನ್, ಜೂಲೈ ಹಾಗು ಆಗಸ್ಟ್ ತಿಂಗಳಲ್ಲಿ ಧಾರಾಕಾರ ಮಳೆಗಳಿಂದ ಉಂಟಾದ ಪ್ರವಾಹದಿಂದ ರಾಜ್ಯಕ್ಕೆ ಸುಮಾರು  2  ಸಾವಿರ ಕೋಟಿಗೂ ಅಧಿಕ ನಷ್ಟ ಉಂಟಾಗಿದೆ. ಇದರ ಕುರಿತು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ ರಾಜ್ಯದ ವಿವಿಧ ರಸ್ತೆ ಅಭಿವೃದ್ಧಿ ಯೋಜನಾ ಕಾಮಗಾರಿಗಳ ಕುರಿತು ಚರ್ಚಿಸಿದ್ದಾರೆ. ಈ ಚರ್ಚೆಯಲ್ಲಿ ಲೊಕೋಪಯೋಗಿ ಸಚಿವ ಎಹ್.ಡಿ. ರೇವಣ್ಣ ಅವರು ಉಪಸ್ತಿತರಿದ್ದರು.

ಸಧ್ಯದ ಲೆಕ್ಕಾಚಾರದ ಪ್ರಕಾರ ಪ್ರವಾಹ, ಭೂಕುಸಿತದಿಂದ ಸುಮಾರು 2910 ಕಿ.ಮೀ ಗಳ ರಾಷ್ಟೀಯ ಹೆದ್ದಾರಿ/ರಾಜ್ಯ ಹೆದ್ದಾರಿ, ಪ್ರಮುಖ ಜಿಲ್ಲೆ ರಸ್ತೆಗಳು ; 419 ಸೇತುವೆಗಳು ಹಾಗು 72 ಸಾರ್ವಜನಿಕ ಕಟ್ಟಡಗಳು  ನಾಶಗೊಂಡಿವೆ.
ಇದನ್ನು ಪುನರ್ನಿರ್ಮಾಣ ಮಾಡುವ ತ್ರಾಸದಾಯಕ ಕಾರ್ಯವನ್ನು ರಾಜ್ಯ ಸರಕಾರ ಒಂದೇ ನಿರ್ವಹಿಸಲು ಅಸಾಧ್ಯ. ಆದ್ದರಿಂದ ರಾಷ್ಟೀಯ ಹೆದ್ದಾರಿಗಳ ದುರಸ್ತಿಗೆ ಕೇಂದ್ರ ಸರಕಾರ ಆರ್ಥಿಕ ನೆರವು ನೀಡಬೇಕೆಂದು ಕುಮಾರಸ್ವಾಮಿ ಅವರು  ವಿನಂತಿ ಮಾಡಿಕೊಂಡಿದ್ದಾರೆ.
ಅಷ್ಟ್ರಲ್ಲಿ ಕನಿಷ್ಠ ಪಕ್ಷ 250 ಕೋಟಿ ರೂಪಾಯಿಯನ್ನಾದರೂ ರಾಷ್ಟೀಯ ಹೆದ್ದಾರಿಗಳ ದುರಸ್ತಿಗೆ ನೀಡಬೇಕೆಂದು ರಸ್ತೆ ಸಾರಿಗೆ ಹಾಗು ರಾಷ್ಟೀಯ ಹೆದ್ದಾರಿ ಸಚಿವರನ್ನು ಕೋರಿದ್ದಾರೆ.

Leave a Reply