ನೆರೆ ರಾಜ್ಯಗಳಲ್ಲೂ ಜೆಡಿಎಸ್ ನ ಪ್ರಾಬಲ್ಯ

ಮಾಜಿ ಪ್ರಧಾನಿ ಮಾನ್ಯ ಎಚ್.ಡಿ ದೇವೇಗೌಡ ಅವರ ನೇತೃತ್ವದಲ್ಲಿ ಜನತಾ ದಳ ಪಕ್ಷವು ಕರ್ನಾಟಕದಲ್ಲಿ ಸ್ಥಾಪಿಸಲಾಯಿತು. ಈಗಾಗಲೇ ಕರ್ನಾಟಕದಲ್ಲಿ ಜೆಡಿಎಸ್ ಪಕ್ಷ ರಾಷ್ಟೀಯ ಪಕ್ಷವಾದ ಬಿಜೆಪಿಗೆ ಸೆಡ್ಡು ಹೊಡೆದು  ಬೃಹತ್ ಆಲದ ಮರದಂತೆ ಬೆಳೆದು ನಿಂತಿದೆ. ಸದ್ಯ ಎಚ್.ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿರುವುದರಿಂದ ಜೆಡಿಎಸ್ ಕರ್ನಾಟಕದ ಆಡಳಿತ ಪಕ್ಷವಾಗಿದೆ. ಕರ್ನಾಟಕದಲ್ಲಿ ತನ್ನ ಪ್ರಾಬಲ್ಯ ನಿರೂಪಿಸಿರುವ ಜನತಾ ದಳ ಪಕ್ಷ ನೆರೆಯ ರಾಜ್ಯಗಳಲ್ಲೂ ಏನು ಕಮ್ಮಿ ಇಲ್ಲ.
ಮಹಾರಾಷ್ಟ್ರ 
ಇತ್ತೀಚೆಗೆ ಮಹಾರಾಷ್ಟ್ರ ರಾಜ್ಯದ ಕೊಲ್ಲಾಪುರ ಜಿಲ್ಲೆಯ ಗಡಹಿಂಗ್ಲಜ್ ನಲ್ಲಿ ನಡೆದ ನಗರಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿ ಸ್ವಾತಿ ಕೋರಿ ಅವರು 17 ಸ್ಥಾನಗಳಲ್ಲಿ 11 ಸ್ಥಾನಗಳನ್ನು ಗೆದ್ದು ವಿಜಯ ಪತಾಕೆ ಹರಿಸಿದ್ದಾರೆ. ಅಲ್ಲದೆ ಪಕ್ಷದ ವರಿಷ್ಠ ದೇವೇಗೌಡ ಅವರು ಸ್ವಾತಿ ಕೋರಿ ಅವರು ಉತ್ತಮ ಆಡಳಿತ ನೀಡುತ್ತಿದ್ದಾರೆ ಎಂದು ಶ್ಲಾಘಿಸಿದ್ದಾರೆ.
ಕೇರಳ  
ಇನ್ನು ಕೇರಳಾದಲ್ಲಿ ಮ್ಯಾಥಿವ್ ಟಿ ಥಾಮಸ್ ಅವರು 5 ಸ್ಥಾನಗಳನ್ನು ಗೆಲ್ಲುವ ಮೂಲಕ ನೀರು ಸಂಪನ್ಮೂಲಗಳ ಸಚಿವರಾಗಿ ಆಡಳಿತ ನೀಡುತ್ತಿದ್ದಾರೆ.
 ಜನಪರ ಆಡಳಿತ ನೀಡಿ ಜನರ ಪ್ರೀತಿ, ಅಭಿಮಾನ ಗಳಿಸುತ್ತಿರುವ ಜೆಡಿಎಸ್ ಪಕ್ಷ ರಾಷ್ಟ್ರೀಯ ಪಕ್ಷವಾಗಿ ಬೆಳೆಯಲಿ ಎಂದು ಆಶಿಸೋಣ.

Leave a Reply