ಟಿ.ಆರ್.ಪಿ ಗೋಸ್ಕರ ಸುಳ್ಳು ಸುದ್ದಿ ಹಬ್ಬಿಸುತ್ತಿರುವ ಮಾಧ್ಯಮಗಳ ವಿರುದ್ಧ ಕಿಡಿಕಾರಿದ ಜಿ.ಟಿ ದೇವೇಗೌಡ

ತಮ್ಮ ಬೇಳೆ ಕಾಳು ಬೇಯಿಸಿಕೊಳ್ಳಲು ಎಂತ ಕೀಳು ಮಟ್ಟಕ್ಕಾದರೂ ಇಳಿಯಲು ಮಾಧ್ಯಮದವರು ಸಿದ್ದ. ಇವರ ಟಿ.ಆರ್.ಪಿ ಗೋಸ್ಕರ ಮುಗ್ದ ಜನರ ಜೀವನದಲ್ಲಿ ಚಲ್ಲಾಟವಾಡಿರುವ ಎಷ್ಟೋ ಉದಾಹರಣೆಗಳಿವೆ. ಇಲ್ಲ-ಸಲ್ಲದ ಸುದ್ದಿಗಳನ್ನು ಹಬ್ಬಿಸುವುದರಲ್ಲಿ ನಿರತವಾಗಿರುವ ಮಾಧ್ಯಮಗಳು ಪತ್ರಿಕೋದ್ಯಮದ ಮೂಲ ನೈತಿಕತೆಯನ್ನೇ ಮರೆಯುತ್ತಿವೆ.
ಬುಧವಾರ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ದಸರಾ ಉತ್ಸವಕ್ಕೆ ಅಧಿಕೃತ ಅಹ್ವಾನ ನೀಡಲು ಉನ್ನತ ಶಿಕ್ಷಣ ಸಚಿವ ಜಿ.ಟಿ ದೇವೇಗೌಡ ಆಗಮಿಸಿದ್ದರು.
ಇದೇ ವೇಳೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮಗೂ ಹಾಗು ಪ್ರವಾಸೋಧ್ಯಮ ಸಚಿವ ಸಾ.ರಾ ಮಹೇಶ್ ಅವರ ಮಧ್ಯೆ ಮನಸ್ತಾಪವಿದೆ ಎಂದು ಸುಳ್ಳು ಸುದ್ದಿ ಹಬಿಸುತ್ತಿರುವ ಮಾಧ್ಯಮಗಳ ಮೇಲೆ ಕಿಡಿಕಾರಿದರು. ನಮಲ್ಲಿ ಯಾವುದೇ ಅಸಮಾಧಾನ – ಬಿನ್ನಾಭಿಪ್ರಾಯಗಳಿಲ್ಲ. ಆದರೂ ಆಧಾರರಹಿತ ಸುದ್ದಿ ಬಿತ್ತರವಾಗುತ್ತಿರುವುದು ನನಗೆ ತೀವ್ರ ಅಸಮಾಧಾನ ಉಂಟು ಮಾಡಿದೆ.
ಜೆಡಿಎಸ್ ವರಿಷ್ಠ ಹಾಗು ಮಾಜಿ ಪ್ರಧಾನಿ ದೇವೇಗೌಡರು ಹಾಗು ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ನಾವೆಲ್ಲರೂ ಒಟ್ಟಾಗಿದ್ದೇವೆ. ಚಿಕ್ಕವನಾಗಿದ್ದಾಗಲಿಂದಲೂ ನನಗೆ ಹಿತ ಶತ್ರುಗಳು ಹೆಚ್ಚು ಎಂದು ಮಾಧ್ಯಮದವರನ್ನು ವ್ಯಾಗ್ಯ ಮಾಡಿ ತಮ್ಮ ಅಸಮಾಧಾನವನ್ನು ವ್ಯಕ್ತ ಪಡಿಸಿದರು.

Leave a Reply