ಮೋದಿಯ ಚೀಪ್ ಎಲೆಕ್ಷನ್ ಗಿಮ್ಮಿಕ್ ಬಯಲು

ಅಕ್ಟೋಬರ್ 5  ರಂದು ಕೇಂದ್ರ  ಸರ್ಕಾರ ತೈಲದ  ಬೆಲೆಯನ್ನು 2.5 ರೂ. ಕಡಿತ ಗೊಳಿಸಿತು. ಇದರ ಹಿನ್ನಲೆಯಲ್ಲಿ ಅಮಿತ್ ಶಾ ಅವರು ತೈಲದ ಬೆಲೆ ಇಳಿಕೆ ಮಾಡಿರುವುದು ನರೇಂದ್ರ ಮೋದಿ ಅವರ ಜನಪರ ಕಾಳಜಿ ತೋರುತ್ತದೆ ಎಂದು ಹೇಳಿ ನಗೆ ಪಾಟಲಾಗಿದ್ದಾರೆ. ಸುಮಾರು ಒಂದು ವರುಷದಿಂದ ತೈಲದ ಬೆಲೆ ಅಂದಾಜು 15 ರೂಪಾಯಿಗು ಹೆಚ್ಚು ಏರಿದೆ. ಆದರೆ ಇಳಿಕೆಯಾಗಿರುವುದು ಕೇವಲ 2.5 ರೂ. ಮಾತ್ರ . ಅಲ್ಲಾ ಸ್ವಾಮಿ ತೈಲದ ಬೆಲೆ ಗಗನಕ್ಕೇರಿ ಜನರು ಒದ್ದಾಡುತ್ತಿದ್ದಾಗ ಇಲ್ಲದ ಕಾಳಜಿ, ದಿಢೀರನೆ ಹೇಗೆ ಇವರ ಮನದಲ್ಲಿ ಮೂಡಿತು ಎಂಬುದು ಯಕ್ಷ ಪ್ರಶ್ನೆ. ಇದಕ್ಕೆ ಉತ್ತರ ಇಲ್ಲಿದೆ.
ಇನ್ನು ಕೆಲವೇ ದಿನಗಳಲ್ಲಿ ರಾಜಸ್ತಾನ್, ಛತ್ತೀಸ್ಗಢ, ತೆಲಂಗಾಣ ಸೇರಿದಂತೆ 5 ರಾಜ್ಯಗಳಲ್ಲಿ ವಿಧಾನ ಸಭೆ ಚುನಾವಣೆಗಳು ನಡೆಯಲಿವೆ. ಇದರ ಹಿನ್ನಲೆಯಲ್ಲಿ ಇಷ್ಟು ದಿನ  ಜನರ ಸಂಕಷ್ಟ ನೋಡುತಿದ್ದರು ತುಟಿ ಬಿಗಿದುಕೊಂಡು ಕೂತಿದ್ದ ಮೋದಿ ಅವರಿಗೆ ಜನರ ಮೇಲೆ ದಿಢೀರನೆ ಅನುಕಂಪ ಮೂಡಿದೆ.
ಮೋದಿ ಅವರ ಈ ಚೀಪ್ ಗಿಮ್ಮಿಕ್ ಇದೇನು ಮೊದಲಲ್ಲ
ಕರ್ನಾಟಕದ ವಿಧಾನ  ಸಭಾ ಚುನಾವಣೆ ಮುನ್ನವೂ ಈ ಆಟವನ್ನು ಮೋದಿ ಆಡಿದ್ದರು. ಆದರೆ ಚುನಾವಣೆ ಮುಗಿಯುತ್ತಿದ್ದಂತೆ ಬೆಲೆ ಏರಿಸದೆ ಇದ್ದ ಅಷ್ಟೂ ದಿನದ್ದನ್ನೂ ಸೇರಿಸಿ ಬೆಲೆ ಏರಿಸಲು ಪ್ರಾರಂಭಿಸಿದರು. ಆದರೆ ಬಿಜೆಪಿಯ ಯೋಗ್ಯತೆ ಅರಿತಿದ್ದ ಕರ್ನಾಟಕ ಜನತೆ ಅವರನ್ನು ಅಧಿಕಾರಕ್ಕೆ ಏರಲು ಬಿಡಲಿಲ್ಲ.
ಈಗ ಮತ್ತೆ ಇದೆ ಕುತಂತ್ರವನ್ನು ಮಾಡಲು ಸಜ್ಜಾಗಿರುವ ಮೋದಿ ನೇತೃತ್ವದ ಬಿಜೆಪಿ ಪಕ್ಷಕ್ಕೆ ಮತ ನೀಡಿ ಆಯ್ಕೆ ಮಾಡುವ ರಾಜ್ಯ ನಿಜಕ್ಕೂ ದುರಾದ್ರಷ್ಟಕರ.

Leave a Reply