ಐದು ವರ್ಷದಿಂದ ನಿಷ್ಕ್ರಿಯವಾಗಿದ್ದ ಎಸಿಬಿ ಈಗ ಭ್ರಷ್ಟರ ಪಾಲಿಗೆ ಸಿಂಹಸ್ವಪ್ನದಂತೆ ಕಾಡುತ್ತಿದೆ

ಕುಮಾರಸ್ವಾಮಿ ಅವರ ಸರಕಾರ ಆಡಳಿತಕ್ಕೆ ಬಂದಮೇಲೆ ಭ್ರಷ್ಟಾಚಾರ ನಿಗ್ರಹ ದಳಕ್ಕೆ ಸಂಪೂರ್ಣ ಸ್ವತಂತ್ರ ನೀಡುವ ಮೂಲಕ ಭ್ರಷ್ಟ ಅಧಿಕಾರಿಗಳ ನಿದ್ದೆಗೆಡೆಸಿದ್ದಾರೆ.
ಬಿಡಿಎ ಮುಖ್ಯ ಇಂಜಿನಿಯರ್ ಏನ್.ಜಿ ಗೌಡಯ್ಯ ಮತ್ತು ಕೆಐಎಡಿಬಿ ಮುಖ್ಯ ಅಭಿವೃದ್ಧಿ ಅಧಿಕಾರಿ ಟಿ.ಆರ್ ಸ್ವಾಮಿ ಅವರ ಕಾಳಧನದ ಸಾಮ್ರಾಜ್ಯದ ಮೇಲೆ ಎಸಿಬಿ ದಾಳಿ ನೆಡೆಸಿ ಭ್ರಷ್ಟ ಅಧಿಕಾರಿಗಳ ಬೆವರಿಳಿಸಿದೆ.

ಭ್ರಷ್ಟ ಅಧಿಕಾರಿಗಳ ಬಂಧನದ ಸಾಧ್ಯತೆ!? :
ಈ ಭ್ರಷ್ಟ ಅಧಿಕಾರಿಗಳಿಗೆ ಸೇರಿದ 8 ಕಡೆ ದಾಳಿ ನೆಡಿಸಿದ್ದು, ಬೆಂಗಳೂರಿನ 6, ತುಮುಕೂರಿನ 2 ಕಡೆ ದಾಳಿ ನೆಡಿದಿದೆ. ಜಪ್ತಿ ಮಾಡಿರುವ 2 ಸಾವಿರ ಮತ್ತು 500 ರೂ. ಮೌಲ್ಯದ ನೋಟುಗಳನ್ನು ನೋಟು ಎಣಿಕೆ ಯಂತ್ರಗಳ ಮೂಲಕ ಎಣಿಸಲಾಗುತ್ತಿದೆ. ದಾಖಲೆಗಳನ್ನು ಪರಿಶೀಲಿಸಲಾಗುತ್ತಿದ್ದು ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಸಿರುವುದು ದೃಢಪಟ್ಟಿಲ್ಲಿ ಇಬ್ಬರನ್ನು ವಶಕ್ಕೆ ಪಡೆದು ಕೋರ್ಟಿಗೆ ಹಾಜರುಪಡಿಸುವ ಸಾಧ್ಯತೆ ಇದೆ.


ಗೌಡಯ್ಯನ ಸಾಮ್ರಾಜ್ಯ :
ಏನ್.ಜಿ ಗೌಡಯ್ಯ ಬಿಡಿಎಯಿಂದ ನೀಡಲಾಗುವ ವಸತಿ ಸಮುಚ್ಛಯ ನಿರ್ಮಾಣ ಟೆಂಡರ್ ನಲ್ಲಿ ಗುತ್ತಿಗೆದಾರರಿಂದ ಕಮಿಷನ್ ಪಡೆಯುತ್ತಿದ್ದರೆಂಬ ಆರೋಪ ಕೆಲಂಬರುತಿತ್ತು.
ಇದೆ ಹಿನ್ನಲೆಯಲ್ಲಿ ಗೌಡಯ್ಯನ ಮನೆಗೆ ಎಸಿಬಿ ದಾಳಿ ನೆಡೆಸಿದಾಗ ಅವರಿಗೆ ಸಿಕ್ಕ ಭ್ರಷ್ಟ ಹಣ, ಆಸ್ತಿ ವಿವರ, ಆಭರಣಗಳ ಸಂಪೂರ್ಣ ಮಾಹಿತಿ ಇಲ್ಲಿದೆ :
– ಕುಟುಂಬಸ್ಥರ ಹೆಸರಲ್ಲಿ 2 ಮನೆ, 8 ಸೈಟ್, 14 ಫ್ಲಾಟ್, 3 ಕೆ.ಜಿ ಚಿನ್ನ, 10 ಕೆ.ಜಿ ಬೆಳ್ಳಿ ಆಭರಣ ಪತ್ತೆ.
– 3 ಕಾರು, 3 ದ್ವಿಚಕ್ರ ವಾಹನ, 2 ಸಾವಿರ ಮತ್ತು 500 ರೂ. ಮುಖಬೆಲೆಯ 75 ಲಕ್ಷ ರೂ. ನಗದು ಪತ್ತೆ.
– ವಿವಿಧ ಬ್ಯಾಂಕ್ ಗಳಲ್ಲಿ 30 ಲಕ್ಷ ರೂ. ಠೇವಣಿ, ಗೌಡಯ್ಯ ಮಾವನ ಮನೆಯಲ್ಲಿ 4.೫ ಕಿ.ಜಿ ಚಿನ್ನ ಪತ್ತೆ.


ಕೋಟಿ ಸ್ವಾಮಿ ಮನೆಯಲ್ಲಿ ಸಿಕ್ಕಿದ್ದು:
– ಕುಟುಂಬಸ್ಥರು, ಸಂಬಂಧಿಕರ ಹೆಸರಿನಲ್ಲಿ 8 ಮನೆ, 10 ಸೈಟ್, 10 ಎಕರೆ ಕೃಷಿ ಜಮೀನು.
– 1.6 ಕೆ.ಜಿ ಚಿನ್ನಾಭರಣ, 3 ಕಾರು, 4.52 ಕೋಟಿ ರೂ. ನಗದು ಜಪ್ತಿ

ಎಸಿಬಿ ಅಧಿಕಾರಿ ಹೇಳಿದ್ದೇನು ?
ಸರಕಾರಿ ಬಕಾಸುರರ ಮನೆ ದಾಳಿ ಹಿನ್ನಲೆಯಲ್ಲಿ ಮಾತನಾಡಿದ ಐಜಿಪಿ ಚಂದ್ರಶೇಖರ್ “ತನಿಖೆ ನಡೆಯುತ್ತಿದ್ದು, ಎಷ್ಟು ಮೌಲ್ಯದ ವಸ್ತುಗಳು ಸಿಕ್ಕಿವೆ ಎಂದು ಈಗಲೇ ಹೇಳಲು ಸಾಧ್ಯವಿಲ್ಲ. ಸ್ವಾಮಿ ಅವರ 3 ಮನೆ, ಕಚೇರಿ ಮೇಲೆ ದಾಳಿ ನಡೆದಿದೆ. 2 ತಂಡದ 40 ಮಂದಿ ಅಧಿಕಾರಿಗಳಿಂದ ದಾಳಿ ನಡೆಸಲಾಗಿದೆ” ಎಂದು ತಿಳಿಸಿದರು.

Leave a Reply